ಅಹಮದಾಬಾದ್, ಮೇ. 19: ಗುಜರಾತ್ನ 12 ಜಿಲ್ಲೆಗಳಲ್ಲಿ ‘ತೌಖ್ತೆ’ ಚಂಡಮಾರುತದಿಂದಾಗಿ ಈವರೆಗೆ ಮೃತಪಟ್ಟವರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಅಮ್ರೇಲಿ ಜಿಲ್ಲೆಯ ಸೌರಾಷ್ಟ್ರ ಪ್ರದೇಶದಲ್ಲಿ 15 ಮಂದಿ, ಭಾವ್ನಗರ ಮತ್ತು ಗಿರ್ ಸೋಮನಾಥದಲ್ಲಿ ತಲಾ 8 ಮಂದಿ, ಅಹಮದಾಬಾದ್ನಲ್ಲಿ ಐವರು ಮತ್ತು ಕೇದಾದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆನಂದ್, ವಡೋದರಾ,ಸೂರತ್, ವಲ್ಸಾಡ್, ರಾಜ್ಕೋಟ್, ನವಸಾರಿ, ಪಂಚಮಹಲ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಗುಜರಾತ್ ತುರ್ತು ಕಾರ್ಯಾಚರಣಾ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದರು.
ಕರಾವಳಿಯ ಮೂಲಕ ಈ ಚಂಡಮಾರುತವು ಸೋಮವಾರ ಮಧ್ಯರಾತ್ರಿ ಗುಜರಾತ್ ಪ್ರವೇಶಿಸಿದೆ.