ಕೆನಡಾದಲ್ಲಿ ಹಂಟಾವೈರಸ್ (hantavirus infection in canada) ಭೀತಿ ಹೆಚ್ಚಳ
MV Hondius ಹಡಗಿನಲ್ಲಿ ಹಂಟಾವೈರಸ್ ಸೋಂಕು ದೃಢ, ಮೂವರು ಸಾವು
ಹಂಟಾವೈರಸ್ ಪ್ರಕರಣಗಳಿಂದ ಕೆನಡಾ ಆರೋಗ್ಯ ಇಲಾಖೆ ಅಲರ್ಟ್
ಕೊರೊನಾ ಮಹಾಮಾರಿಯಿಂದ ಇನ್ನೂ ಸಂಪೂರ್ಣವಾಗಿ (hantavirus infection in canada) ಚೇತರಿಸಿಕೊಳ್ಳದ ಜಗತ್ತಿಗೆ ಇದೀಗ ಮತ್ತೊಂದು ವೈರಸ್ ಆತಂಕ ಹೆಚ್ಚಿಸಿದೆ.
ಕೆನಡಾದಲ್ಲಿ ‘ಹಂಟಾವೈರಸ್’ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಕ್ರೂಸ್ ಹಡಗಿನಲ್ಲಿ ಪ್ರಯಾಣಿಸಿದ್ದ ಕೆಲವರಲ್ಲಿ ಸೋಂಕು ದೃಢಪಟ್ಟಿದೆ.
ಕೆನಡಾ ಸಾರ್ವಜನಿಕ ಆರೋಗ್ಯ ಸಂಸ್ಥೆ (PHAC) ನೀಡಿರುವ ಮಾಹಿತಿಯ ಪ್ರಕಾರ, ದಕ್ಷಿಣ ಅಮೆರಿಕಾ ಪ್ರವಾಸ ಮುಗಿಸಿ ಎಂವಿ ಹೊಂಡಿಯಸ್ (MV Hondius) ಕ್ರೂಸ್ ಹಡಗಿನಿಂದ ಮನೆಗೆ ಮರಳಿದ್ದ ನಾಲ್ವರು ಕೆನಡಿಯನ್ನರಲ್ಲಿ ಒಬ್ಬರಿಗೆ ಹಂಟಾವೈರಸ್ ಸೋಂಕು ದೃಢಪಟ್ಟಿದೆ.

ಸೋಂಕು ತಗುಲಿರುವ ವ್ಯಕ್ತಿಯನ್ನು ತಕ್ಷಣವೇ ಐಸೋಲೇಷನ್‌ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ, ಸೋಂಕಿತ ವ್ಯಕ್ತಿಯೊಂದಿಗೆ ಪ್ರಯಾಣಿಸಿದ್ದ ಮತ್ತೊಬ್ಬರ ಪರೀಕ್ಷೆ ನೆಗೆಟಿವ್ (Negative) ಬಂದಿದೆ. ಉಳಿದ ಇಬ್ಬರನ್ನು ವೈದ್ಯಕೀಯ ನಿಗಾದಲ್ಲಿಟ್ಟುಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಮೇ 10ರಂದು ಬ್ರಿಟಿಷ್ ಕೊಲಂಬಿಯಾಗೆ ತಲುಪಿದ ತಕ್ಷಣವೇ ಇವರನ್ನು (hantavirus infection in canada) ಪ್ರತ್ಯೇಕ ವಾಸದಲ್ಲಿರಿಸಲಾಗಿತ್ತು.
ಸೋಂಕಿತ ವ್ಯಕ್ತಿ ಮತ್ತು ಅವರೊಂದಿಗೆ ಇದ್ದ ಮಹಿಳೆ ಯುಕಾನ್ ಪ್ರದೇಶದ ನಿವಾಸಿಗಳಾಗಿದ್ದು, ವಿಕ್ಟೋರಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣಗಳು ಬೆಳಕಿಗೆ ಬಂದ ನಂತರ ಕೆನಡಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ.
