ಸಮಾರೋಪ ಸಮಾರಂಭದಲ್ಲಿ ಧ್ವಜ-ಬ್ಯಾಟನ್ (Handover flag from Scotland to India) ಹಸ್ತಾಂತರ; ಭಾರತದ ಮುಂದಿನ ಮಹತ್ವದ ಕ್ರೀಡಾ ಕನಸಿಗೆ ಚಾಲನೆ
ಧ್ವಜ ಮತ್ತು ಬ್ಯಾಟನ್ ಸ್ವೀಕರಿಸಿದ ಭಾರತ; ವಿಶ್ವಮಟ್ಟದ ಕ್ರೀಡಾಕೂಟ ಆಯೋಜನೆಗೆ ಭರ್ಜರಿ ಸಿದ್ಧತೆ ಆರಂಭ
39 ಪದಕಗಳ ಸಾಧನೆಯೊಂದಿಗೆ ಭಾರತಕ್ಕೆ ಮತ್ತೊಂದು ಗೌರವ: 2030 ಕಾಮನ್‌ವೆಲ್ತ್ ಧ್ವಜ ಹಸ್ತಾಂತರ
2026ರ ಕಾಮನ್‌ವೆಲ್ತ್ ಕ್ರೀಡಾಕೂಟವು 11 ದಿನಗಳ ಕ್ರೀಡಾ ಸಂಭ್ರಮದ ಬಳಿಕ (Handover flag from Scotland to India) ಭವ್ಯ ಸಮಾರೋಪ ಸಮಾರಂಭದೊಂದಿಗೆ ಯಶಸ್ವಿಯಾಗಿ ತೆರೆ ಕಂಡಿದೆ.
ಸ್ಕಾಟ್ಲೆಂಡ್‌ನಲ್ಲಿ (Scotland) ನಡೆದ ಈ ಕ್ರೀಡಾಕೂಟದ ಸಮಾರೋಪದಲ್ಲಿ ಅತ್ಯಂತ ಮಹತ್ವದ ಕ್ಷಣವೆಂದರೆ ಕಾಮನ್‌ವೆಲ್ತ್ ಗೇಮ್ಸ್ ಧ್ವಜ (Commonwealth Games flag)
ಹಾಗೂ ಉತ್ಸವದ ಬ್ಯಾಟನ್ ಅನ್ನು ಮುಂದಿನ ಆತಿಥೇಯ ರಾಷ್ಟ್ರವಾದ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಿದುದು.

ಈ ಮೂಲಕ 2030ರಲ್ಲಿ ನಡೆಯಲಿರುವ ಶತಮಾನೋತ್ಸವ (Handover flag from Scotland to India) ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಅಧಿಕೃತವಾಗಿ ಸಜ್ಜಾಗಿದೆ.
ಸಮಾರಂಭದಲ್ಲಿ ಭಾರತದ ಪ್ರತಿನಿಧಿಗಳಾಗಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಭಾರತೀಯ ಒಲಿಂಪಿಕ್ ಸಂಘದ ಅಧ್ಯಕ್ಷೆ ಪಿ.ಟಿ. ಉಷಾ (P.T. Usha) ಹಾಗೂ
ಗುಜರಾತ್ ಉಪಮುಖ್ಯಮಂತ್ರಿ ಹರ್ಷ್ ಸಂಘವಿ ಧ್ವಜ (Harsh Sanghavi Dhvaja) ಮತ್ತು ಬ್ಯಾಟನ್ ಸ್ವೀಕರಿಸಿ ದೇಶದ ಪರ ಹೆಮ್ಮೆಯ ಕ್ಷಣವನ್ನು ಸೃಷ್ಟಿಸಿದರು.
2030ರ ಕಾಮನ್‌ವೆಲ್ತ್ ಕ್ರೀಡಾಕೂಟವು ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ನಡೆಯಲಿದ್ದು, ಇದು ಭಾರತದ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಮಹತ್ವದ
ಅಧ್ಯಾಯವಾಗಲಿದೆ. ಈ ಮೂಲಕ ಒಂದಕ್ಕಿಂತ ಹೆಚ್ಚು ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗುತ್ತಿದೆ.
ಇದುವರೆಗೆ ಆಸ್ಟ್ರೇಲಿಯಾ ಮಾತ್ರ ಈ ಸಾಧನೆ ಮಾಡಿದ್ದು, ಈಗ ಭಾರತ ಎರಡನೇ ರಾಷ್ಟ್ರವಾಗಿ ಗುರುತಿಸಿಕೊಳ್ಳಲಿದೆ. ಜಾಗತಿಕ ಮಟ್ಟದ ಕ್ರೀಡಾ ಮೂಲಸೌಕರ್ಯ,
ಅತ್ಯಾಧುನಿಕ ಕ್ರೀಡಾಂಗಣಗಳು ಹಾಗೂ ವಿಶ್ವಮಟ್ಟದ ವ್ಯವಸ್ಥೆಗಳ ಮೂಲಕ ಅಹಮದಾಬಾದ್ ಕ್ರೀಡಾಪಟುಗಳು ಮತ್ತು ಪ್ರೇಕ್ಷಕರನ್ನು ಸ್ವಾಗತಿಸಲು ಸಜ್ಜಾಗುತ್ತಿದೆ.
