Shimogga: ಕಾಂಗ್ರೆಸ್ (Guest Lecturer Appealed Government) ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳ ನಡುವೆಯೂ ಇದೀಗ ದಿನಬಳಕೆ
ವಸ್ತುಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ನೊಂದಿರುವ ಅತಿಥಿ ಉಪನ್ಯಾಸಕರು(Guest lecturers) ನಮಗೆ ಕಡಿಮೆ ಸಂಬಳ ನೀಡಿ ಸಂಕಷ್ಟಕ್ಕೆ ದೂಡದೆ, ತಿಂಗಳಿಗೆ ಸಾಕಾಗುವಷ್ಟು
ಆಹಾರ ಅಥವಾ ದಿನಸಿಯನ್ನು ನೀಡಿ ಎಂದು ಸರಕಾರವನ್ನು(Government) ಮನವಿ ಮಾಡಿದ್ದಾರೆ.

12,460 ಉಪನ್ಯಾಸಕರಿಗೆ ವೇತನ ಬಾಕಿ ಇಟ್ಟ ಸರಕಾರ
ರಾಜ್ಯಾದ್ಯಂತ 12,464 ಪದವಿ ಕಾಲೇಜುಗಳ(Graduate College) ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಹೊಳೆಹೊನ್ನೂರು(Hole Honnuru) ಭದ್ರಾವತಿ (Bhadravati)
ತಾಲೂಕಿನ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಈ ವಿಷಯವನ್ನು ಖಂಡಿಸಿ ಸರಕಾರಕ್ಕೆ ವಿಭಿನ್ನ ಮನವಿ ಮೂಲಕ ಪತ್ರ ಬರೆದಿದ್ದಾರೆ. ಕಳೆದ ಮೂರು ತಿಂಗಳಿಂದ ನಮಗೆ ಸಂಬಳವಿಲ್ಲ, ಜೀವನವು ಹೆಚ್ಚು
ಕಷ್ಟಕರವಾಗಿದೆ. ವೇತನ ನೀಡುವವರೆಗೆ ಪ್ರತಿ ತಿಂಗಳು ಪಡಿತರ ನೀಡುವಂತೆ ಪಟ್ಟಿ ಮಾಡಿ ಪ್ರಾಂಶುಪಾಲರ(Principal) ಮೂಲಕ ಶಿಕ್ಷಣ ಇಲಾಖೆಗೆ(Department of Education) ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಮಳೆ ಬೆಳೆ ಹಾನಿಗೆ ಸರ್ಕಾರದಿಂದ 28,000 ಪರಿಹಾರ, ಇದನ್ನು ಪಡೆಯೋದು ಹೇಗೆ? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ
ಅವರು 25 ಕೆಜಿ ಅಕ್ಕಿ, 5 ಕೆಜಿ ಟೊಮ್ಯಾಟೊ(Tometo), 10 ಕೆಜಿ ಈರುಳ್ಳಿ(Onion), ಎಲ್‌ಪಿಜಿ ಸಿಲಿಂಡರ್(LPG Cylinder) ಸೇರಿದಂತೆ ದಿನ ಬಳಕೆ ಮಾಡಬಹುದಾದ ಅನೇಕ ವಸ್ತುಗಳನ್ನು ನೀಡುವಂತೆ ಮನವಿ
ಮಾಡುತ್ತಿದ್ದಾರೆ . ನಮಗೆ ನಮ್ಮ ವೇತನವನ್ನು ಕೊಡಿ ಇಲ್ಲವಾದರೆ ನಾವು ಹೇಳಿರುವ ಬೇಡಿಕೆಯನ್ನಾದರೂ ಪೂರೈಸಿ ಎಂದು ಸರ್ಕಾರವನ್ನು ಕೇಳುತ್ತಿದ್ದಾರೆ. ಸಂಬಳ ಪಡೆಯದವರು ಇಂತಹ ಅಪರೂಪದ ಮನವಿಯನ್ನು
ಸರಕಾರದ ಮುಂದೆ ಇಟ್ಟಿದ್ದು (Guest Lecturer Appealed Government) ಸರಕಾರವನ್ನು ಕಂಗೆಡಿಸಿದೆ.
