ಬೆಂಗಳೂರು ಅ 29 : ಪುನೀತ್ ರಾಜ್ಕುಮಾರ್ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುತ್ತಿದ್ದರು, ಅತಿಯಾದ ಸಮಯವನ್ನೇ ಅದಕ್ಕಾಗಿ ಮೀಸಲಿಟ್ಟಿದ್ದೇ ಅವರಿಗೆ ಮುಳುವಾಯಿತೇ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದಿನದ ಹೆಚ್ಚಿನ ಸಮಯವನ್ನು ದೇಹವನ್ನು ಹುರಿಗೊಳಿಸಿಕೊಳ್ಳೊಕ್ಕೆ ವಿನಿಯೋಗಿಸುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಆಗಾಗ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡಿದ್ದುಂಟು ಎನ್ನಲಾಗಿದೆ.
ವಯಸ್ಸು ಎಷ್ಟೇ ಆಗಿರಲಿ, ಯಾವ ನಟ ಕೂಡ ಆದರೂ ತೆರೆ ಮೇಲೆ ಸ್ಮಾರ್ಟ್ ಅಂಡ್ ಸ್ಲಿಮ್ ಆಗಿ ಕಾಣಿಸಿಕೊಳ್ಳೋಕೆ ಇಷ್ಟಪಡುತ್ತಾನೆ. ಇದು ಅಪ್ಪುಗೂ ಕೂಡ ಹೊರತಾಗಿರಲಿಲ್ಲ. ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳದಿದ್ದರೆ ಅದು ತನ್ನ ವೃತ್ತಿ ಬದುಕಿಗೆ ಹಿನ್ನಡೆ ಆಗಬಹುದೆನ್ನುವ ಆತಂಕದಿಂದ ಏನೇ ತಪ್ಪಿದ್ರೂ ದಿನನಿತ್ಯ ಜಿಮ್ ಮಾಡೋದನ್ನು ಮಾತ್ರ ಬಿಡುತ್ತಿರಲಿಲ್ಲ.
ಸದಾಶಿವನಗರದಲ್ಲಿರುವ ತನ್ನ ಮನೆ ಹಾಗು ಕಾಮನ್ ಆಗಿ ಹೋಗುತ್ತಿದ್ದ ಜಿಮ್ ನಲ್ಲಿ ಗಂಟೆಗಟ್ಟಲೇ ಬೆವರು ಹರಿಸುತ್ತಿದ್ದ ಪುನೀತ್ ಕೆಲವೊಮ್ಮೆ ದಿನದ ಬಹುತೇಕ ಸಮಯವನ್ನು ಅಲ್ಲಿಯೇ ಕಳೆಯುತ್ತಿದ್ದರು. ಮನೆಯವರು ಕೂಡ ಅನೇಕ ಬಾರಿ ಅತಿಯಾದ ವರ್ಕೌಟ್ ಮಾಡದಂತೆ ಕಾಳಜಿಯ ಮಾತನ್ನಾಡುತ್ತಿದ್ದರೆನ್ನಲಾಗಿದೆ.ವೈದ್ಯರು ಕೂಡ ಈ ಬಗ್ಗೆ ಅಪ್ಪು ಅವರಗೆ ಎಚ್ಚರಿಸಿದ್ದರು.
ಸೆಂಟರ್ ನಲ್ಲಿ ಅಥವಾ ಮನೆಯಲ್ಲಿ ಗಂಟೆಗಟ್ಟಲೇ ವರ್ಕೌಟ್ ನಲ್ಲೇ ಕಾಲ ಕಳೆಯುತ್ತಿದ್ದ ಪುನೀತ್ ಪಾಲಿಗೆ ಅದೇ ಮುಳುವಾಗಿದ್ದು ಮಾತ್ರ ವಿಪರ್ಯಾಸವೇ ಸರಿ