ಪ್ರಕ್ರತಿ ನಮಗೆ ನೀಡಿದ ಆರೋಗ್ಯವರ್ಧಕ ಸಸ್ಯಗಳಲ್ಲಿ ಹಾಗಲಕಾಯಿಯೂ ಒಂದು, ಮನೆಯಂಗಳದಲ್ಲೂ ಸುಲಭವಾಗಿ ಬೆಳೆಸಬಹುದಾದ ಬೆಳೆ ಇದು. ಇದನ್ನು ತರಕಾರಿಯಾಗಿಯೂ ಉಪಯೋಗಿಸಬಹುದು ಔಷಧೀಯ ರೂಪವಾಗಿಯೂ ಬಳಸಬಹುದಾಗಿದೆ ಇದು ಆರೋಗ್ಯದಲ್ಲಿ ಮಹತ್ವಪೂರ್ಣ ಗುಣಗಳಿಂದ ಗುರುತಿಸಲ್ಪಟ್ಟಿದೆ.
ನಿಮಗಿದು ಗೊತ್ತೇ… ಮಾನವ ದೇಹಕ್ಕೆ ಕಹಿ ಉತ್ತಮ ಔಷಧವೆಂದು? ನಿಜ. ಕಹಿ ನಮ್ಮ ದೇಹಕ್ಕೆ ಒಳ್ಳೆಯ ಆರೋಗ್ಯ ನೀಡುತ್ತದೆ. ಆದರೆ ನಾವು ಕಹಿಯನ್ನು ಇಷ್ಟ ಪಡುವುದಿಲ್ಲ. ಸಿಹಿ ಮಾನವ ದೇಹಕ್ಕೆ ಮಾರಕವಾಗಿದೆ. ಆದರೆ ನಾವು ಸಿಹಿಯನ್ನು ಬಹಳ ಇಷ್ಟ ಪಡುತ್ತೇವೆ. ಯಾಕೆಂದರೆ ಸಿಹಿ ಹಿತವಾಗಿರುತ್ತದೆ. ಕಹಿ ಯಾವಾಗಲೂ ಕಠಣವಾಗಿರುತ್ತದೆ. ಆದ್ದರಿಂದ ಕಹಿ ಆರೋಗ್ಯಕ್ಕೆ ಒಳ್ಳೆಯದಾಗಿ ದೇಹವನ್ನು ಗಟ್ಟಿಗೊಳಿಸುತ್ತದೆ. ಸಿಹಿಯಿಂದ ಬರುವ ಕಾಯಿಲೆ ಅಂದರೆ ಇತ್ತೀಚೆಗೆ ಅನೇಕ ಜನರಿಗೆ ಸಕ್ಕರೆ ಕಾಯಿಲೆ ಕಟ್ಟಿಟ್ಟ ಬುತ್ತಿಯೆಂದೇ ಹೇಳಬಹುದು. ಇಂತಹ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಹಾಗಲಕಾಯಿಯಿಂದ ಖಂಡಿತ ಸಾದ್ಯವಿದೆ. ಹಾಗಲಕಾಯಿ ಎಲೆಗಳ ರಸ ತೆಗೆದು ವಾರದಲ್ಲಿ 2 ಅಥವಾ 3 ಬಾರಿ ಸೇವಿಸುತ್ತಾ ಬಂದರೆ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ, ಮತ್ತು ಸಕ್ಕರೆ ಕಾಯಿಲೆ ಬಾರದಂತೆ ತಡೆಯಬಹುದಾಗಿದೆ.
ಇದರ ರಸವು ಹೊಟ್ಟೆಯಲ್ಲಿ ಹುಳಗಳು ಹೆಚ್ಚಾಗದಂತೆ, ನೋಡಿಕೊಳ್ಳುತ್ತದೆ, ಹಾಗೂ ನಿಯಂತ್ರಿಸುತ್ತದೆ. ರಕ್ತವನ್ನೂ ಶುದ್ದೀಕರಿಸಿ ಆರೋಗ್ಯವನ್ನು ಕಾಪಾಡುತ್ತದೆ. ರಕ್ತದಲ್ಲಿ ಹುಟ್ಟಿಕೊಳ್ಳುವ ಕೊಬ್ಬನ್ನು ಕರಗಿಸುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳಿಂದ ನಮ್ಮನ್ನು ಕಾಪಾಡುತ್ತದೆ. ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಿಸುವುದರಿಂದ ಕಣ್ಣಿನ ದ್ರಷ್ಟಿಯನ್ನು ಸುರಕ್ಷಿತಗೊಳಿಸುತ್ತದೆ, ಮಾರಕ ರೋಗಗಳಾದ ಕಾಲರಾ ಜಾಂಡೀಸ್ ಮುಂತಾದವುಗಳಿಂದ ರಕ್ಷಿಸುತ್ತದೆ.
ದೇಹದಲ್ಲಿ ಗಾಯಗಳಿದ್ದರೆ ಇದರ ರಸವನ್ನು ಅರಷಿನದೊಂದಿಗೆ ಬೆರೆಸಿ ಹಚ್ಚಿದರೆ ತಕ್ಷಣ ಗುಣವಾಗುತ್ತದೆ, ದಿನನಿತ್ಯ ಅಡಿಗೆಯಲ್ಲಿ ಹಾಗಲಕಾಯಿಯನ್ನು ತರಕಾರಿಯಾಗಿ ಬಳಸಿದರೆ ಉತ್ತಮ ಆರೋಗ್ಯ ನಮ್ಮದಾಗುವುದರಲ್ಲಿ ಸಂಶಯವಿಲ್. ಯಾಕೆಂದರೆ ಇದರಲ್ಲಿ ವಿಟಮಿನ್ ಎ ಮತ್ತು ಕ್ಯಾರೋಟಿನ್ ಅಂಶಗಳಿರುತ್ತವೆ, ಬರಿ ಹೊಟ್ಟೆಯಲ್ಲಿ ಇದರ ರಸವನ್ನು ಸೇವಿಸುವುದರಿಂದ ಮಧುಮೇಹ ಕಾಯಿಲೆಯನ್ನು ಗುಣಪಡಿಸುತ್ತದೆ. ರಸವನ್ನು ಕುಡಿಯಲು ಕಷ್ಟವಾದರೆ ಎಲೆಗಳನ್ನು ಕುಟ್ಟಿ ಮಾತ್ರೆಗಳಂತೆ ಮಾಡಿಕೊಂಡು ಕೂಡಾ ಇದನ್ನು ನುಂಗಿ ನೀರು ಕುಡಿಯಬಹುದು ಎಲ್ಲಾ ರೀತಿಯ ಉತ್ತಮ ಆರೋಗ್ಯಕ್ಕೆ ಇದು ಪರಿಣಾಮಕಾರೀ ಔಷಧವಾಗಿದೆ.