• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಜಿಎಸ್‌ಟಿ ಇಳಿಕೆಯಿಂದ ವಾಹನ ಖರೀದಿಯಲ್ಲಿ ಏರಿಕೆ: ಬೆಂಗಳೂರಿನಲ್ಲಿ ಹೆಚ್ಚಾಗಲಿದೆ ಟ್ರಾಫಿಕ್ ಸಮಸ್ಯೆ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಜಿಎಸ್‌ಟಿ ಇಳಿಕೆಯಿಂದ ವಾಹನ ಖರೀದಿಯಲ್ಲಿ ಏರಿಕೆ: ಬೆಂಗಳೂರಿನಲ್ಲಿ ಹೆಚ್ಚಾಗಲಿದೆ ಟ್ರಾಫಿಕ್ ಸಮಸ್ಯೆ
0
SHARES
12
VIEWS
Share on FacebookShare on Twitter
  • ಜಿಎಸ್‌ಟಿ ಇಳಿಕೆಯಿಂದ (GST cut worsens Bengaluru traffic) ಬೈಕ್ ಮತ್ತು ಕಾರು ಖರೀದಿ ಏರಿಕೆ
  • ಅಕ್ಟೋಬರ್ ತಿಂಗಳಲ್ಲೇ 89 ಸಾವಿರಕ್ಕೂ ಹೆಚ್ಚು ಹೊಸ ವಾಹನ ನೋಂದಣಿ
  • ಪ್ರತಿದಿನ 1000ಕ್ಕೂ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ

Bengaluru: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್‌ 15ರಂದು ವಾಹನಗಳ ಮೇಲಿನ ಜಿಎಸ್‌ಟಿ (GST cut worsens Bengaluru traffic) ದರವನ್ನು ಕಡಿಮೆ ಮಾಡುವ ಘೋಷಣೆ ಮಾಡಿದ ನಂತರ, ದೇಶದಾದ್ಯಂತ ವಾಹನ ಖರೀದಿ ಏರುಗತಿಯಲ್ಲಿ ಸಾಗುತ್ತಿದೆ.

ಸೆಪ್ಟೆಂಬರ್‌ 22ರಿಂದ ನೂತನ ಜಿಎಸ್‌ಟಿ ದರ ಜಾರಿಯಾದ ಬಳಿಕ ವಿಶೇಷವಾಗಿ ಕರ್ನಾಟಕದಲ್ಲಿ ವಾಹನ ಮಾರಾಟದಲ್ಲಿ ದಾಖಲೆಮಟ್ಟದ ಏರಿಕೆ ಕಂಡುಬಂದಿದೆ. 350 ಸಿಸಿ ವರೆಗಿನ ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು ಶೇ. 28ರಿಂದ 18ಕ್ಕೆ ಇಳಿಸಲಾಗಿದೆ.

GST cut worsens Bengaluru traffic

ಪೆಟ್ರೋಲ್‌ 1200 ಸಿಸಿ ವರೆಗೆ ಮತ್ತು ಡೀಸೆಲ್‌ 1500 ಸಿಸಿ ವರೆಗೆ ಇರುವ ಕಾರುಗಳ ಮೇಲೂ ಜಿಎಸ್‌ಟಿ (GST cut worsens Bengaluru traffic) ಕಡಿತ ಜಾರಿಯಾಗಿದೆ. ಇದರ ಪರಿಣಾಮವಾಗಿ, ಮಧ್ಯಮ ವರ್ಗದ ಜನರು ಹೊಸ ವಾಹನ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಇನ್ನು ಜಿಎಸ್‌ಟಿ ಪರಿಷ್ಕರಣೆಯ ನಂತರ ಅಕ್ಟೋಬರ್‌ ತಿಂಗಳಲ್ಲಿ ಕರ್ನಾಟಕದಲ್ಲಿ ವಾಹನ ನೋಂದಣಿ ದುಪ್ಪಟ್ಟಾಗಿದೆ.

ಆಗಸ್ಟ್‌ ತಿಂಗಳಲ್ಲಿ 1,61,214 ಹೊಸ ವಾಹನಗಳು ನೋಂದಣಿಯಾಗಿದ್ದರೆ, ಅಕ್ಟೋಬರ್‌ನಲ್ಲಿ ಈ ಸಂಖ್ಯೆ 2,52,420ಕ್ಕೆ ಏರಿಕೆಯಾಗಿದೆ.

