• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಹೊಸ ವರ್ಷ 2026 ಸಂಭ್ರಮಾಚರಣೆ: ಬೆಂಗಳೂರು ಪೊಲೀಸರಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಹೊಸ ವರ್ಷ 2026 ಸಂಭ್ರಮಾಚರಣೆ: ಬೆಂಗಳೂರು ಪೊಲೀಸರಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ
0
SHARES
45
VIEWS
Share on FacebookShare on Twitter
  • ಹೊಸ ವರ್ಷಾಚರಣೆಗೆ ಅನುಮತಿ ಕಡ್ಡಾಯ: (guidelines for newyear celebration) ಬೆಂಗಳೂರು ಪೊಲೀಸರ ಎಚ್ಚರಿಕೆ
  • ಪಬ್–ಕ್ಲಬ್‌ಗಳಿಗೆ ಸಮಯ, ಧ್ವನಿವರ್ಧಕ ಮತ್ತು ಭದ್ರತೆ ಕುರಿತ ಸ್ಪಷ್ಟ ಮಾರ್ಗಸೂಚಿ ಪ್ರಕಟ
  • ಮಹಿಳಾ ಸುರಕ್ಷತೆಗೆ ನೆಲಮಹಡಿ ಅಂಗಡಿಗಳು ಮತ್ತು ಅಂಡರ್ ಪಾಸ್‌ಗಳಿಗೆ ತಾತ್ಕಾಲಿಕ ಬ್ರೇಕ್

Bengaluru: ಹೊಸ ಕ್ಯಾಲೆಂಡರ್ ವರ್ಷ 2026ರ ಆಗಮನಕ್ಕೆ ದಿನಗಣನೆ ಆರಂಭವಾಗಿದ್ದು, (guidelines for newyear celebration) ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು ಸಜ್ಜಾಗುತ್ತಿವೆ.

ನಗರದ ಜನಸಂದಣಿ, ಪಬ್–ಕ್ಲಬ್‌ಗಳು (Pub-Club) , ಪ್ರಮುಖ ರಸ್ತೆಗಳಲ್ಲಿ ನಡೆಯುವ ಸಂಭ್ರಮಾಚರಣೆಯನ್ನು ಸುರಕ್ಷಿತವಾಗಿ ನಡೆಸುವ ಉದ್ದೇಶದಿಂದ ಬೆಂಗಳೂರು ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಯಾವುದೇ ಅವಘಡ, ಅಹಿತಕರ ಘಟನೆ ಅಥವಾ ದುರಂತ ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಅಗ್ನಿಶಾಮಕ ದಳ ಸಂಯುಕ್ತವಾಗಿ ಕಾರ್ಯನಿರ್ವಹಿಸುತ್ತಿವೆ.

guidelines for newyear celebration

ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿರುವ ಬೆಂಗಳೂರು ಪೊಲೀಸರು, (guidelines for newyear celebration) ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಜೊತೆಗೆ ಸೇರಿ ಪಬ್, ಬಾರ್, ಕ್ಲಬ್ ಹಾಗೂ ಹೋಟೆಲ್‌ಗಳಿಗೆ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.

ಹೊಸ ವರ್ಷದ ಕಾರ್ಯಕ್ರಮ ಆಯೋಜನೆಗೆ ಪೂರ್ವಾನುಮತಿ ಕಡ್ಡಾಯವಾಗಿದ್ದು, ನಿಗದಿತ ಸಮಯದೊಳಗೆ ಮಾತ್ರ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚಿಸಲಾಗಿದೆ.

ಧ್ವನಿವರ್ಧಕ ಬಳಕೆಗೆ ವಿಶೇಷ ಪರವಾನಗಿ ಅಗತ್ಯವಿದ್ದು, ರಾತ್ರಿ ಸಮಯದಲ್ಲಿ ವಸತಿ ಪ್ರದೇಶಗಳಲ್ಲಿ 45 ಡೆಸಿಬೆಲ್‌ಗಿಂತ ಹೆಚ್ಚು ಶಬ್ದ ಇರಬಾರದು.