ಈ ಕ್ರೀಡಾಕೂಟವು ಭಾರತದ ಕ್ರೀಡಾ ಸಾಮರ್ಥ್ಯವನ್ನು ಮತ್ತಷ್ಟು ಜಗತ್ತಿನ ಮುಂದೆ ಪ್ರದರ್ಶಿಸುವ ಅವಕಾಶವಾಗಲಿದೆ.
ಸಮಾರೋಪ ಸಮಾರಂಭದಲ್ಲಿ ಭಾರತ ಮತ್ತು ಸ್ಕಾಟ್ಲೆಂಡ್‌ನ ಕಲಾವಿದರು ಜಂಟಿಯಾಗಿ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಸೆಳೆಯಿತು.
ಭಾರತೀಯ ಸಂಸ್ಕೃತಿ ಹಾಗೂ ಸ್ಕಾಟ್ಲೆಂಡ್‌ನ ಪರಂಪರೆಯನ್ನು ಒಟ್ಟುಗೂಡಿಸಿದ ವರ್ಣರಂಜಿತ ಪ್ರದರ್ಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಗೀತ, ನೃತ್ಯ, ಬೆಳಕು ಹಾಗೂ ಸಾಂಸ್ಕೃತಿಕ ವೈವಿಧ್ಯದ ಅದ್ಭುತ ಸಂಯೋಜನೆಯ ಮೂಲಕ ಮುಂದಿನ ಆತಿಥೇಯ ರಾಷ್ಟ್ರವಾದ ಭಾರತದ ಪರಂಪರೆ ಮತ್ತು ಆತಿಥ್ಯವನ್ನು
ಜಗತ್ತಿನ ಮುಂದೆ ಪರಿಚಯಿಸಲಾಯಿತು. ಈ ಜುಗಲ್‌ಬಂದಿ ಕಾರ್ಯಕ್ರಮವು ಸಮಾರೋಪ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು.
ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 39 ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದೆ. ಭಾರತ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.
ಹಿಂದಿನ ಬರ್ಮಿಂಗ್ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ಗೆ ಹೋಲಿಸಿದರೆ ಒಟ್ಟು ಪದಕಗಳ ಸಂಖ್ಯೆ ಕಡಿಮೆಯಾದರೂ, ಈ ಬಾರಿ ಕೆಲವು ಪ್ರಮುಖ ಕ್ರೀಡೆಗಳನ್ನು
ಸ್ಪರ್ಧೆಯಿಂದ ಕೈಬಿಡಲಾಗಿದ್ದ ಕಾರಣ ಭಾರತದ ಪ್ರದರ್ಶನವನ್ನು ಅತ್ಯಂತ ಪರಿಣಾಮಕಾರಿ ಸಾಧನೆ ಎಂದು ಕ್ರೀಡಾ ತಜ್ಞರು ವಿಶ್ಲೇಷಿಸಿದ್ದಾರೆ.
ವಿವಿಧ ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳು ತೋರಿದ ಆತ್ಮವಿಶ್ವಾಸ, ಶಿಸ್ತು ಮತ್ತು ನಿರಂತರ ಸಾಧನೆ ಮುಂದಿನ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ
ಹೊಸ ಭರವಸೆ ಮೂಡಿಸಿದೆ. ಇದೀಗ ದೇಶದ ಕ್ರೀಡಾಭಿಮಾನಿಗಳ ಗಮನ ಸಂಪೂರ್ಣವಾಗಿ 2030ರ ಅಹಮದಾಬಾದ್ ಕಾಮನ್‌ವೆಲ್ತ್ ಕ್ರೀಡಾಕೂಟದತ್ತ ನೆಟ್ಟಿದೆ.
ಶತಮಾನೋತ್ಸವದ ಈ ಮಹತ್ವದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಭಾರತ ತನ್ನ ಸಂಘಟನಾ ಸಾಮರ್ಥ್ಯ, ಆತಿಥ್ಯ ಹಾಗೂ ಕ್ರೀಡಾ ಮೂಲಸೌಕರ್ಯವನ್ನು ವಿಶ್ವದ ಮುಂದೆ ಮತ್ತೊಮ್ಮೆ ಸಾಬೀತುಪಡಿಸುವ ಅವಕಾಶವನ್ನು ಹೊಂದಿದೆ.
ಇದರ ಜೊತೆಗೆ ದೇಶದ ಕ್ರೀಡಾಪಟುಗಳು ತವರಿನ ನೆಲದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಇನ್ನಷ್ಟು ಪದಕಗಳನ್ನು ಗೆಲ್ಲುವ ನಿರೀಕ್ಷೆಯೂ ಹೆಚ್ಚಾಗಿದೆ.
ಕಾಮನ್‌ವೆಲ್ತ್ ಧ್ವಜ ಮತ್ತು ಬ್ಯಾಟನ್ ಸ್ವೀಕರಿಸಿದ ಕ್ಷಣದಿಂದಲೇ ಭಾರತದಲ್ಲಿ 2030ರ ಕ್ರೀಡಾಕೂಟದ ಕೌಂಟ್‌ಡೌನ್ ಆರಂಭವಾಗಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ ವಿಶ್ವಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲು ದೇಶ ಸಜ್ಜಾಗುತ್ತಿದೆ.
ಇದನ್ನು ಓದಿ : https://vijayatimes.com/cauvery-dispute-all-party-meeting/