ಅಂದರೆ ಪ್ರತಿದಿನ ಸರಾಸರಿ 10,517 ವಾಹನಗಳು ರಸ್ತೆಗಿಳಿಯುತ್ತಿವೆ. ಬೆಂಗಳೂರು ನಗರದಲ್ಲೇ ಆಗಸ್ಟ್‌ನಲ್ಲಿ 68,446 ವಾಹನಗಳು ನೋಂದಣಿಯಾಗಿದ್ದರೆ, ಅಕ್ಟೋಬರ್‌ನಲ್ಲಿ ಅದು 89,014ಕ್ಕೆ ಏರಿದೆ. ಅಂದರೆ ದಿನಕ್ಕೆ ಸುಮಾರು 3,748 ಹೊಸ ವಾಹನಗಳು ನಗರದ ರಸ್ತೆಗಿಳಿಯುತ್ತಿವೆ.

ಸಾರಿಗೆ ಇಲಾಖೆಯ ಅಧಿಕಾರಿಗಳ ಪ್ರಕಾರ, ಇದು ಇತ್ತೀಚಿನ ವರ್ಷಗಳಲ್ಲಿ ದಾಖಲೆಮಟ್ಟದ ಹೆಚ್ಚಳವಾಗಿದೆ.

ಈ ಹೆಚ್ಚಳದಿಂದಾಗಿ ಬೆಂಗಳೂರಿನ ಟ್ರಾಫಿಕ್ (Traffic) ಸಮಸ್ಯೆ ಮತ್ತಷ್ಟು ಗಂಭೀರವಾಗುವ ಭೀತಿ ವ್ಯಕ್ತವಾಗಿದೆ.

ಈಗಾಗಲೇ ಟ್ರಾಫಿಕ್ ಜಾಮ್‌ನಿಂದ ನರಳುತ್ತಿರುವ ನಗರದಲ್ಲಿ ಹೊಸ ವಾಹನಗಳ ಪ್ರವೇಶದಿಂದ ಟ್ರಾಫಿಕ್ ಒತ್ತಡ ಹೆಚ್ಚಾಗುವುದು ಅನಿವಾರ್ಯ.

ವಾಹನ ಸವಾರರು ಜಿಎಸ್‌ಟಿ (GST) ಕಡಿತದಿಂದ ವಾಹನ ಖರೀದಿ ಸುಲಭವಾಯಿತಾದರೂ, ರಸ್ತೆಯ ಮೇಲೆ ಓಡಾಡುವ ವಾಹನಗಳ ಸಂಖ್ಯೆಯು ಅನೇಕ ಪಟ್ಟು ಹೆಚ್ಚಾಗಿದ್ದು, ಟ್ರಾಫಿಕ್‌ನಿಂದ ಗಂಟೆಗಟ್ಟಲೆ ಸಿಲುಕುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಜ್ಞರು ಸರ್ಕಾರವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡದಿದ್ದರೆ, ಮುಂದಿನ ತಿಂಗಳುಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಕ್ಕಟ್ಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ, ಜಿಎಸ್‌ಟಿ ಇಳಿಕೆಯಿಂದ ವಾಹನ ಉದ್ಯಮಕ್ಕೆ ಉತ್ಸಾಹದ ವಾತಾವರಣ ನಿರ್ಮಾಣವಾದರೂ, ನಗರ ಮೂಲಸೌಕರ್ಯ ಮತ್ತು ಟ್ರಾಫಿಕ್ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಸೃಷ್ಟಿಯಾಗಿದೆ.

ಸಿಲಿಕಾನ್ ಸಿಟಿಯಾದ ಬೆಂಗಳೂರಿನಲ್ಲಿ ಹೊಸ ವಾಹನಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ವಾಯುಮಾಲಿನ್ಯ ಮತ್ತು ರಸ್ತೆ ದಟ್ಟಣೆ ಸಮಸ್ಯೆಗಳು ಗಂಭೀರವಾಗುವ ಭೀತಿ ಉಂಟಾಗಿದೆ.

