ಬೆಂಗಳೂರು/ಬೆಳಗಾವಿ : ಕಾಂಗ್ರೆಸ್ (Gruhalakshmi yojana launch Belagavi) ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಯು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು
ನೀಡುತ್ತದೆ ಮತ್ತು ಈ ಯೋಜನೆಯು ವಿಶಿಷ್ಟ ರೀತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ನಾಡಿನ ಶಕ್ತಿ ಕೇಂದ್ರವಾದ ಮೆಜೆಸ್ಟಿಕ್ (Mejestic) ನಿಂದ ವಿಧಾನಸೌಧದವರೆಗೆ (Vidhana soudha) ಸಂಚರಿಸುವ
ರೂಟ್ ನಂ.43 ಬಸ್ ನಲ್ಲಿ ಕಂಡಕ್ಟರ್ ಆಗಿ ಟಿಕೆಟ್ ವಿತರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಜೂನ್ 11ರ ಭಾನುವಾರದಂದು ಈ ಹೊಸ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ತವರು ಜಿಲ್ಲೆ ಬೆಳಗಾವಿಯಲ್ಲಿ (Belagavi) ಆಗಸ್ಟ್ 17 ಅಥವಾ 18 ರಂದು
ಗೃಹ ಲಕ್ಷ್ಮಿ ಯೋಜನೆಗೆ (Gruha Lakshmi Yojana) ಚಾಲನೆ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಜಿಲ್ಲೆಯನ್ನು ಬಿಡುಗಡೆಗೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣವಿದೆ.
ಬೆಳಗಾವಿ ಐತಿಹಾಸಿಕವಾಗಿ ಕಾಂಗ್ರೆಸ್ಸಿಗೆ ಅದೃಷ್ಟದ ಜಿಲ್ಲೆಯಾಗಿದೆ ಮತ್ತು ಈ ಜಿಲ್ಲೆಯಿಂದಲೇ ಕಾಂಗ್ರೆಸ್ ತನ್ನ ವಿಧಾನಸಭಾ ಚುನಾವಣಾ (Assembly Election) ಪ್ರಚಾರವನ್ನು ಪ್ರಾರಂಭಿಸಿತು.
ಇದು ಅಂತಿಮವಾಗಿ ಅವರ ಅಭೂತಪೂರ್ವ ಗೆಲುವಿಗೆ ಕಾರಣವಾಯಿತು. ಬೆಳಗಾವಿಯಿಂದಲೂ ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆಗೆ (Praja Dhvani Yatra) ಚಾಲನೆ ನೀಡಿ ಯಾತ್ರೆಯನ್ನು ಯಶಸ್ವಿಯಾಗಿ
ಆರಂಭಿಸಿ ಸಕ್ಸಸ್ ಆಗಿತ್ತು.

ರಾಹುಲ್ ಗಾಂಧಿ(Rahul Gandhi) ಅವರು ಯುವನಿಧಿ ಗ್ಯಾರಂಟಿ ಸಹ ಬೆಳಗಾವಿಯಲ್ಲೇ ಘೋಷಣೆ ಮಾಡಿದ್ದರು.ಇದೀಗ ಬೆಳಗಾವಿಯಲ್ಲೇ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ.
ಉತ್ತರ ಕರ್ನಾಟಕ (Uttara Karnataka) ಭಾಗದ ಹಲವು ಜಿಲ್ಲೆಗಳಿಗೆ ಬೆಳಗಾವಿಯಿಂದ ಚಾಲನೆ ನೀಡಿದರೆ (Gruhalakshmi yojana launch Belagavi) ಸಂದೇಶ ರವಾನೆಯಾಗಲಿದೆ.
ಇದನ್ನು ಓದಿ: ಸರ್ಕಾರ ಮದ್ಯ ದರ ಹೆಚ್ಚಳ ಮಾಡಿಲ್ಲ, ಬಿಯರ್ ಕಂಪೆನಿಗಳಿಂದಲೇ ಬೆಲೆ ಏರಿಕೆ: ಅಬಕಾರಿ ಇಲಾಖೆ ಸ್ಪಷ್ಟನೆ
ಈ ಮೂಲಕವಾಗಿ ಕಾಂಗ್ರೇಸ್ ಪಕ್ಷವು ಮುಂದಿನ ಲೋಕಸಭೆಯ ಚುನಾವಣೆ (Lok Sabha Election) ದೃಷ್ಟಿಯಿಂದಲೂ ಹೊಸ ಸಂದೇಶ ನೀಡಿದಂತಾಗುತ್ತದೆ. ಅತಿ ಹೆಚ್ಚಿನ ಸೀಟುಗಳನ್ನು ಗೆದ್ದಿರುವ ಜಿಲ್ಲೆ
ಬೆಂಗಳೂರು (Bengaluru) ಬಿಟ್ಟರೆ ಬೆಳಗಾವಿಯಾಗಿದೆ ಹೀಗಾಗಿ ಗೃಹ ಲಕ್ಷ್ಮಿ ಯೋಜನೆಯನ್ನು ಬೆಳಗಾವಿಯಿಂದ ಲಾಂಚ್ ಮಾಡಿದರೆ ಕನಿಷ್ಟ 8ರಿಂದ 10 ಜಿಲ್ಲೆಗಳ
ಸಂಘಟನೆಗೆ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದಾಗಿದೆ.
ರಶ್ಮಿತಾ ಅನೀಶ್