- ಜೆಪಿ ನಡ್ಡಾ (JP Nadda) ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ
- ಆರ್ಥಿಕವಾಗಿ ದುರ್ಬಲವಾಗಿರುವ ಮುಸ್ಲಿಂ ಕುಟುಂಬಗಳಿಗೆ (Muslim families) ಈದ್ ಕಿಟ್
- ಇದು ಓಲೈಕೆ ರಾಜಕಾರಣವೆಂದು (Politics of appeasement) ಕಿಡಿ ಕಾರಿದ (Gundurao statement over Saugat e Modi) ಗುಂಡೂರಾವ್
New Dehli: ರಂಜಾನ್ ಹಬ್ಬದ (Ramadan festival) ಪ್ರಯುಕ್ತ ದೇಶಾದ್ಯಂತ 32 ಲಕ್ಷ ಬಡ ಮುಸ್ಲಿಮರ ಕುಟುಂಬಗಳಿಗೆ (poor Muslim families) ಬಿಜೆಪಿ ರಂಜಾನ್ ಕಿಟ್ ನೀಡಲು ಆರಂಭಿಸಿದೆ. ಬಿಜೆಪಿ ರಾಷ್ಟ್ರೀಯ (BJP national) ಅಧ್ಯಕ್ಷ ಜೆಪಿ ನಡ್ಡಾ (JP Nadda) ಮಾರ್ಗದರ್ಶನದಲ್ಲಿ ದೆಹಲಿಯಲ್ಲಿ ಕಿಟ್ ವಿತರಣೆ ಕಾರ್ಯಕ್ರಮ (Kit distribution programme) ಆರಂಭವಾಗಿದೆ.ಸೌಗತ್-ಇ-ಮೋದಿ (Saugat E Modi) ಅಂತಾ ಈ ಅಭಿಯಾನಕ್ಕೆ ಹೆಸರಿಡಲಾಗಿದೆ. ದೇಶದಲ್ಲಿರುವ 32 ಲಕ್ಷ ಹಿಂದುಳಿದ ಮುಸ್ಲಿಮರಿಗೆ (Backward Muslims) ಇದರ ಪ್ರಯೋಜನ ಸಿಗಲಿದೆ.
ಇದರ ಅಂಗವಾಗಿ ಅವರಿಗೆ ಈದ್ ಆಚರಿಸಲು ವಿಶೇಷ ಕಿಟ್ (Special kit to celebrate) ನೀಡಲಾಗುತ್ತಿದೆ. ಅದರಲ್ಲಿ ಆಹಾರ ಪದಾರ್ಥಗಳ ಜೊತೆಗೆ ಬಟ್ಟೆ, ಶಾವಿಗೆ, ಖರ್ಜೂರ, ಒಣ ಹಣ್ಣಗುಳು (Dates, dates, dry fruits) ಮತ್ತು ಸಕ್ಕರೆ (Sugar) ಇದೆ. ಇನ್ನು ಮಹಿಳೆಯರಿಗೆ ಸೀರೆ, ಸಲ್ವಾರ್ ಕಮೀಜ್, (Saree, Salwar Kameez,) ಪುರುಷರಿಗೆ ಕುರ್ತಾ-ಪೈಜಾಮುಗಳನ್ನು (Kurta-pyjamas) ನೀಡಲಾಗುತ್ತದೆ ಎನ್ನಲಾಗಿದೆ. ಇನ್ನು ಪ್ರತಿ ಕಿಟ್ ಬೆಲೆ 500 ರಿಂದ 600 ರೂಪಾಯಿ ಆಗಿದೆ ಎನ್ನಲಾಗಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ಮುಸ್ಲಿಂ ಕುಟುಂಬಗಳು (Muslim families) ಯಾವುದೇ ತೊಂದರೆಯಿಲ್ಲದೇ, ರಂಜಾನ್ ಹಬ್ಬವನ್ನು (Ramadan festival) ಆಚರಿಸಬೇಕೆಂಬುದು ಈ ಅಭಿಯಾನದ ಗುರಿಯಾಗಿದೆ. ಈ ಪ್ರಯತ್ನದ ಭಾಗವಾಗಿ, 32,000 ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು (Morcha workers) ದೇಶಾದ್ಯಂತ 32,000 ಮಸೀದಿಗಳ ಸಹಕಾರದೊಂದಿಗೆ ಬಡ ಮುಸ್ಲಿಂ ಕುಟುಂಬಗಳಿಗೆ ಈ ಈದ್ ಕಿಟ್ ಗಳನ್ನು (Eid kits) ಹಂಚಿಕೆ ಮಾಡಲು ಸಹಾಯ ಮಾಡುತ್ತಿದ್ದಾರೆ.