ಜೂನ್ 11 ರಂದು, 24 ವರ್ಷದ ಕ್ಷಮಾ ಬಿಂದು(Kshama Bindu) ತನ್ನನ್ನು ತಾನೇ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ.

ಭಾರತವು ಹಿಂದೆಂದೂ ನೋಡಿರದ ಮದುವೆ(Marriage) ಇದಾಗಲಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಗುಜರಾತ್‌ನ ವಡೋದರಾದ ಮಹಿಳೆಯು ತನಗೆ ಯಾವ ವರನೂ ಬೇಡ ಎಂದು ನಿರ್ಧರಿಸಿ, ತನಗೆ ತಾನೇ ತಾಳಿ ಕಟ್ಟಿಕೊಳ್ಳುವ ಮುಖೇನ ಮದುವೆಯಾಗಿ, ಹನಿಮೂನ್ಗೆ ಹೋಗಲು ಸಜ್ಜಾಗಿದ್ದಾರೆ ಮತ್ತು ಮದುವೆಯ ಪ್ರತಿಜ್ಞೆಗಳಿಂದ ಗೋವಾ(Goa) ಮಧುಚಂದ್ರದವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ ಎಂದು ಹೇಳಿಕೊಂಡಿದ್ದಾರೆ. ಇದು ಭಾರತದ ಮೊದಲ ಏಕವ್ಯಕ್ತಿ ವಿವಾಹವಾಗಲಿದೆ.
ಭಾರತದಲ್ಲಿ ಅಂತಹ ಯಾವುದೇ ಮದುವೆ ನಡೆದಿದೆಯೇ ಎಂದು ನಾನು ನೋಡಿದೆ, ಆದರೆ ಯಾವುದನ್ನೂ ಕಂಡುಹಿಡಿಯಲಾಗಲಿಲ್ಲ. ಬಹುಶಃ ನಾನು ಹಾಗೆ ಮಾಡುವವರಲ್ಲಿ ಮೊದಲಾಗಿರಬಹುದು ಎಂದು ಹೇಳಿಕೊಂಡಿದ್ದಾರೆ. ವರದಿಯ ಪ್ರಕಾರ ಕ್ಷಮಾ, ನಾನು ಎಂದಿಗೂ ಮದುವೆಯಾಗಲು ಬಯಸಲಿಲ್ಲ. ಆದರೆ ನಾನು ವಧು ಆಗಲು ಬಯಸಿದ್ದೆ. ಹಾಗಾಗಿ ನಾನೇ ಮದುವೆಯಾಗಲು ನಿರ್ಧರಿಸಿದ್ದೇನೆ.
“ಸ್ವ-ವಿವಾಹವು ನಿಮಗಾಗಿ ಇರಲು ಬದ್ಧತೆಯಾಗಿದೆ ಮತ್ತು ತನಗಾಗಿ ಬೇಷರತ್ತಾದ ಪ್ರೀತಿ. ಇದು ಸ್ವಯಂ ಸ್ವೀಕಾರ ಕ್ರಿಯೆಯೂ ಆಗಿದೆ. ಜನರು ಪ್ರೀತಿಸುವವರನ್ನು ಮದುವೆಯಾಗುತ್ತಾರೆ.

ನಾನು ನನ್ನನ್ನು ಪ್ರೀತಿಸುತ್ತೇನೆ ಮತ್ತು ಆದ್ದರಿಂದ ಈ ಮದುವೆ ಎಂದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಕ್ಷಮಾ ತಮ್ಮ ಹೇಳಿಕೆಯನ್ನು ವಿವರಿಸಿದ್ದಾರೆ. “ಕೆಲವರು ಸ್ವಯಂ-ವಿವಾಹವನ್ನು ಅಪ್ರಸ್ತುತವೆಂದು ಗ್ರಹಿಸಬಹುದು. ಆದರೆ ನಾನು ನಿಜವಾಗಿ ಚಿತ್ರಿಸಲು ಪ್ರಯತ್ನಿಸುತ್ತಿರುವುದು ಮಹಿಳೆಯರ ವಿಷಯವಾಗಿದೆ. ನನ್ನ ನಿರ್ಧಾರಕ್ಕೆ ನನ್ನ ಕುಟುಂಬದವರು ನಿರಾಕರಿಸಲ್ಲ, ಬದಲಾಗಿ ಪೋಷಕರು ಅನುಮತಿ ನೀಡಿ, ಆಶೀರ್ವದಿಸಿದ್ದಾರೆ ಎಂದು ಹೇಳಿದ್ದಾರೆ.
ಗೋತ್ರಿಯ ದೇವಸ್ಥಾನದಲ್ಲಿ ನಡೆಯಲಿರುವ ವಿವಾಹಕ್ಕಾಗಿ ಕ್ಷಮಾ ಐದು ವ್ರತಗಳನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಮದುವೆಯ ನಂತರ, ಅವರು ಎರಡು ವಾರಗಳ ಹನಿಮೂನ್‌ಗೆ ಗೋವಾಗೆ ಹೋಗಲು ನಿರ್ಧರಿಸಿದ್ದಾರೆ.