Gadag Hanamantha Malali – ಈ ಲೇಖನದ ಆರಂಭದಲ್ಲೇ ನಾವು ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ. ವಿಜಯಟೈಮ್ಸ್ ಹೋರಾಟ (Vijayatimes Struggle) ಪಾರಂಪರಿಕ ವೈದ್ಯ ಪದ್ಧತಿಯ (Medicine) ವಿರುದ್ಧವಲ್ಲ. ನಮಗೆ ಪಾರಂಪರಿಕ, ಆಯುರ್ವೇದ ವೈದ್ಯ ಪದ್ಧತಿಯ (Ayurvedic system of medicine) ಬಗ್ಗೆ ಅಪಾರ ಗೌರವ ಇದೆ. ಆದ್ರೆ ಪಾರಂಪರಿಕ ವೈದ್ಯ ಪದ್ಧತಿ, ಆಯುರ್ವೇದದ ಹೆಸರು ಹೇಳಿ ಜನರನ್ನು ವಂಚಿಸುತ್ತಿರುವವರ (Cheat people) ವಿರುದ್ಧ ನಮ್ಮ ಹೋರಾಟ. ಪಾರಂಪರಿಕ ಹಾಗೂ ಆಯುರ್ವೇದ ವೈದ್ಯ ಪದ್ಧತಿಗೆ ಕಳಂಕ ತರುತ್ತಿರುವ ನಕಲಿ ವೈದ್ಯರ (Fake doctor) ವಿರುದ್ಧ ಹೋರಾಟವಷ್ಟೇ.
ಹಣಮಂತ ಮಳಲಿ ಎಂಬ ನಕಲಿ ವೈದ್ಯನ (A fake doctor called Hanamantha Malali) ಅಸಲಿಯತ್ತನ್ನು ವಿಜಯಟೈಮ್ಸ್ (Vijaya Times) ಇತ್ತೀಚೆಗೆ ಬಯಲು ಮಾಡಿತ್ತು. ಈತ ತಾನು ಪಾರಂಪರಿಕ ವೈದ್ಯ ಅಂತ ಹೇಳಿಕೊಂಡು (Claiming that he is a traditional healer) ತಾನು ಕ್ಯಾನ್ಸರ್, ಏಡ್ಸ್ (Cancer, AIDS) ರೋಗವನ್ನು ಸಂಪೂರ್ಣ ಗುಣಪಡಿಸುತ್ತೇನೆ ಅಂತ ಹೇಳಿಕೊಳ್ಳುತ್ತಾನೆ. ಅಲ್ಲದೆ ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನು (Supplementary documents required) ಒದಗಿಸುತ್ತೇನೆ. ತನ್ನ ಬಳಿ ರೋಗ ವಾಸಿ ಮಾಡಿದ್ದಕ್ಕೆ ನೂರಾರು ರೆಕಾರ್ಡ್ ಇದೆ (Hundreds of records) ಎಂದು ತಾನೇ ಹೇಳಿಕೊಳ್ಳುತ್ತಾನೆ.
ಆದ್ರೆ ಈತನ ಬಳಿ ನೀವೇ ಕ್ಯಾನ್ಸರ್, ಏಡ್ಸ್ ಗುಣಪಡಿಸಿದ್ದೀರಿ ಅನ್ನೋದಕ್ಕೆ ದಾಖಲೆ ಕೊಡಿ ಅಂತ ಕೇಳಿದ್ರೆ ದಾಖಲೆಗಳನ್ನು ಒದಗಿಸುತ್ತಿಲ್ಲ (Documents are not provided) . ನಾನೊಬ್ಬ ಪಾರಂಪರಿಕ ವೈದ್ಯ ನನ್ನ ಬಳಿ ದಾಖಲೆಗಳು ಇರೋದಿಲ್ಲ ಅಂತ ಆ ಬಳಿಕ ಸ್ಪಷ್ಟನೆ ಕೊಡ್ತಾನೆ. ತಾನು ಸಾರ್ವಜನಿಕವಾಗಿ ದಾಖಲೆ ಕೊಡುತ್ತೇನೆ ಎಂದು ಮೈಕ್ನಲ್ಲಿ ಹೇಳಿದ ಮೇಲೆ ದಾಖಲೆಗಳನ್ನು ಕೊಡಬೇಕಲ್ಲವೇ? ಹಾಗಾದ್ರೆ ಈತ ಅಮಾಯಕ, ಅಸಹಾಯಕ ಬಡ ರೋಗಿಗಳನ್ನು ವಂಚಿಸಲು (Cheat poor patients) ಇಂಥಾ ಸುಳ್ಳು ಹೇಳಿಕಗಳನ್ನು, ಬಿಲ್ಡಪ್ಗಳನ್ನು ಮಾಡುತ್ತಿರುವುದೇ? (Doing buildups? ) ಈತನ ಸುಳ್ಳು ಹೇಳಿಕೆಗಳನ್ನು ನಂಬಿ ಜನರು ಮೋಸ ಹೋಗುತ್ತಿಲ್ಲವೆ?
