• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ತೌಖ್ತೆ ಚಂಡಮಾರುತ: ಹಾನಿಗೊಳಗಾದ ಮೀನುಗಾರರಿಗೆ ₹105 ಕೋಟಿ ಪರಿಹಾರ ಘೋಷಿಸಿದ ಗುರಜಾತ್ ಸರ್ಕಾರ

Sharadhi by Sharadhi
in ದೇಶ-ವಿದೇಶ, ಪ್ರಮುಖ ಸುದ್ದಿ
ತೌಖ್ತೆ ಚಂಡಮಾರುತ: ಹಾನಿಗೊಳಗಾದ ಮೀನುಗಾರರಿಗೆ ₹105 ಕೋಟಿ ಪರಿಹಾರ ಘೋಷಿಸಿದ ಗುರಜಾತ್ ಸರ್ಕಾರ
0
SHARES
0
VIEWS
Share on FacebookShare on Twitter

ಅಹಮದಾಬಾದ್‌, ಜೂ. 02: ಕಳೆದ ತಿಂಗಳು ಗುಜರಾತ್‌ನ ಕರಾವಳಿ ತೀರದಲ್ಲಿ ‘ತೌಖ್ತೆ’ ಚಂಡಮಾರುತವು ಭಾರಿ ಹಾನಿಯನ್ನುಂಟು ಮಾಡಿದ್ದು, ತೊಂದರೆಗೊಳಗಾದ ಮೀನುಗಾರರಿಗೆ ಗುಜರಾತ್‌ ಸರ್ಕಾರವು ₹105 ಕೋಟಿ ಪರಿಹಾರ ಘೋಷಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರು ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ.

ಈ ಚಂಡಮಾರುತದಿಂದ ಜಾಫರಾಬಾದ್, ರಜುಲಾ, ಸೈಯದ್‌ ರಾಜ್‌ಪಾರಾ, ಶಹಿಯಾಲ್ ಬೆಟ್‌ ಮತ್ತು ನವಾ ಬಂದರ್ಗಳ ಮೂಲಸೌಕರ್ಯಗಳು, ಆ್ಯಂಕರ್ ಬೋಟ್‌ಗಳು, ಮೀನು ಹಿಡಿಯುವ ಬಲೆ, ಟ್ರಾಲರ್‌ಗಳಿಗೆ ಹಾನಿಗಳಾಗಿವೆ. ಈ ಪರಿಹಾರ ಪ್ಯಾಕೆಜ್ ಭಾಗವಾಗಿ ಹಾನಿಗೊಳಗಾಗಿರುವ 100 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ದೋಣಿಗಳ ಮೀನುಗಾರರಿಗೆ ಒಟ್ಟು ₹25 ಕೋಟಿ ಪರಿಹಾರ ನೀಡಲಾಗುವುದು ಎಂಬ ಮಾಹಿತಿ ಇದೆ.

ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿರುವ ಸಣ್ಣ ದೋಣಿಯ ಮೌಲ್ಯದ ಶೇಕಡ 50ರಷ್ಟು ಅಥವಾ ₹75,000 ಹಣವನ್ನು ಸರ್ಕಾರ ಭರಿಸಲಿದೆ. ಭಾಗಶಃ ಹಾನಿಗೊಳಗಾಗಿರುವ ದೋಣಿಗೆ ಶೇಕಡ 50ರಷ್ಟು ಅಥವಾ ₹35,000 ಸರ್ಕಾರ ನೀಡಲಿದೆ. ಇನ್ನೂ ಸಂಪೂರ್ಣ ಹಾನಿಗೊಳಗಾದ ಟ್ರಾಲರ್ಗೆ ₹ 5 ಲಕ್ಷ ಅಥವಾ ಅದರ ಶೇಕಡ 50ರಷ್ಟು ಪಾಲನ್ನು ಸರ್ಕಾರವೇ ನೀಡಲಿದೆ. ಅಲ್ಲದೆ ಹಾನಿಗೊಳಗಾಗಿರುವ ಸಣ್ಣ ಮತ್ತು ದೊಡ್ಡ ದೋಣಿಯ ಮೀನುಗಾರರ ಖಾತೆಗೆ ಸರ್ಕಾರ ₹2000 ವರ್ಗಾಯಿಸಲಿದೆ ಎಂದು ಪ್ರಕಟಣೆ ಹೇಳಿದೆ.

ಸಂಪೂರ್ಣ ಹಾನಿಗೊಳಗಾದ ದೋಣಿಯ ರಿಪೇರಿಗಾಗಿ ₹10 ಲಕ್ಷ ಸಾಲ ತೆಗೆದುಕೊಂಡರೆ, ಅದರ ಶೇಕಡ 10ರಷ್ಟು ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಚಂಡಮಾರಯತದಿಂದ ಹಾನಿಗೊಳಗಾದ ನವಾ, ಸೈಯದ್‌ ರಾಜ್‌ಪಾರಾ ಮತ್ತು ಶಿಯಾಲ್‌ ಬೆಟ್‌ ದ್ವೀಪದಲ್ಲಿ ಮರು ನಿರ್ಮಾಣ ಕಾರ್ಯಗಳನ್ನು ನಡೆಸಲಾಗುವುದು. ಬಂದರು ಮರು ನಿರ್ಮಾಣ ಕಾರ್ಯಕ್ಕಾಗಿ ಸರ್ಕಾರ ₹80 ಕೋಟಿ ವೆಚ್ಚ ಮಾಡಲಿದೆ ಎಂದು ತಿಳಿಸಲಾಗಿದೆ.

Related News

ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ, ನಮ್ಮ ಸರ್ಕಾರ ; ಮೋದಿ ವಿರುದ್ದ ಕಿಡಿಕಾರಿದ ನಟ ಕಿಶೋರ್
ದೇಶ-ವಿದೇಶ

ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ, ನಮ್ಮ ಸರ್ಕಾರ ; ಮೋದಿ ವಿರುದ್ದ ಕಿಡಿಕಾರಿದ ನಟ ಕಿಶೋರ್

June 6, 2023
ಭಾರತದ ಟಾಪ್ 10 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪಟ್ಟಿ ಇಲ್ಲಿದೆ
ದೇಶ-ವಿದೇಶ

ಭಾರತದ ಟಾಪ್ 10 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪಟ್ಟಿ ಇಲ್ಲಿದೆ

June 6, 2023
ghaziabad
ದೇಶ-ವಿದೇಶ

ಆನ್ಲೈನ್ ಗೇಮಿಂಗ್ ಅಪ್ಲಿಕೇಶನ್ ಮೂಲಕ ಮತಾಂತರ ಜಾಲ ಬೇಧಿಸಿದ ಯುಪಿ ಪೊಲೀಸರು

June 6, 2023
ಕರ್ನಾಟಕದಲ್ಲಿ ಈ ಬಾರಿ ಮುಂಗಾರು ತಡವಾದರೂ ಉತ್ತಮ ಮಳೆಯಾಗಲಿದೆ : ಹವಾಮಾನ ಇಲಾಖೆ ತಜ್ಞರ ಸ್ಪಷ್ಟನೆ
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ತಡವಾದರೂ ಉತ್ತಮ ಮಳೆಯಾಗಲಿದೆ : ಹವಾಮಾನ ಇಲಾಖೆ ತಜ್ಞರ ಸ್ಪಷ್ಟನೆ

June 6, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.