- ಡೋನಾಲ್ಡ್ ಟ್ರಂಪ್ ಹೇಳಿಕೆಗೆ ದೇವೇಗೌಡರಿಂದ ತೀಕ್ಷ್ಣ ತಿರುಗೇಟು
- ಭಾರತ economical dead ಅಲ್ಲ, rising superpower!
- ವಿರೋಧ ಪಕ್ಷ ನಾಯಕರಿಗೂ ಮಾತಿನಲ್ಲೇ ತಿವಿದ ಮಾಜಿ ಪ್ರಧಾನಿ
Bengaluru: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಒಂದಲ್ಲ ಒಂದು ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ವಿವಾದಗಳಿಂದಲೇ ಹೆಚ್ಚು ಟೀಕೆಗೆ ಒಳಗಾಗುತ್ತಿರುವ ಅವರು “ಭಾರತದ ಆರ್ಥಿಕತೆ ಸತ್ತಿದೆ” ಎಂಬ ವಿವಾದಾತ್ಮಕ ಹೇಳಿಕೆಯನ್ನು ಹೇಳಿರುವ ಬೆನ್ನಲ್ಲೇ ದೇಶದಾದ್ಯಂತ ಈ ಹೇಳಿಕೆಯ ಕುರಿತಾಗಿ ವಿರೋಧಗಳು ಕೇಳಿ ಬಂದಿವೆ.
ಇನ್ನು ಈ ಹೇಳಿಕೆಯ ವಿರುದ್ಧ ತಿರುಗಿ ಬಿದ್ದಿರುವ ಭಾರತದ ಮಾಜಿ ಪ್ರಧಾನಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಚ್.ಡಿ. ದೇವೇಗೌಡ(H.D. Deve Gowda). ಬಹುಶಃ ಟ್ರಂಪ್ ಅವರು ಕುರುಡರಾಗಿರಬೇಕು ಇಲ್ಲವೇ ಅಜ್ಞಾನಿ ಆಗಿರಬೇಕು ಹಾಗಾಗಿಯೇ ಕಣ್ಣು ಮುಚ್ಚಿ ವಿವರಣೆ ನೀಡಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಭಾರತದ ಆರ್ಥಿಕತೆ ಕುಸಿತದಲ್ಲಿದೆ ಎಂದು ಹೇಳುವುದು, ಭಾರತೀಯರ ಶ್ರಮವನ್ನು ಅವಹೇಳನೆ ಮಾಡಿದಂತೆ.ಭಾರತ ಎನ್ನುವುದು ಕೇವಲ ಹಣದ ಪ್ರಮಾಣವಲ್ಲ, ಅದು ಮೌಲ್ಯಗಳ, ಕನಸುಗಳ, ಶ್ರಮದ ಸಂಕಲನವಾಗಿದೆ. ಎಂದು ಟ್ರಂಪ್ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಈ ಕುರಿತಾಗಿ ಮಾಧ್ಯಮಗಳಿಗೆ(media) ಹೇಳಿಕೆ ನೀಡಿರುವ ಅವರು ಇಂದು ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಗಳ ಪೈಕಿ ಭಾರತವು ಒಂದು.
ಶೇ. 6-7ರಷ್ಟು ವಾರ್ಷಿಕ ಬೆಳವಣಿಗೆ ದರವನ್ನು ಸಾಧಿಸುತ್ತಿರುವ ದೇಶವೊಂದರ ಬಗ್ಗೆ ‘ಆರ್ಥಿಕತೆ ಸತ್ತಿದೆ’ ಎನ್ನುವುದು ದುರದೃಷ್ಟಕರ ಮತ್ತು ಅಜ್ಞಾನತೆಯ ಪ್ರತೀಕ.
ಭಾರತವು ಐಟಿ(IT), ಮ್ಯಾನುಫ್ಯಾಕ್ಚರಿಂಗ್(Manufacturing), ಎಗ್ರಿ-ಟೆಕ್(Agri-Tech), ಸ್ಟಾರ್ಟ್‌ಅಪ್ಗಳಲ್ಲಿ(startups) ಸಾಕಷ್ಟು ಪ್ರಗತಿ ಸಾಧಿಸಿದ್ದು,
ಅದು ವಿಶ್ವದ ಹಲವು ರಾಷ್ಟ್ರಗಳಿಗೂ ಮಾದರಿಯಾಗಿದೆ. ಇಂತಹ ದೇಶದ ಆರ್ಥಿಕತೆಗೆ ಮರಣಘಂಟೆ ಘೋಷಿಸುವವರು ಅತಿಶಯೋಕ್ತಿಗೆ ಒಳಪಟ್ಟವರಾಗಿದ್ದಾರೆ ಎಂದು ಟ್ರಂಪ್ ವಿರುದ್ಧ ಕಿಡಿ ಕಾರಿದ್ದಾರೆ.