ಅಷ್ಟಕ್ಕೂ ಇವರೆಲ್ಲರೂ ಸೇರಿ ಇಂತಹ ಒಂದು ಬೇಡಿಕೆ ಇಡಲು ಮುಖ್ಯ ಕಾರಣ ಏನೆಂದು ನಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತೆ ಮೂರು ತಿಂಗಳಿಂದ ಅತಿಥಿಉಪನ್ಯಾಸಕರಿಗೆ ಸಂಬಳ ಇಲ್ಲಿದಿರುವುದು ಒಂದಾದರೆ,
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದೇ ಇನ್ನೊಂದೆಡೆ ಇದಕ್ಕೆ ಮುಖ್ಯ ಕಾರಣವಾಗಿದೆ.

ಇಷ್ಟಕ್ಕೂ ಉಪನ್ಯಾಸಕರು ಬರೆದ ಪತ್ರದಲ್ಲಿ ಏನಿದೆ ಗೊತ್ತಾ?
ಮಾನ್ಯ ಘನ ಸರ್ಕಾರ ಬಡ, ನಿರ್ಗತಿಕ ಅತಿಥಿ ಉಪನ್ಯಾಸಕರಿಗೆ ಕಳೆದ ಮೂರು ತಿಂಗಳಿನಿಂದ ಬರಬೇಕಾದ ಗೌರವ ಧನವನ್ನು ತಡೆ ಹಿಡಿದಿದೆ. ನಮ್ಮನ್ನು ನಂಬಿಕೊಂಡಿರುವ ಕುಟುಂಬ ಇದರಿಂದ ಕಷ್ಟ ಪಡುತ್ತಿದೆ
ಅಲ್ಲದೆ ಉಪವಾಸದಿಂದ ನರಳುವಂತಾಗಿದೆ. ಸರ್ಕಾರ ನಮ್ಮ ಗೌರವ ಧನ ಯಾವಾಗ ಬಿಡುಗಡೆ ಮಾಡುತ್ತಾದೋ ಗೊತ್ತಿಲ್ಲ ಆದರೆ ಅಲ್ಲಿಯವರೆಗೆ ಈ ಕೆಳಕಂಡ ನಮಗೆ ಅಗತ್ಯವಿರುವ ದಿನಸಿ ವಸ್ತು ಪೂರೈಸಬೇಕೆಂದು
ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಪತ್ರವನ್ನು ಬರೆದು, ಅಗತ್ಯವಿರುವ ವಸ್ತುಗಳ ಪಟ್ಟಿ ಹಾಕಿದ್ದಾರೆ.
ಅತಿಥಿ ಉಪನ್ಯಾಸಕರ ದಿನಸಿಯ ಪಟ್ಟಿ ಹೀಗಿದೆ.
25 ಕೆ.ಜಿಯ ಅಕ್ಕಿ,
10 ಕೆ.ಜಿ ಈರುಳ್ಳಿ,
5 ಕೆ.ಜಿ ಟೊಮೆಟೊ,
2 ಕೆ.ಜಿ. ಹಸಿ ಮೆಣಸು,
1 ಕೆ.ಜಿ. ಒಣಮೆಣಸು,
ಅರ್ಧ ಕೆ.ಜಿ ಬೆಳ್ಳುಳ್ಳಿ,
2 ಕೆ.ಜಿ ತೊಗರಿಬೇಳೆ,
1 ಎಲ್‌ಪಿಜಿ ಸಿಲಿಂಡರ್
ಹಾಲು, ಮೊಸರು,
ಕಾಲು ಕೆ.ಜಿ ಶುಂಠಿ,
ಹೀಗೆ ನಾವು ಬೇಡಿಕೆ ಇಟ್ಟಿರುವ ದಿನಸಿಗಳನ್ನು ಪೂರೈಕೆ ಮಾಡಿ,ಇಲ್ಲದಿದ್ದರೆ ನಮ್ಮ ಬಾಕಿ ಸಂಬಳವನ್ನು ಪಾವತಿಸಿ. ಎಂದು ಕಾಲೇಜಿನ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯದ ಜನತೆಗೆ ಗ್ಯಾರಂಟಿಗಳನ್ನು
ಪೂರೈಕೆ ಮಾಡುತ್ತಿರುವ ಸರ್ಕಾರಕ್ಕೆ ಸೇವೆ ಸಲ್ಲಿಸುವವರನ್ನೇ ಸರ್ಕಾರ ಇದೀಗ ಕಡೆಗಣಿಸಿದ್ದು, ಈಗ ಬೀದಿಗಿಳಿದು ಪ್ರತಿಭಟನೆ ಮಾಡುವಂತಾಗಿದೆ.
ರಶ್ಮಿತಾ ಅನೀಶ್