- ಗ್ಯಾರಂಟಿ ಯೋಜನೆಗಳಿಗೆ ಬಹಳ ದಿನ ಜೀವವಿಲ್ಲ (Guarantee schemes are ineffective)
- ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ
- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮರಳಲು ಅನುಕೂಲಕರ ವಾತಾವರಣವಿದೆ
Bengaluru: ರಾಜ್ಯ ಸರ್ಕಾರ (State Govt) ಅಧಿಕಾರಕ್ಕೆ ಬಂದಿರುವುದೇ ಗ್ಯಾರಂಟಿ ಯೋಜನೆಗಳಿಂದಾಗಿ (Guarantee scheme). ಅಷ್ಟಕ್ಕೂ ಗ್ಯಾರಂಟಿ ಯೋಜನೆಗಳು ನಿಷ್ಪರಿಣಾಮಕಾರಿ ಮತ್ತು ಅರ್ಥಹೀನ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S. Yediyurappa) ಅವರು ಟೀಕಿಸಿದ್ದಾರೆ. ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತುಘಲಕ್ ದರ್ಬಾರ್ (Tughlaq Court) ನಡೆದಿದೆ.
ಕಾಂಗ್ರೆಸ್ ಸರ್ಕಾರದ (Congress Govt) ಗ್ಯಾರಂಟಿ ಯೋಜನೆಗಳಿಗೆ ಅರ್ಥವಿಲ್ಲ. ಜನರನ್ನು ತೃಪ್ತಿಪಡಿಸಲು ಜಾರಿಗೆ ತಂದ ಯಾವ ಯೋಜನೆಗಳೂ ಕಾರ್ಯರೂಪಕ್ಕೆ ಬರುತ್ತಿಲ್ಲ (Not working.) ಎಂದು ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆ (Election) ಸಂದರ್ಭದಲ್ಲಿ ಮತದಾರರನ್ನು ಆಕರ್ಷಿಸಲು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ, ಇದರಿಂದ ಯಾವುದೇ ಪ್ರಯೋಜನಗಳಾಗಿಲ್ಲ ಎಂದು ಹೇಳಿದರು.ಉತ್ತರ ಕರ್ನಾಟಕದ ಅಭಿವೃದ್ಧಿಗೆ (Development of Karnataka) ಆದ್ಯತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಅಲ್ಪಸಂಖ್ಯಾತರಿಗೆ ಶೇಕಡಾ 4 ರಷ್ಟು ಮೀಸಲಾತಿ (Reservation) ನೀಡುವ ಸರ್ಕಾರದ ನಿರ್ಧಾರವು ಅನ್ಯಾಯುತವಾದದ್ದು ಎಂದು ಆರೋಪಿಸಿದ್ದಾರೆ.
ಇದನೂ ಓದಿ: ಬಿಜೆಪಿ ಪರಿಸ್ಥಿತಿ ಈಗ, ಮನೆಯೊಂದು ಆರು ಬಾಗಿಲಿನಂತಾಗಿದೆ:ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯ
ಬಜೆಟ್ (Budget) ಅಲ್ಲಿ ಕೆಲವು ಭಾಗಗಳಿಗೆ ಅನ್ಯಾಯವಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಗ್ಯಾರಂಟಿ ಭಾಗ್ಯದಿಂದ ಸಾಲಗಳು ಹೆಚ್ಚಾಗುತ್ತಿವೆ ಹಾಗಾಗಿ ರಾಜ್ಯದಲ್ಲಿ ಬಿಜೆಪಿ (BJP) ಪರ ಅಲೆ ಹೆಚ್ಚುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. (Guarantee schemes are ineffective) ಈ ಗುರಿ ಸಾಧಿಸಲು ಪಕ್ಷವು ಪ್ರಾಮಾಣಿಕ ಮತ್ತು ಒಗ್ಗಟ್ಟಿನ ಪ್ರಯತ್ನಗಳನ್ನು ಮಾಡುತ್ತದೆ ಎಂದು ತಿಳಿಸಿದ್ದಾರೆ.