Visit Channel

ನಿಮಗೂ ಅಂದವಾದ ಕೂದಲು ಬೇಕಾ ? ಹಾಗದ್ರೆ ನೀವು ಈ ಟಿಪ್ಸ್ ಅನುಸರಿಸಲೇಬೇಕು

ಬಹಳಷ್ಟು ಮಂದಿಗೆ ಕೂದಲೆಂದರೆ ಇಷ್ಟ ಅದರಲ್ಲೂ  ಹೆಣ್ಣುಮಕ್ಕಳಿಗೆ ಕೂದಲು ಎಂದರೆ ತುಂಬಾ ಇಷ್ಟ . ಹಳ್ಳಿಯ ಭಾಗದ ಹೆಣ್ಣುಮಕ್ಕಳು ಕೂದಲನ್ನು ಹೆಚ್ಚಾಗಿ ಪೋಷಣೆ ಮತ್ತು ಆರೈಕೆ ಮಾಡುತ್ತಾರೆ ಮಾಡುತ್ತಾರೆ. ಆದರೆ ನಗರದಲ್ಲಿನ ಕೆಲವು ಹೆಣ್ಣುಮಕ್ಕಳು ಕೂದಲ ಆರೈಕೆ ಮಾಡುವುದರಲ್ಲಿ ಯಾವಗಲೂ ಸದಾ ಹಿಂದೇಟು ಹಾಕುತ್ತಾರೆ.

ಕೂದಲ ಆರೈಕೆ ಬಹಳ ಕಷ್ಟ ಎನ್ನುವವರಿಗೆ ನಾವು ಕೊಡುವ ಸಲಹೆಯನ್ನು ಅನುಸರಿಸಿದರೆ ಖಂಡಿತವಾಗಲೂ ನಿಮ್ಮ ಕೂದಲು ಬಹಳ ಬಲಿಷ್ಠವಾಗಿ , ಸದೃಢವಾಗಿ  ಮತ್ತು  ಸೊಂಪಾಗಿ ಬೆಳೆಯುದರಲ್ಲಿ ಅನುಮಾನವೇ ಇಲ್ಲ.

 • ಪ್ರತಿದಿನವೂ  ತಲೆಕೂದಲನ್ನು ಸರಿಯಾದ ರೀತಿಯಲ್ಲಿ ಬಾಚಿ. ಸರಿಯಾದ ಬಾಚುವ ಕ್ರಮ ಹೇಗೆಂದರೆ,  ತಲೆಕೂದಲನ್ನು ತುದಿಯಿಂದ ಬಾಚಿ ಅನಂತರ ಮೇಲೆ  ಬಾಚಬೇಕು ಇದರಿಂದ ಕೂದಲು ಗಂಟಾಗುವ ಸಾಧ್ಯತೆ ಕಡಿಮೆ ಇರುತ್ತದೆ.
 • ತಲೆಗೆ ಸ್ನಾನ ಮಾಡಿದ ತಕ್ಷಣ ತಲೆ ಬಾಚಬೇಡಿ ತಲೆಕೂದಲು ತೇವಾಂಶದಿಂದ ಕೂಡಿದ್ದರೆ ಕೂದಲು ಉದುರಲು ಪ್ರಾರಂಭವಾಗುತ್ತದೆ.  ಹಾಗೂ ತಲೆಕೂದಲ ಮೇಲೆ ಒತ್ತಡ ಬೀಳುತ್ತದೆ.
 • ಬಹಳ ಹೆಚ್ಚು ಒತ್ತು ತಲೆಕೂದಲನ್ನು ಬರುತ್ತಲೇ ಇದ್ದರೆ ಕೂದಲಿನ ಬೇರುಗಳ ಮೇಲೆ ಪರಿಣಾಮವನ್ನು ಬೀರುತ್ತದೆ.
 • ಮಲಗುವ ಸಮಯದಲ್ಲಿ ಕೂದಲನ್ನು ಕಟ್ಟಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ, ಯಾವಾಗಲೂ ಕೂಡ ನಿದ್ದೆ ಮಾಡುವಾಗ ಕೂದಲನ್ನು ಬಿಟ್ಟು ಮಲಗಬಾರದು ಏಕೆಂದರೆ ಕೂದಲು ಕಟ್ಟದೆ ಮಲಗಿದಲ್ಲಿ ಅದು ಅಧಿಕ ಗಂಟುಗಳಾಗಿ  ಕೂದಲಿನಲ್ಲಿ ಹೆಚ್ಚಾಗಿ ಸಿಕ್ಕುಗಳಾಗಿ ಬಿಡುತ್ತವೆ, ಅದೂ ಅಲ್ಲದೆ ಕೂದಲು ಕೂಡ ಉದುರುವ ಸಾಧ್ಯತೆ ಇರುತ್ತದೆ.  ಹಾಗಾಗಿ ರಾತ್ರಿ ವೇಳೆ ನೀವು ಕೂದಲನ್ನು ಕಟ್ಟಿ ಮಲಗಿದರೆ ಕೂದಲು ಸಡಿಲವಾಗುತ್ತದೆ ಮತ್ತು ಕೂದಲು ಉದುರುವಿಕೆ ಕೂಡ ಆಗುವುದಿಲ್ಲ.
 • ಉತ್ತಮವಾದ ಶಾಂಪೂ ಆಯ್ಕೆ ಮಾಡಿ .