ಈ ಸೋಂಕು ಹಡಗಿನ ಒಳಗಿನ ಪರಿಸರದಲ್ಲೇ ಹರಡಿರುವ ಸಾಧ್ಯತೆ ಹೆಚ್ಚಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಈಗಾಗಲೇ ಹಡಗಿನ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಕನಿಷ್ಠ 10 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರಲ್ಲಿ ಡಚ್ ದಂಪತಿಗಳೂ ಸೇರಿದ್ದು, ದಕ್ಷಿಣ ಅಮೆರಿಕಾ ಪ್ರವಾಸದ ವೇಳೆ ಸೋಂಕಿಗೆ ಒಳಗಾಗಿರಬಹುದು ಎಂದು ಹೇಳಲಾಗಿದೆ.
ಹಡಗಿನ ಸೀಮಿತ ಮತ್ತು ಮುಚ್ಚಿದ ವಾತಾವರಣವು ಸೋಂಕು ಹರಡುವಿಕೆಗೆ ಕಾರಣವಾಗಿರಬಹುದು ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ.
ಸಾಮಾನ್ಯವಾಗಿ ಹಂಟಾವೈರಸ್ (Hantavirus) ಇಲಿಗಳ ತ್ಯಾಜ್ಯ ಅಥವಾ ಮೂತ್ರದ ಮೂಲಕ ಮನುಷ್ಯರಿಗೆ ಹರಡುತ್ತದೆ.
ಆದರೆ ಈ ಪ್ರಕರಣದಲ್ಲಿ ಪತ್ತೆಯಾದ ‘ಆಂಡಿಸ್ ತಳಿ’ (Andes strain) ವಿಶೇಷವಾಗಿ ಆತಂಕಕಾರಿ ಎಂದು ಹೇಳಲಾಗುತ್ತಿದೆ.
ಏಕೆಂದರೆ, ಈ ತಳಿ ಮನುಷ್ಯರಿಂದ ಮನುಷ್ಯರಿಗೆ ನಿಕಟ ಸಂಪರ್ಕದ ಮೂಲಕ ಹರಡುವ ಸಾಮರ್ಥ್ಯ ಹೊಂದಿದೆ.
ಸೋಂಕು ತಗುಲಿದವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು ಮತ್ತು ಕೆಲ ಸಂದರ್ಭಗಳಲ್ಲಿ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯೂ ಇದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಈ ವೈರಸ್‌ನ ಮರಣ ಪ್ರಮಾಣವು ಶೇಕಡಾ 40 ರಷ್ಟಿರಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಆದರೆ ಕೆನಡಾ ಸಾರ್ವಜನಿಕ ಆರೋಗ್ಯ ಸಂಸ್ಥೆ ಸಾಮಾನ್ಯ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈಗಾಗಲೇ ದೃಢಪಟ್ಟ ಎಲ್ಲಾ ಪ್ರಕರಣಗಳೂ
ಕ್ರೂಸ್ ಹಡಗು ಸಂಪರ್ಕಿತವಾಗಿದ್ದು, ಸಮುದಾಯದಲ್ಲಿ ವೈರಸ್ ಹರಡಿರುವ ಯಾವುದೇ ಸೂಚನೆಗಳು ಕಂಡುಬಂದಿಲ್ಲ ಎಂದು ತಿಳಿಸಿದೆ.
ಕೋವಿಡ್‌ನಂತೆ ಈ ವೈರಸ್ ಸುಲಭವಾಗಿ ಗಾಳಿಯಲ್ಲಿ ಹರಡುವುದಿಲ್ಲ ಮತ್ತು ದೀರ್ಘಕಾಲದ ನಿಕಟ ಸಂಪರ್ಕದಿಂದ ಮಾತ್ರ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಆದರೂ ಜನರು ಸ್ವಚ್ಛತೆ ಕಾಪಾಡಿಕೊಳ್ಳುವುದು, ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಇದನ್ನು ಓದಿ : https://vijayatimes.com/priayank-kharge-shows-outrage-against-modis-advice/