ಇನ್ನೊಂದೆಡೆ, ದೇವೇಗೌಡ ಅವರು ಭಾರತದಲ್ಲಿನ ಸಣ್ಣ ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು ಮತ್ತು ಬಡ ರೈತರನ್ನೂ ಉಲ್ಲೇಖಿಸಿ ಅವರು ತಮ್ಮ ಬದುಕನ್ನು ಮತ್ತು ವ್ಯಾಪಾರವನ್ನು ಸಮಗ್ರತೆ, ಶ್ರಮ ಮತ್ತು ಪ್ರಾಮಾಣಿಕತೆಯೊಂದಿಗೆ ನಡೆಸುತ್ತಿದ್ದಾರೆ .
ಈ ಜನತೆಯ ಶ್ರದ್ಧೆ, ಪರಿಶ್ರಮ ಮತ್ತು ಘನತೆ ಇಡೀ ಆರ್ಥಿಕ ವ್ಯವಸ್ಥೆಯ ಮೂಲ ಅಸ್ತಿಯಾಗಿದೆ ಇವರು ತೋರಿಸುವ ಶ್ರದ್ಧೆ , ಪ್ರಾಮಾಣಿಕತೆ ಮತ್ತು ದುಡಿಮೆಯಿಂದಲೇ ದೇಶ ಬೆಳೆಯುತ್ತಿದೆ ಹೊರತು ಕುಸಿಯುತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನು ಟ್ರಂಪ್ ಅವರ ಹಿಂದಿನ ಹೇಳಿಕೆಗಳು ಮತ್ತು ಅವರ ರಾಜತಾಂತ್ರಿಕ(Diplomatic) ನಿಲುವುಗಳನ್ನೂ ಟೀಕಿಸಿದ ದೇವೇಗೌಡರು“ಅವರು ತಮ್ಮ ದೀರ್ಘಕಾಲದ ಸ್ನೇಹಿತ ರಾಷ್ಟ್ರಗಳನ್ನೂ ದೂರವಿಟ್ಟಿದ್ದಾರೆ.
ಅವರ ವರ್ತನೆ, ಭಾಷೆ, ಮತ್ತು ವಿಶ್ವದ ಕಡೆಗಣನೆಯ ಸ್ವಭಾವ, ಒಬ್ಬ ಜವಾಬ್ದಾರಿಯುತ ನಾಯಕನಿಗೆ ಯೋಗ್ಯವಲ್ಲ,” ಎಂದು ಹೇಳಿದರು.
ದೇಶದ ನೆಲ ,ಇಲ್ಲಿನ ಜನರ ಶ್ರಮ, ರಾಷ್ಟ್ರೀಯತೆ(Nationality) ಹಾಗೂ ರಾಜಕೀಯ(politics) ಸ್ಥಿರತೆ ಎಂಬ ನಾಲ್ಕು ಅಡಿಪಾಯಗಳ ಮೇಲೆ ಭಾರತ ಮುಂದೆ ಸಾಗುತ್ತಿದೆ
ಅದನ್ನು ಅರ್ಥ ಮಾಡಿಕೊಳ್ಳದೆ ಕೆಲ ವಿರೋಧ ಪಕ್ಷದ ನಾಯಕರು ಟ್ರಂಪ್ ಅವರ ತಪ್ಪು ಹೇಳಿಕೆಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ .
ಇದನ್ನು ಓದಿ : ಅಮೆರಿಕದ ನೂತನ ವ್ಯಾಪಾರ ನೀತಿ: ಭಾರತ ಸೇರಿ ಅನೇಕ ರಾಷ್ಟ್ರಗಳ ಮೇಲೆ ಸುಂಕದ ಹೊರೆ
ಇದು ಕೇವಲ ದೇಶದ ಭವಿಷ್ಯಕ್ಕೂ, ಮತ್ತು ಅವರ ಸ್ವಂತ ಪಕ್ಷದ ಗೌರವಕ್ಕೂ ಅಪಾಯ ತರುವುದರಲ್ಲಿ ಅನುಮಾನವಿಲ್ಲ ಎಂದು ಎಚ್ಚರಿಸಿದ್ದಾರೆ.