ಬಿಜೆಪಿ ಶಾಸಕ(BJP MLA) ಮತ್ತು ಹಿಮಾಚಲ(Himachal Pradesh) ವಿಧಾನಸಭೆಯ ಡೆಪ್ಯುಟಿ ಸ್ಪೀಕರ್(Deputy Speaker) ಹನ್ಸ್ ರಾಜ್(Hans Raj) ಸರ್ಕಾರಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಚಂಬಾ(Chamba) ಜಿಲ್ಲೆಯ(District) ಚುರಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಹನ್ಸ್ ರಾಜ್ ಅವರು ಗುರುವಾರ ರೈಲಾದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಿಜೆಪಿ ಶಾಸಕರು ತರಗತಿಯೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಭಾಷಣೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ವಿದ್ಯಾರ್ಥಿಯನ್ನು ಆತ ಅನಾರೋಗ್ಯದಿಂದ ಬಳಲುತ್ತಿದ್ದಾನೆಯೇ ಎಂದು ಕೇಳುತ್ತಾರೆ.
ಆದ್ರೆ, ಇನ್ನೊಬ್ಬ ಹುಡುಗ ನಗುತ್ತಿರುವುದನ್ನು ಗಮನಿಸಿದಾಗ ಅವನ ಬಳಿ ಹೋಗಿ “ಕ್ಯುನ್ ಹಾಸ್ ರಹಾ ಹೈ ಬಾಯ್ (ನೀವು ಯಾಕೆ ನಗುತ್ತಿದ್ದೀರಿ) ಎಂದು ಹನ್ಸ್ ರಾಜ್ ವಿದ್ಯಾರ್ಥಿಯ ಬಳಿಗೆ ಹೋಗಿ ಅವನಿಗೆ ಕಪಾಳಕ್ಕೆ ಹೊಡೆದಿದ್ದಾರೆ. ಕಪಾಳಕ್ಕೆ ಹೊಡೆದಾಗ ಶಬ್ದವು ವಿಡಿಯೊದಲ್ಲಿ ಸ್ಪಷ್ಟವಾಗಿ ಕೇಳಿಸಿದೆ. ಶಾಸಕರಿಂದ ಕಪಾಳಮೋಕ್ಷಕ್ಕೆ ಒಳಗಾದ ವಿದ್ಯಾರ್ಥಿಯ ಕುಟುಂಬದವರು ಇದುವರೆಗೂ ದೂರು ದಾಖಲಿಸಿಲ್ಲ. ವಾಸ್ತವವಾಗಿ, ಹುಡುಗನ ತಂದೆ ರಿಯಾಜ್ ಮೊಹಮ್ಮದ್, ಹನ್ಸ್ ರಾಜ್ ಅವರು ನನ್ನ ಮಗನನ್ನು ಹೊಡೆದಿಲ್ಲ,

ಆದರೆ ‘ಪ್ರೀತಿ ಮತ್ತು ವಾತ್ಸಲ್ಯ’ದಿಂದ ಅವನನ್ನು ಮುಟ್ಟಿದ್ದಾರೆ ಅಷ್ಟೇ ಎಂದು ಹೇಳಿ ಹನ್ಸ್ ರಾಜ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆ ದುರದೃಷ್ಟಕರ, ಉಪ ಸ್ಪೀಕರ್ ಹನ್ಸ್ ರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲವರು ಒತ್ತಾಯಿಸಿದ್ದಾರೆ. ವಿಧಾನಸಭಾ ಉಪಸಭಾಪತಿ ಮಾನಸಿಕ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಬೇಕು! ಈ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು,
ಮುಖ್ಯಮಂತ್ರಿ ಅವರ ವಿರುದ್ಧ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿಕ್ರಮಾದಿತ್ಯ ಅವರು ಹನ್ಸ್ ರಾಜ್ ವಿರುದ್ಧ ಗುಡುಗಿದ್ದಾರೆ.