ತಜ್ಞರು ವಾಹನ ಖರೀದಿಗೆ ಪಾರ್ಶ್ವವಾಗಿ ಸಾರ್ವಜನಿಕ ಸಾರಿಗೆ, ಮೆಟ್ರೋ ಮತ್ತು ಕಾರ್‌ಪೂಲಿಂಗ್‌ ವ್ಯವಸ್ಥೆಗಳನ್ನು ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನು ಓದಿ : ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿ ಪ್ರಕಟಿಸಿದ ಪರೀಕ್ಷಾ ಮಂಡಳಿ
Tags: bengaluruGSTpurchasetrafficvehicle

Related News

ವಿಶ್ವಾದ್ಯಂತ ಗೂಗಲ್ ಸೇವೆಯಲ್ಲಿ ವ್ಯತ್ಯಯ: ಕೋಟ್ಯಂತರ ಇಂಟರ್‌ನೆಟ್ ಬಳಕೆದಾರರಿಗೆ ಶಾಕ್,#GoogleDown ಟ್ರೆಂಡ್
ದೇಶ-ವಿದೇಶ

ವಿಶ್ವಾದ್ಯಂತ ಗೂಗಲ್ ಸೇವೆಯಲ್ಲಿ ವ್ಯತ್ಯಯ: ಕೋಟ್ಯಂತರ ಇಂಟರ್‌ನೆಟ್ ಬಳಕೆದಾರರಿಗೆ ಶಾಕ್,#GoogleDown ಟ್ರೆಂಡ್

May 12, 2026
ಸತತ 2ನೇ ದಿನವೂ ಕುಸಿದ ಸೆನ್ಸೆಕ್ಸ್‌-ನಿಫ್ಟಿ : ಸೆನ್ಸೆಕ್ಸ್ 650 ಪಾಯಿಂಟ್ಸ್‌ ಡೌನ್, ನಿಫ್ಟಿ 23,700 ಅಂಕಗಳ ಇಳಿಕೆ
ದೇಶ-ವಿದೇಶ

ಸತತ 2ನೇ ದಿನವೂ ಕುಸಿದ ಸೆನ್ಸೆಕ್ಸ್‌-ನಿಫ್ಟಿ : ಸೆನ್ಸೆಕ್ಸ್ 650 ಪಾಯಿಂಟ್ಸ್‌ ಡೌನ್, ನಿಫ್ಟಿ 23,700 ಅಂಕಗಳ ಇಳಿಕೆ

May 12, 2026
ದೇಶದ ಅಭಿವೃದ್ಧಿಗೆ ಮಿತವ್ಯಯ ಮಂತ್ರ: ಚಿನ್ನ, ಇಂಧನ ಬಳಕೆ ಕಡಿಮೆ ಮಾಡಿದರೆ ಆರ್ಥಿಕತೆಗೆ ಬಲ
ದೇಶ-ವಿದೇಶ

ದೇಶದ ಅಭಿವೃದ್ಧಿಗೆ ಮಿತವ್ಯಯ ಮಂತ್ರ: ಚಿನ್ನ, ಇಂಧನ ಬಳಕೆ ಕಡಿಮೆ ಮಾಡಿದರೆ ಆರ್ಥಿಕತೆಗೆ ಬಲ

May 12, 2026
ಜೈಲು ಅಕ್ರಮಗಳಿಗೆ ಡಿಜಿಟಲ್ ಬ್ರೇಕ್: ಕೈದಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಗಾ ಇಡಲು ‘ಪ್ರಿಸನರ್ಸ್ ಟ್ರ್ಯಾಕಿಂಗ್’ ಸಿಸ್ಟಮ್ ಜಾರಿ
ಪ್ರಮುಖ ಸುದ್ದಿ

ಜೈಲು ಅಕ್ರಮಗಳಿಗೆ ಡಿಜಿಟಲ್ ಬ್ರೇಕ್: ಕೈದಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಗಾ ಇಡಲು ‘ಪ್ರಿಸನರ್ಸ್ ಟ್ರ್ಯಾಕಿಂಗ್’ ಸಿಸ್ಟಮ್ ಜಾರಿ

May 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.