  ಹಿಂದಿನ ಕಾಲಗಳಲ್ಲಿ ಯಾವುದೇ ರೀತಿಯ ಶಾಂಪು ಇರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಶಾಂಪುಗಳಿವೆ ಅದರಲ್ಲೂ ಕೂಡ ಕೆಮಿಕಲ್  ಮಿಶ್ರಿತ ವಾದಂತಹ ಶಾಂಪುಗಳು ಹೆಚ್ಚಿವೆ ಆದ್ದರಿಂದ ನೀವು ಬಳಸುವ ಶಾಂಪೂವಿನ ಆಯ್ಕೆ ಕೂಡ ನಿಮ್ಮ ಕೂದಲ ರಕ್ಷಣೆಗೆ  ಬಹು ಮುಖ್ಯವಾಗಿರುತ್ತದೆ.

 • ಹಾಗೆಯೇ ಮತ್ತೊಂದು  ಬಹು ಮುಖ್ಯವಾದ ವಿಷಯವೆಂದರೆ,  ಯಾವಾಗಲೂ ಕೂಡ ತಲೆಗೆ ಸ್ನಾನ ಮಾಡುವ ಮುಂಚೆ ಕೂದಲನ್ನು ಸಿಕ್ಕಿಲ್ಲದ್ದ ರೀತಿಯಲ್ಲಿ ಬಾಚಿಕೊಳ್ಳಬೇಕು . ನಂತರ  ತಲೆ ಕೂದಲನ್ನು ನೀರಿನಲ್ಲಿ ತೊಳೆದ ನಂತರ ಕೂದಲಿಗೆ ಶಾಂಪೂ  ಬಳಸಿ ಸ್ಷಚ್ಚಗೊಳಿಸಬೇಕು. ಹೀಗೆ ಮಾಡುವುದರಿಂದ ಕೂದಲಿಗೆ ಬೇಕಾದ ಪೋಷಕಾಂಶ  ಸಿಗುತ್ತದೆ.
 • ನೆತ್ತಿಗೆ ಮಸಾಜ್ ಮಾಡಬೇಕು.
  • ವಾರಕ್ಕೊಮ್ಮೆ ನೆತ್ತಿಯ ಮೇಲೆ ಸ್ವಲ್ಪ ಎಣ್ಣೆ ಹಾಕಿ 15 ನಿಮಿಷವಾದರೂ ತಿಕ್ಕಬೇಕು ಹೀಗೆ ಮಾಡುವುದರಿಂದ ತಲೆಯತಲೆಯ ಕೂದಲು ನಿರಾಳವಾಗುತ್ತದೆ ಮತ್ತು ನೆತ್ತಿಯಲ್ಲಿ  ಕೂದಲು ಕೂಡ ಸದೃಢವಾಗಿ ಹಾಗೂ  ದಟ್ಟವಾಗಿ ಬೆಳೆಯುತ್ತದೆ.

 ಕೂದಲ ಆರೈಕೆಗೆ ಹಾಗೂ ಸಮೃದ್ದವಾಗಿ ಬೆಳೆಯಲು ಕೆಲವು ಮನೆಮದ್ದು.

