ನವದೆಹಲಿ, ಜ. 1: ಜಿಎಸ್ ಟಿ ತೆರಿಗೆ ಸಂಗ್ರಹ ಆರಂಭಗೊಂಡಾಗಿನಿಂದ ಇದೇ ಮೊದಲ ಬಾರಿಗೆ ದಾಖಲೆಯ ತೆರಿಗೆ ಸಂಗ್ರಹವಾಗಿದೆ.ದೇಶದಲ್ಲಿ ಬಡತನದಿಂದ ಜನ ನರಳಿ ಸತ್ತರೂ ಜಿ ಎಸ್ ಟಿ ಮಾತ್ರ ಕಡಿಮೆಯಾಗಲಿಲ್ಲ ಡಿಸೆಂಬರ್ ತಿಂಗಳಲ್ಲಿ ಜಿಎಸ್‍ಟಿ ತೆರಿಗೆ ಸಂಗ್ರಹ 1,15 ಲಕ್ಷ ಕೋಟಿ ರೂಪಾಯಿ ಮೀರಿ ಹೊಸ ದಾಖಲೆ ಬರೆಯಲಾಗಿದೆ.
ಇದರಲ್ಲಿ ಸಿಜಿಎಸ್ ಟಿ 21,365 ಕೋಟಿ, ಎಸ್ ಜಿಎಸ್ ಟಿ 27,804 ಕೋಟಿ, ಐಜಿಎಸ್ ಟಿ 57,426 ಕೋಟಿ(ಸರಕು ಗಳ ಆಮದಿಗೆ 27,050 ಕೋಟಿ ರೂ.ಗಳನ್ನು ಸೇರಿ) ಮತ್ತು ಸೆಸ್ 8,579 ಕೋಟಿ(ಸರಕುಗಳ ಆಮದಿನ ಮೇಲೆ 971 ಕೋಟಿ ರೂ.) ಸೇರಿದೆ.
ಕಳೆದ ವರ್ಷದ ಡಿಸೆಂಬರ್ ಗೆ ಹೋಲಿಸಿದರೆ ಈ ಬಾರಿ ಜಿಎಸ್‌ಟಿ ಆದಾಯದಲ್ಲಿ 12% ಹೇರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸತತ ಮೂರನೇ ತಿಂಗಳು ಜಿಎಸ್‌ಟಿ ಆದಾಯ ₹ 1 ಲಕ್ಷ ಕೋಟಿ ದಾಟಿದೆ. ಕಳೆದ ತಿಂಗಳು 1,04.963 ಕೋಟಿ ರೂ. ಸಂಗ್ರಹವಾಗಿತ್ತು.