ಕ್ಯಾನ್ಸರ್ ಒಂದು ವೈರಸ್ನಿಂದ ಬರುತ್ತೆ (Cancer is caused by a virus) : ಕ್ಯಾನ್ಸರ್ ಒಂದು ವೈರಸ್ನಿಂದ ಬರುತ್ತೆ ಅಂತ ಸ್ವತ: ಈ ಹಣಮಂತ ಮಳಲಿಯೇ (Hanumantha malali) ಜನರಿಗೆ ಭಾಷಣದಲ್ಲಿ ಹೇಳುತ್ತಾನೆ https://www.facebook.com/100002161337936/videos/1223493592043305/ ( ಈತನ ಭಾಷಣದ ವಿಡಿಯೋ ಈ ಲಿಂಕ್ನಲ್ಲಿ ಇದೆ) ಈತ ಕ್ಯಾನ್ಸರ್ ಒಂದು ಬಗೆಯ ವೈರಸ್ನಿಂದ ಬರುತ್ತೆ ಅಂತ ಜನರಿಗೆ ಹೇಳಿದಾಗ ವಿಜಯಟೈಮ್ಸ್ನ ಮುಖ್ಯ ಸಂಪಾದಕಿಯಾದ ವಿಜಯಲಕ್ಷ್ಮಿ ಶಿಬರೂರು (Vijayalakshmi Shibaruru, Chief Editor of Vijaya Times) ಅವರು ಹಣಮಂತ ಮಳಲಿಗೆ ಯಾವ ವೈರಸ್ನಿಂದ ಬರುತ್ತೆ? ಅಂತ ಪ್ರಶ್ನೆ ಕೇಳಿದ್ದು. ಈತ ಕ್ಯಾನ್ಸರ್ ಒಂದು ವೈರಸ್ನಿಂದ ಬರುತ್ತೆ ಅಂತ ಹೇಳಿದ ಮೇಲೆ ಅದು ಯಾವ ವೈರಸ್ನಿಂದ ಬರುತ್ತೆ ಅನ್ನೋ ಪ್ರಶ್ನೆ ಕೇಳುವ ಹಕ್ಕು ಸಾರ್ವಜನಿಕರಿಗೆ, ರೋಗಿಗಳಿಗೆ ಇಲ್ಲವೇ? ತನಗೆ ಯಾವ ವೈರಸ್ ಅಂತ ಗೊತ್ತಿಲ್ಲದೆ ಮೇಲೆ (Without knowing it is a virus) ಆ ವೈರಸ್ ಅನ್ನು ಪ್ರಸ್ತಾಪಿಸುವ ಅಧಿಕ ಪ್ರಸಂಗ ಈತನಿಗೇಕೆ? ಅಲ್ಲದೆ ಹಣಮಂತ ಮಳಲಿ ತನ್ನನ್ನು ತಾನು “ಡಾಕ್ಟರ್ ಹಣಮಂತ ಮಳಲಿ” ಅಂತ ಹೇಳಿಕೊಳ್ಳುತ್ತಿದ್ದಾನೆ. ಹಾಗಾದ್ರೆ ಪಾರಂಪರಿಕ ವೈದ್ಯರೂ ಕಾನೂನು ಪ್ರಕಾರ ʼಡಾಕ್ಟರ್ʼ ಪದವಿಯನ್ನು ಹಾಕಿಕೊಳ್ಳಬಹುದೇ? ಈ ರೀತಿ ಪದವಿಯನ್ನು ಹಾಕಿಕೊಂಡು ಈತ ಜನರನ್ನು ವಂಚಿಸುತ್ತಿರುವುದಲ್ಲವೇ? ಇದು ಕಾನೂನು ಬಾಹಿರ ಕೃತ್ಯ ನಡೆಸುತ್ತಿರುವುದಲ್ಲವೇ? (Isn’t this illegal? )