 • ವಾರಕ್ಕೊಮ್ಮೆಯಾದರೂ ತಲೆಯ  ಕೂದಲ ಬೇರುಗಳವರೆಗೂ  ಕೂಡ ತೆಂಗಿನ ಎಣ್ಣೆ ಹಚ್ಚಬೇಕು ಇದರಿಂದ ಕೂದಲು ಗಟ್ಟಿಯಾಗಿ  ಸೊಂಪಾಗಿ ಬೆಳೆಯುತ್ತದೆ.
 • ಕರಿಬೇವಿನಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿವೆ. ಆದ್ದರಿಂದ ಕರಿಬೇವನ್ನು ಸ್ವಲ್ಪ ಕುದಿಸಿ ನಂತರ ಅದನ್ನು ತಲೆಕೂದಲಿನ ಬೇರುಗಳಿಗೆ ಹಚ್ಚಬೇಕು. 10 ನಿಮಿಷಗಳ ಕಾಲ ಕೂದಲನ್ನು ಒಣಗಿಸಿ ನಂತರ ತಲೆ ಕೂದಲು ತೊಳೆಯಿರಿ ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
 • ಅಲೋವೆರಾ ಸಿಪ್ಪೆತೆಗೆದು ಅದರ ಮೇಲಿನ ಪದರವನ್ನು ಒಂದು ಬೌಲ್ ನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಅದನ್ನು ಕೂದಲಿಗೆ ಹಚ್ಚಿ 15 ನಿಮಿಷಗಳ ನಂತರ ತಲೆಗೆ ಸ್ನಾನ ಮಾಡಿ ಇದರಿಂದ ಕೂದಲ ಹೊಳಪು ಹೆಚ್ಚುತ್ತದೆ ಮತ್ತು ಸೊಂಪಾಗಿ ಕೂದಲು ಬೆಳೆಯುತ್ತದೆ.
 • ಈರುಳ್ಳಿ ಮತ್ತು ಅಕ್ಕಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇರುತ್ತದೆ.  ಒಂದು  ಹಿಡಿ ಅಕ್ಕಿಯನ್ನು ಅರ್ಧ ಗಂಟೆ ನೆನೆಸಿ ನಂತರ ಒಂದು ಪಾತ್ರೆಯಲ್ಲಿ ಎರಡು ಈರುಳ್ಳಿ ಸಿಪ್ಪೆಯನ್ನು ಹಾಕಿ ಹಾಗೂ  ನೆನೆಸಿದ ಅಕ್ಕಿಯನ್ನು ಕೂಡ ಹಾಕಿ ಎರಡು ಲೋಟ ನೀರು ಸೇರಿಸಿ 5 ನಿಮಿಷ ಕುದಿಸಿ  ನಂತರ ಅದು ಆರಿದ ಮೇಲೆ ಸೋಸಿ ಹಾಗೂ ಅದನ್ನು ಒಂದು ಬಾಕ್ಸಿಗೆ ಹಾಕಿ  4 ಗಂಟೆ ತಂಪು ವಾತಾವರಣದಲ್ಲಿ ಇಡಿ ನಂತರ ಇದನ್ನು ಪ್ರತಿ ದಿನವೂ ಉಪಯೋಗಿಸಿ ಇದರಿಂದ ಕೂದಲು ಸಮೃದ್ದವಾಗಿ ಬೆಳೆಯುತ್ತದೆ.
 • ಮೆಂತ್ಯ ಮತ್ತು ನೆಲ್ಲಿಕಾಯಿಯನ್ನು ಕೊಬ್ಬರಿಎಣ್ಣೆಯೊಂದಿಗೆ ಚೆನ್ನಾಗಿ ಕುದಿಸಬೇಕು ಅದರ ಬಣ್ಣ ಬದಲಾಗುವವರೆಗೂ ಕುದಿಸಬೇಕು ನಂತರ ಅದನ್ನು ಸೋಸಿ ಒಂದು ಬಾಟಲಿಯಲ್ಲಿ ಹಾಕಿ ಅದನ್ನು ಪ್ರತಿದಿನವೂ ಹಚ್ಚುವುದರಿಂದ ಕೂದಲು ಸುಂದರವಾಗಿ ಬೆಳೆಯುತ್ತದೆ.
 • ದಾಸವಾಳ ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ರುಬ್ಬಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಳಿಕ ಸ್ನಾನ ಮಾಡಿದರೆ ಕೂದಲು ಉದ್ದವಾಗಿ, ಹಾಗೂ ದಟ್ಟವಾಗಿ  ಬೆಳೆಯುತ್ತದೆ.
 • 1 ಕಪ್ ತೆಂಗಿನ ಎಣ್ಣೆಗೆ ಸ್ವಲ್ಪ  ಒಂದೆಲಗ ಸೊಪ್ಪು, ಗರಿಕೆ ಸೊಪ್ಪು, ಮೆಂತ್ಯ, ಮತ್ತು ಕರಿಬೇವು ಇವೆಲ್ಲವನ್ನು ಹಾಕಿ ಸ್ವಲ್ಪ ಹೊತ್ತು ಕಾಯಿಸಿ ನಂತರ ಅದು ತಣ್ಣಗಾದ  ಮೇಲೆ ಸೋಸಿ ಅದನ್ನು ಒಂದು ಗಾಜಿನ ಬಾಟಲಿಗೆ ಹಾಕಿ ಪ್ರತಿದಿನ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದಿಲ್ಲ ಮತ್ತು ಉದ್ದವಾಗಿ ಬೆಳೆಯುವಲ್ಲಿ ಸರಕರಿಸುತ್ತದೆ.

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.