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ (BJP Minority Front) ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರು ‘ಸೌಗತ್-ಎ-ಮೋದಿ’ (‘Saugat-e-Modi’) ಅಭಿಯಾನದ ವಿಶಾಲ ದೃಷ್ಟಿಕೋನದ (Broad-minded) ಬಗ್ಗೆ ತಿಳಿಸಿದ್ದು, ‘ರಂಜಾನ್ ಮತ್ತು ಈದ್ ಸಮಯದಲ್ಲಿ ಮಾತ್ರವಲ್ಲದೇ, (good friday) ಈಸ್ಟರ್, ನೌರುಜ್ ಮತ್ತು ಹೊಸ ವರ್ಷದಂತಹ ಇತರ ಮಹತ್ವದ ಸಂದರ್ಭಗಳಲ್ಲಿಯೂ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದಾರೆ.
ಅಲ್ಲದೆ ಬಿಜೆಪಿ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಈದ್ ಮಿಲನ್ (Eid Milan at the district level) ಆಚರಣೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.ಇನ್ನು ಬಿಜೆಪಿ (BJP) ಈ ಅಭಿಯಾನದ ಬಗ್ಗೆ ಟ್ವೀಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, BJP ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (National President JP Nadda) , 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಮೋದಿ ಹೆಸರಲ್ಲಿ ಈದ್ ಕಿಟ್ ನೀಡಿದ್ದಾರೆ. ಪವಿತ್ರ ರಂಜಾನ್ (Holy Ramadan) ಸಮಯದಲ್ಲಿ ಮುಸ್ಲಿಂರಿಗೆ ಈದ್ ಕಿಟ್ ಕೊಡಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ.
ಇದನ್ನೂ ಓದಿ : http://ಭೂ ಒತ್ತುವರಿ ಆರೋಪ: ಹೈಕೋರ್ಟ್ ಮೆಟ್ಟಿಲೇರಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ
ಆದರೆ ಇದೇ ಕಾರ್ಯಕ್ರಮವನ್ನು ಕಾಂಗ್ರೆಸ್‌ನವರು (Program was organized by Congress) ಮಾಡಿದ್ದರೆ ಪರಿಸ್ಥಿತಿ ಹೇಗಿರುತಿತ್ತು.? ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ.ಕಾಂಗ್ರೆಸ್‌ನವರು ಈದ್ ಕಿಟ್ ಕೊಟ್ಟರೆ ಬಿಜೆಪಿಯ ಪುಡಿ ನಾಯಕರು ಇಷ್ಟೊತ್ತಿಗಾಗಲೇ ಬೀದಿಗಿಳಿಯುತ್ತಿದ್ದರು. ಕಾಂಗ್ರೆಸ್ ಮುಸ್ಲಿಮರ ತುಷ್ಠೀಕರಣ ಮಾಡುತ್ತಿದೆ, ಓಲೈಕೆ ರಾಜಕಾರಣ (Politics) ಮಾಡುತ್ತಿದೆ ಎಂದು ಬೊಂಬಡ ಬಜಾಯಿಸುತ್ತಿದ್ದರು. ಆದರೆ ಈಗ ಸೌಗತ್-ಎ-ಮೋದಿ (Saugat-e-Modi) ಹೆಸರಲ್ಲಿ ಬಿಜೆಪಿಯ ವರಿಷ್ಠ ನಾಯಕರೆ ಮುಸ್ಲಿಂರಿಗೆ ಈದ್ ಕಿಟ್ ಕೊಡುತ್ತಿದ್ದಾರೆ. (Gundurao statement over Saugat e Modi) ಇದು ತುಷ್ಠೀಕರಣವಲ್ಲವೆ.? ಇದು ಓಲೈಕೆ ರಾಜಕಾರಣವಲ್ಲವೆ.? ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.