Bengaluru : ಅಂತು ಇಂತು ಕಾಂಗ್ರೆಸ್ (Congress) ಸರ್ಕಾರದ ಮನೆ ಯಜಮಾನಿಗೆ 2000 ರೂ. ನೀಡುವ ಗೃಹ ಲಕ್ಷ್ಮಿ ಯೋಜನೆ (Gruhalakshmi scheme start date) ಜಾರಿಗೆ ಇದೀಗ ಮುಹೂರ್ತ
ಕೂಡಿಬಂದಿದೆ. ರಾಜ್ಯ ಸರ್ಕಾರವು ಇದೇ ಜುಲೈ 14 ರಿಂದ ಗೃಹ ಲಕ್ಷ್ಮಿ ಜಾರಿಗೆ ಪ್ಲ್ಯಾನ್ ಮಾಡಿಕೊಂಡಿದೆ, ಗೃಹಲಕ್ಷ್ಮಿ ಯೋಜನೆ ಲಾಂಚ್ ಕಾರ್ಯಕ್ರಮವನ್ನು ವಿಧಾನ ಸೌಧದ (Vidhana Soudha)
ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಸಲು ಚಿಂತನೆಗಳು ನಡೆದಿವೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 10 ರಿಂದ 15 ಮನೆ ಯಜಮಾನಿಯನ್ನು ಗುರುತಿಸಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ಸಾಂಕೇತಿಕವಾಗಿ ಹಣ ವರ್ಗಾವಣೆ ಮಾಡಲು ಮುಂದಾಗಿದೆ.
ಫಲಾನುಭವಿಗಳಿಗೆ ಅರ್ಜಿ ಸಲ್ಲಿಕೆಗೆ ಅನುಸಾರವಾಗಿ ಹಣ ವರ್ಗಾವಣೆಯನ್ನು ನಿರಂತರವಾಗಿ ಮಾಡುವ ಬಗ್ಗೆಯೂ ಯೊಜನೆ ಹಾಕಿದ್ದು, ಇದಕ್ಕಾಗಿ ಇನ್ನಿತರ ಡಿಜಿಟಲ್ ಪೋರ್ಟಲ್ (Digital Portal)ಗಳನ್ನು
ಮತ್ತು ವಿಶೇಷ ಅಪ್ (APP) ಕೂಡ (Gruhalakshmi scheme start date) ಸಿದ್ದಪಡಿಸಲಾಗಿದೆ.
ಗೃಹಲಕ್ಷ್ಮೀ’ಗಾಗಿ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಿದ ಸರ್ಕಾರ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಸರ್ಕಾರದಿಂದ ಗೃಹ ಲಕ್ಷ್ಮೀ ಯೋಜನೆಗೆ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡಲಾಗುತ್ತೆ ಎಂದು ಸ್ವತಃ ಹೇಳಿದ್ದಾರೆ.
ಅದರಂತೆ ಇದೀಗ ಸರ್ಕಾರವೇ ಪ್ರತ್ಯೇಕ ಆ್ಯಪ್ ಅನ್ನು ಸರ್ವರ್ ಸಮಸ್ಯೆಗೆ ಕಡಿವಾಣ ಹಾಕಲು ಸಿದ್ಧಪಡಿಸಿದ್ದು, ಅಧಿಕೃತವಾಗಿ ಬಿಡುಗಡೆ ಮಾಡುವುದೊಂದೇ ಬಾಕಿ ಆಗಿದೆ . ಗೂಗಲ್ ಪ್ಲೇ ಸ್ಟೋರ್ (Google Play Store)
ಮತ್ತು ಆ್ಯಪಲ್ ಸ್ಟೋರ್ನಲ್ಲಿ(Apple Store) ಸಹ ಈ ಆ್ಯಪ್ ಲಭ್ಯವಾಗಲಿದೆ. ಇನ್ನು ಅರ್ಜಿ ಸಲ್ಲಿಕೆಗೆ ಸೇವಾಸಿಂಧು ವೆಬ್ಸೈಟ್ನಲ್ಲೂ (Sevasindhu Website) ಅವಕಾಶ ನೀಡಲಾಗುತ್ತದೆ.