ಎಲ್ಲಾ ಬಗೆಯ ಕ್ಯಾನ್ಸರ್ಗಳು ಒಂದೇ: ಹಣಮಂತ ಮಳಲಿ ತನ್ನ ಮನೆ ಮುಂದೆ ನೂರಾರು ಕ್ಯಾನ್ಸರ್ ರೋಗಿಗಳನ್ನು ಗುಡ್ಡೆ ಹಾಕಿ, ಎಲ್ಲಾ ಬಗೆಯ ಕ್ಯಾನ್ಸರ್ ಒಂದೇ (All types of cancer are the same) . ಬೇರೆ ಬೇರೆ ಕ್ಯಾನ್ಸರ್ ಅಂತ ಇಲ್ಲ. ಬ್ರೆಸ್ಟ್, ಬ್ರೈನ್, ಬ್ಲಡ್, ಲಿವರ್ ಇತ್ಯಾದಿ (Breast, Brain, Blood, Liver etc ) ಎಲ್ಲಾ ಬಗೆಯ ಕ್ಯಾನ್ಸರ್ಗೆ ಒಂದೇ ಮದ್ದು ಅಂತ ಘಂಟಾಘೋಷವಾಗಿ ಅನೌನ್ಸ್ ಮಾಡ್ತಾನೆ. https://www.facebook.com/100002161337936/videos/1223493592043305/ ( ಈತನ ಭಾಷಣದ ವಿಡಿಯೋ ಈ ಲಿಂಕ್ನಲ್ಲಿ ಇದೆ)
ಈತನ ಈ ಹೇಳಿಕೆಯನ್ನು ರಾಜ್ಯ ಸರ್ಕಾರ, ಕ್ಯಾನ್ಸರ್ ಸೊಸೈಟಿ (State Government, Cancer Society) ಹಾಗೂ ಕ್ಯಾನ್ಸರ್ ಬಗ್ಗೆ ಅಧ್ಯಯನ ಮಾಡಿರುವ ಮತ್ತು ಮಾಡುತ್ತಿರುವ ಎಲ್ಲಾ ಸಂಸ್ಥೆಗಳು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. (Organizations should take this very seriously.) ಒಂದು ವೇಳೆ ಈತ ಹೇಳುವ ಪ್ರಕಾರ ಎಲ್ಲಾ ಕ್ಯಾನ್ಸರ್ಗಳು ಒಂದೇ, ಎಲ್ಲಾ ಬಗೆಯ ಕ್ಯಾನ್ಸರ್ಗೆ ಒಂದು ಬಗೆಯ ಔಷಧಿ ಅಂತಾದ್ರೆ ಇತರ ವೈದ್ಯ ಪದ್ಧತಿಗಳು ಅಂದ್ರೆ ಅಲೋಪತಿ (Allopathy) ಜನರನ್ನು ವಂಚಿಸುತ್ತಿವೆ. ಜನರಿಗೆ ಮೋಸ ಮಾಡಿ, ಸುಳ್ಳು ಹೇಳಿ ಲಕ್ಷಾಂತರ ರೂಪಾಯಿ ಹಣ ಲೂಟಿ (Looting money worth millions of rupees) ಮಾಡುತ್ತಿವೆ. ಹಾಗಾದ್ರೆ ಈ ವೈದ್ಯ ಪದ್ಧತಿ ಮತ್ತು ವೈದ್ಯರ ವಿರುದ್ಧ ಸರ್ಕಾರ ಮತ್ತು ನ್ಯಾಯಾಲಯಗಳು ಕ್ರಮ ಏಕೆ ಕೈಗೊಳ್ಳುತ್ತಿಲ್ಲ?