ವಾಣಿಜ್ಯ ಪ್ರದೇಶಗಳಲ್ಲಿ 55 ಡೆಸಿಬೆಲ್ (Decibel) ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ 70 ಡೆಸಿಬೆಲ್ ಮಿತಿ ನಿಗದಿಪಡಿಸಲಾಗಿದೆ.

ಪಬ್ ಮತ್ತು ಕ್ಲಬ್‌ಗಳಲ್ಲಿ ಆಯೋಜಿಸುವ ಪಾರ್ಟಿಗಳಿಗೆ ಸ್ಥಳವಕಾಶಕ್ಕೆ ತಕ್ಕಂತೆ ಮಾತ್ರ ಪಾಸ್ ಅಥವಾ ಟಿಕೆಟ್ (Ticket) ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ನೆಲಮಹಡಿ, ಪಾರ್ಕಿಂಗ್ ಸ್ಥಳಗಳು ಹಾಗೂ ಟೆರೆಸ್‌ಗಳಲ್ಲಿ ಪಾರ್ಟಿ ಆಯೋಜನೆಗೆ ನಿರ್ಬಂಧ ವಿಧಿಸಲಾಗಿದೆ.

LED ಸ್ಕ್ರೀನ್‌ಗಳನ್ನು ಕೇವಲ ಒಳಾಂಗಣದಲ್ಲಿ ಮಾತ್ರ ಅಳವಡಿಸಬೇಕು; ಸಾರ್ವಜನಿಕರಿಗೆ ಕಾಣುವಂತೆ ಹೊರಾಂಗಣದಲ್ಲಿ LED ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ.

ಭದ್ರತೆ ದೃಷ್ಟಿಯಿಂದ ಗ್ರಾಹಕರ ತಪಾಸಣೆ ಕಡ್ಡಾಯವಾಗಿದ್ದು, ಕಾರ್ಯಕ್ರಮದ ಸ್ಥಳದಲ್ಲಿ ಅಗ್ನಿ ನಿರೋಧಕ ಉಪಕರಣಗಳ ಬಳಕೆ ಹಾಗೂ ತುರ್ತು ಪರಿಸ್ಥಿತಿ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಇರಬೇಕು ಎಂದು ಸೂಚಿಸಲಾಗಿದೆ.

ಹೋಟೆಲ್, ಬಾರ್, ಪಬ್ ಹಾಗೂ ಕ್ಲಬ್‌ಗಳ ಪ್ರವೇಶ–ನಿರ್ಗಮನ ದ್ವಾರಗಳು, ಪಾರ್ಕಿಂಗ್ ಪ್ರದೇಶ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯವಾಗಿದೆ.

ಕಾರ್ಯಕ್ರಮದ ವೇಳೆ ಮಾದಕ ದ್ರವ್ಯ ಮಾರಾಟ ಅಥವಾ ಬಳಕೆ ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು.

ಧೂಮಪಾನಕ್ಕೆ ಸಂಪೂರ್ಣ ನಿಷೇಧವಿದ್ದು, ‘NO SMOKING’ ಮತ್ತು ‘NO DRUGS’ ಫಲಕಗಳನ್ನು ಸ್ಪಷ್ಟವಾಗಿ ಅಳವಡಿಸಬೇಕು.

ಹೊಸ ವರ್ಷ ಸಂಭ್ರಮಾಚರಣೆಗೆ ಆಗಮಿಸುವ ಸೆಲೆಬ್ರಿಟಿಗಳು ಹಾಗೂ ಅತಿಥಿ ಕಲಾವಿದರ ಮಾಹಿತಿಯನ್ನು ಮುಂಚಿತವಾಗಿ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂಬುದನ್ನೂ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಪೊಲೀಸರು, ಹೊಸ ವರ್ಷದ ಸಂಭ್ರಮಾಚರಣೆ ದಿನ ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ (Church Street) ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಿದ್ದಾರೆ.