ಗೃಹಲಕ್ಷ್ಮೀ’ಯ 2,000ಕ್ಕೆ ಏನು ಮಾಡಬೇಕು?
ಆಪಲ್ಮನೆಯೊಡತಿಯ ಹೆಸರು BPL, APL ಅಥವಾ ಅಂತ್ಯೋದಯ ಕಾರ್ಡ್ನಲ್ಲಿ (Anthyodaya Card) ಇರಬೇಕು. ಈ ಯೋಜನೆ ಒಬ್ಬರಿಗೆ ಮಾತ್ರ ಒಂದು ಮನೆಯಲ್ಲಿ ಯೋಜನೆ ಅನ್ವಯವಾಗಲಿದೆ.
ಕಡ್ಡಾಯವಾಗಿ ಯಜಮಾನಿಯ ಮೊಬೈಲ್ ನಂಬರ್ ಬೇಕಾಗುತ್ತದೆ. ಆ್ಯಪ್ ಮೂಲಕ ಅಥವಾ ಬೆಂಗಳೂರು ಒನ್ (Bengaluru One) ಮೂಲಕ ಅರ್ಜಿ ಸಲ್ಲಿಸಬಹುದು. ಮೊಬೈಲ್ ನಂ. ಅವರ ಬ್ಯಾಂಕ್
ಖಾತೆಯೊಂದಿಗೆ ಲಿಂಕ್ ಆಗಿರಬೇಕು. ಯಜಮಾನಿ ಅಥವಾ ಅವಳ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು (Income Tax Payer).ಜಿಎಸ್ಟಿ ರಿರ್ಟನ್ಸ್ (GST Returns) ಅನ್ನು ಮನೆ ಒಡತಿಯ
ಯಜಮಾನ ಮಾಡಿರಬಾರದು ಎಂಬ ಮಾನದಂಡಗಳನ್ನು ಅನುಸರಿಸಲಾಗಿದೆ.
ಇದನ್ನೂ ಓದಿ : ನಂದಿನಿ ಹಾಲಿನ ದರ ಲೀಟರಿಗೆ 5 ರೂ. ಏರಿಕೆಗೆ ಬೇಡಿಕೆ ಇಟ್ಟಿದ್ದೇವೆ : KMF ನೂತನ ಅಧ್ಯಕ್ಷ ಭೀಮಾ ನಾಯ್ಕ್
ಈಗಾಗಲೇ ಭರ್ಜರಿ ರೆಸ್ಪಾನ್ಸ್ ಗೃಹ ಜ್ಯೋತಿ ಯೋಜನೆಗೆ ವ್ಯಕ್ತವಾಗ್ತಿದೆ. ಏಕಕಾಲಕ್ಕೆ ರಾಜ್ಯಾದ್ಯಂತ ಜನ ಅರ್ಜಿ ಸಲ್ಲಿಸಲು ಮುಗಿಬಿದ್ದ ಪರಿಣಾಮ 3-4 ದಿನ ಸರ್ವರ್ ಸಮಸ್ಯೆಯಿಂದ ಜನ ಪರದಾಡುವಂತಾಯ್ತು.
ಇದನ್ನ ಅರಿತುಗೊಂಡ ಸರ್ಕಾರ , ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಸಮಸ್ಯೆ ಆಗಬಾರದು ಎಂದು ಯೋಜನೆ ಮಾಡಿದೆ. ಅದರಂತೆ ಪ್ರತ್ಯೇಕವಾಗಿ ಅಪ್ಲಿಕೇಷನ್ (Application) ಅನ್ನು
ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಲು ಸಿದ್ಧಪಡಿಸಲಾಗಿದೆ. ಈ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ (D.K Shiva Kumar) ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದೇ ಕಾರಣಕ್ಕೆ ಗೃಹಲಕ್ಷ್ಮೀ ಯೋಜನೆ
ವಿಳಂಬವಾಗ್ತಿರೋದಾಗಿ ಮಾಹಿತಿ ನೀಡಿದ್ದರು.
ರಶ್ಮಿತಾ ಅನೀಶ್