ಶಸ್ತ್ರಾಸ್ತ್ರ ಉತ್ಪಾದನಾ ಕ್ಷೇತ್ರದಲ್ಲಿ (Field of arms production) ಭಾರತ ಇದೀಗ ಮಹತ್ವದ ಸ್ಥಾನವನ್ನು ಪಡೆಯುತ್ತಿದ್ದು, ಭಾರತ ತಯಾರಿಸುವ ಯುದ್ದೋಪಕರಣಗಳಿಗೆ (war equipment) ವಿವಿಧ ದೇಶಗಳಿಂದ ಭಾರೀ ಬೇಡಿಕೆ ಬರುತ್ತಿದೆ. ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ (supply of arms) ಸ್ವಾವಲಂಬನೆ ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದೀಗ ಭಾರತದಲ್ಲಿ ತಯಾರಾಗಿರುವ ಗನ್ವೊಂದಕ್ಕೆ ವಿವಿಧ ದೇಶಗಳಿಂದ (Different countries) ಭಾರೀ ಬೇಡಿಕೆ ಹೆಚ್ಚುತ್ತಿದೆ. ಆ ಗನ್ ಯಾವುದು? ಅದಕ್ಕೆ ಹೆಚ್ಚಿನ ಬೇಡಿಕೆ ಯಾಕೆ? ಅದರ ವಿಶೇಷತೆಗಳೇನು? ಎಂಬುದರ ವಿವರ ಇಲ್ಲಿದೆ.
ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ಉತ್ಪಾದಿಸುತ್ತಿರುವ ಮೀಡಿಯಮ್ (The producing medium) ಮಷಿನ್ ಗನ್ಗೆ (MMG) ಭಾರೀ ಬೇಡಿಕೆ : ಅದರ ವಿಶೇಷತೆಗಳೇನು?
• ಈ ಮೀಡಿಯಮ್ ಮಷಿನ್ ಗನ್ (Medium machine gun) ಭೂ ಕಾರ್ಯಾಚರಣೆಗಳಲ್ಲಿ ಗೇಮ್ ಚೇಂಜರ್ ಆಗಬಹುದು.

• ಈ ಮಷಿನ್ ಗನ್ (Machine gun) ಕೇವಲ ಒಂದು ನಿಮಿಷದಲ್ಲಿ 1,000 ಬುಲೆಟ್ಗಳನ್ನು ಸಿಡಿಸುವ ಸಾಮರ್ಥ್ಯವನ್ನು ಹೊಂದಿದೆ.
• ಈ ಒಂದು ಮಷಿನ್ ಗನ್ ಸುಮಾರು (Machine gun approx) 11 ಕಿಲೋ ತೂಕವಿದೆ.
• ಒಂದು ಸುತ್ತಿನಲ್ಲಿ 1,000 ಬುಲೆಟ್ ಫೈರ್ (1,000 bullet fire) ಮಾಡುತ್ತದೆ.
• 1.8 ಕಿಲೋ ಮೀಟರ್ ದೂರವಿರುವ ಗುರಿಯನ್ನು (Aim for distance) ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
• ಇದರ ಉದ್ದ 1255 ಮಿಲಿ ಮೀಟರ್ (Millimeter) ಇದ್ದು, 7 .62*51 mm ಉದ್ದದ ಕ್ಯಾಲಿಬರ್ (Long caliber) ಹೊಂದಿದೆ.
ಮೀಡಿಯಮ್ ಮಷಿನ್ ಗನ್ (Medium machine gun) ಖರೀದಿಸಲು 2023ರಲ್ಲೇ ಭಾರತ ಮತ್ತು ಯುರೋಪ್ ದೇಶಗಳ (India and European countries) ನಡುವೆ ಒಪ್ಪಂದಗಳು ನಡೆದಿವೆ. 2023ರಲ್ಲಿ 190 ಕೋಟಿ ರೂ. ಮೊತ್ತದ ಮಷಿನ್ ಗನ್ಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. 2024ರಲ್ಲಿ ಸುಮಾರು 255 ಕೋಟಿ ರೂ. ಮೌಲ್ಯದ ರಫ್ತು ಒಪ್ಪಂದವಾಗಿದೆ. 2025ಕ್ಕೆ ಈಗಾಗಲೇ 2,000 ಮಷಿನ್ ಗನ್ಗಳಿಗೆ ಯೂರೋಪ ದೇಶಗಳಿಂದ ಬೇಡಿಕೆ ಬಂದಿದೆ.
2023-24ರ ರಲ್ಲಿ ಭಾರತದಿಂದ ರಫ್ತಾಗಿರುವ (Exported from India) ರಕ್ಷಣಾ ಉಪಕರಣಗಳ ಮೌಲ್ಯ 21,000 ಕೋಟಿ ರೂ. ದಾಟಿದೆ ಎಂದು ಭಾರತದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. 2023-24ಕ್ಕೆ ಹೋಲಿಸಿದರೆ ರಕ್ಷಣಾ ರಫ್ತು ಶೇ.32.5ರಷ್ಟು ಏರಿಕೆ ಕಂಡಿದೆ. ಕಳೆದ 10 ವರ್ಷಗಳಲ್ಲಿ ರಕ್ಷಣಾ ರಫ್ತು (Defense Exports) ಶೇ.31ರಷ್ಟು ಹೆಚ್ಚಾಗಿದೆ.