ಮಹಿಳೆಯರ ರಕ್ಷಣೆ ಹಾಗೂ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಈ ಮೂರು ರಸ್ತೆಗಳ ಬೇಸ್ಮೆಂಟ್ ಶಾಪ್‌ಗಳು, ನೆಲಮಹಡಿಯ ಅಂಗಡಿಗಳು ಹಾಗೂ ಅಂಡರ್ ಪಾಸ್‌ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ನೆಲಮಹಡಿಯಲ್ಲಿ ಪಾರ್ಟಿ ಮತ್ತು ಅತಿಯಾದ ಮೋಜು–ಮಸ್ತಿಯಿಂದ ಮಹಿಳೆಯರ ಸುರಕ್ಷತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಪೊಲೀಸರ ಸೂಚನೆಗಳನ್ನು ಪಾಲಿಸಿ, ಸುರಕ್ಷಿತ ಹಾಗೂ ಶಾಂತಿಯುತವಾಗಿ ಹೊಸ ವರ್ಷ 2026ನ್ನು ಸ್ವಾಗತಿಸಬೇಕೆಂದು ಬೆಂಗಳೂರು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಇದನ್ನು ಓದಿ : https://vijayatimes.com/voter-list-process-in-west-bengal/

Tags: bengalurucelebrationnewrulesnewyear

Related News

ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ ಮೊದಲು: ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕುಖ್ಯಾತಿಗೆ ಪಾತ್ರವಾದ ಬೆಂಗಳೂರು
ಪ್ರಮುಖ ಸುದ್ದಿ

ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ ಮೊದಲು: ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕುಖ್ಯಾತಿಗೆ ಪಾತ್ರವಾದ ಬೆಂಗಳೂರು

January 22, 2026
ಗಣರಾಜೋತ್ಸವ ಹಿನ್ನೆಲೆ ದೆಹಲಿಯಲ್ಲಿ ಹೈಅಲರ್ಟ್‌ : ಅಪರಾಧಿಗಳ ಸುಳಿವು ಪತ್ತೆಗಾಗಿ ಪೊಲೀಸರಿಗೆ ಫೇಶಿಯಲ್ ರೆಕಗ್ನಿಷನ್, AI ಸ್ಮಾರ್ಟ್ ಕನ್ನಡಕ, ಆಂಟಿ-ಡ್ರೋನ್ ಯೂನಿಟ್‌
ದೇಶ-ವಿದೇಶ

ಗಣರಾಜೋತ್ಸವ ಹಿನ್ನೆಲೆ ದೆಹಲಿಯಲ್ಲಿ ಹೈಅಲರ್ಟ್‌ : ಅಪರಾಧಿಗಳ ಸುಳಿವು ಪತ್ತೆಗಾಗಿ ಪೊಲೀಸರಿಗೆ ಫೇಶಿಯಲ್ ರೆಕಗ್ನಿಷನ್, AI ಸ್ಮಾರ್ಟ್ ಕನ್ನಡಕ, ಆಂಟಿ-ಡ್ರೋನ್ ಯೂನಿಟ್‌

January 22, 2026
SBIನಲ್ಲಿ ಉಚಿತ ಸೇವೆ ಬಂದ್: ಫೆಬ್ರವರಿ 15 ರಿಂದ ಹಣ ವರ್ಗಾವಣೆಗೆ ಶುಲ್ಕ ಮತ್ತು ಜಿಎಸ್‌ಟಿ ಅನ್ವಯ
ಪ್ರಮುಖ ಸುದ್ದಿ

SBIನಲ್ಲಿ ಉಚಿತ ಸೇವೆ ಬಂದ್: ಫೆಬ್ರವರಿ 15 ರಿಂದ ಹಣ ವರ್ಗಾವಣೆಗೆ ಶುಲ್ಕ ಮತ್ತು ಜಿಎಸ್‌ಟಿ ಅನ್ವಯ

January 22, 2026
ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ
ದೇಶ-ವಿದೇಶ

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ

January 22, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.