ಎಲ್ಲಾ ಸ್ಟೇಜ್ ಕ್ಯಾನ್ಸರ್ಗೆ ಒಂದೇ ಬಗೆಯ ಔಷಧಿ: ಈ ಹಣಮಂತ ಮಳಲಿ ಹೇಳುವ ಪ್ರಕಾರ ಕ್ಯಾನ್ಸರ್ (Cancer) ಯಾವುದೇ ಸ್ಟೇಜ್ನಲ್ಲಿ ಇರಲಿ, ಇದಕ್ಕೆ ಒಂದೇ ಬಗೆಯ ಔಷಧಿಯಂತೆ (One type of medicine) . ಕ್ಯಾನ್ಸರ್ ಯಾವ ಸ್ಟೇಜ್ನಲ್ಲಿದೆ (Which Stage Cancer) ಅಂತ ಹೇಳುವ ಅವಶ್ಯಕತೆಯೇ ಇಲ್ಲವಂತೆ. ಎಲ್ಲಾ ಸ್ಟೇಜ್ ಕ್ಯಾನ್ಸರ್ಗೂ ಒಂದೇ ಬಗೆಯ ಔಷಧಿ ಅಂತ ಈತ ರೋಗಿಗಳಿಗೆ ಹೇಳುತ್ತಾನೆ. https://www.facebook.com/100002161337936/videos/1223493592043305/ ( ಈತನ ಭಾಷಣದ ವಿಡಿಯೋ ಈ ಲಿಂಕ್ನಲ್ಲಿ ಇದೆ)ಹಾಗಾದ್ರೆ ಕ್ಯಾನ್ಸರ್ನಲ್ಲಿ ವಿವಿಧ ಸ್ಟೇಜ್ ಅಂತ ವಿಂಗಡಿಸಿದ್ದೇಕೆ? ಉಳಿದ ವೈದ್ಯ ಪದ್ಧತಿಗಳು ಜನರ ದಾರಿ ತಪ್ಪಿಸುತ್ತಿವೆಯೇ? ಅಥವಾ ಈ ಮಳಲಿ ಜನರ ದಾರಿ ತಪ್ಪಿಸಿ, ಜನರ ಕ್ಯಾನ್ಸರ್ ರೋಗ (Cancer) ಎಷ್ಟೇ ಉಲ್ಬಣಗೊಂಡಿರಲಿ, ಅವರು ಸಾಯೋ ತನಕ ತನ್ನ ಔಷಧಿ ಕಿಟ್ ಅನ್ನು ಪಡೆದುಕೊಳ್ಳಲಿ ತನ್ನ ಜೇಬು ತುಂಬಲಿ ಅನ್ನೋ ದುರಾಲೋಚನೆಯೇ?
ಕಿಮೋ, ರೇಡಿಯೇಷನ್ ಮಾಡಬೇಡಿ: ಹಣಮಂತ ಮಳಲಿ ರೋಗಿಗಳನ್ನುದ್ದೇಶಿಸಿ ಮಾಡುವ ಭಾಷಣದಲ್ಲಿ ಒಂದು ವಿಚಾರವನ್ನು ಒತ್ತಿ ಒತ್ತಿ ಹೇಳುತ್ತಾನೆ. ಅದೇನಂದ್ರೆ ತನ್ನ ಬಳಿ ೩೦-೪೦ ಸಲ ರೇಡಿಯೇಷನ್ (30-40 times radiation) , ಕಿಮೋ (Chemo) ಮಾಡಿದವರು ಬಂದಿದ್ದಾರೆ. ತನ್ನ ಔಷಧಿ ಪಡೆದ (Received medication) ಬಳಿಕ ಅದನ್ನು ಮಾಡುವುದನ್ನೇ ನಿಲ್ಲಿಸಿದ್ದಾರೆ (Stopped) . ನೀವು ರೇಡಿಯೇಷನ್, ಕಿಮೋ (Radiation, Chemo) ಮಾಡುವ ಅವಶ್ಯಕತೆಯೇ ಇಲ್ಲ. ಬೇರೆ ಔಷಧಿ, ಚಿಕಿತ್ಸೆ ಮುಂದುವರೆಸುವ ಅವಶ್ಯಕತೆಯೇ ಇಲ್ಲ (There is no need to continue treatment with other medicines) ಅಂತ ಪದೇ ಪದೇ ಹೇಳುತ್ತಾನೆ.
ಒಂದು ಲಿಂಬೆ ಹಣ್ಣು ಒಂದು ಕಿಮೋಗೆ ಸಮ (One Lemon Equal To Chemo) . ಹಾಗಾಗಿ ತಾವು ಕಿಮೋ ಮಾಡುವ ಬದಲು ಒಂದು ಲೋಟ ನಿಂಬೆ ರಸ ಕುಡಿಯಿರಿ (Drink Lemon Juice Rather Than Chemo) ಅಂತ ಹೇಳುತ್ತಾನೆ. https://www.facebook.com/100002161337936/videos/1223493592043305/ (ಈತನ ಭಾಷಣದ ವಿಡಿಯೋ ಈ ಲಿಂಕ್ನಲ್ಲಿ ಇದೆ) ಅಷ್ಟೇ ಅಲ್ಲ, ಆಡಿನ ಮೂತ್ರ ಕಣ್ಣಿಗೆ ಹಾಕಿದ್ರೆ ಕಣ್ಣಿನ ಪೊರೆ ಹೋಗುತ್ತೆ (If you put goat’s urine in your eyes, cataracts will go away) . ಆಡಿನ ಹಾಲು (Goat Milk) ಕುಡಿದ್ರೆ ಒಂದೇ ವಾರದಲ್ಲಿ ಕ್ಷಯ ರೋಗ (Tuberculosis) ನಿವಾರಣೆಯಾಗುತ್ತೆ ಅನ್ನೋ ಹೇಳಿಕೆಗಳನ್ನು ಕೊಟ್ಟು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ (Social networks) ಪ್ರಸಾರ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾನೆ. ನವಜೋತ್ ಸಿಂಗ್ ಸಿದ್ದು (Navjot Singh Sidhu) ಕ್ಯಾನ್ಸರ್ ಪೀಡಿತೆ ಪತ್ನಿಗೆ ಲಿಂಬೆಹಣ್ಣಿನ ರಸ, ಅರಸಿನ ಕುಡಿಸಿ (Drink lemon juice and turmeric) ಕಾಯಿಲೆ ಗುಣಪಡಿಸಿದೆ ಅಂತ ಹೇಳಿಕೆ ಕೊಟ್ಟು ಆ ಬಳಿಕ ಸಿವಿಕ್ ಸೊಸೈಟಿಯಿಂದ ೮೪೦ ಕೋಟಿ ದಂಡದ (840 crore fine) ನೋಟಿಸ್ ಕೊಡಿಸಿದ ಬಳಿಕ ಕ್ಷಮೆ ಯಾಚಿಸಿದ. ತಾನು ಕೊಟ್ಟ ಹೇಳಿಕೆಯನ್ನು ಹಿಂಪಡೆದು, ತಾನು ತನ್ನ ಹೆಂಡತಿಗೆ ವೈದ್ಯರ ಸಲಹೆಯಂತೆ ಕಿಮೋ, ರೆಡಿಯೇಷನ್ ಇತರೆ ಔಷಧಿ ಕೊಡಿಸಿದರ ಪರಿಣಾಮವಾಗಿ ಕ್ಯಾನ್ಸರ್ ಗುಣಮುಖವಾಯಿತು. ಆ ಬಳಿಕ ಶಿಸ್ತು ಬದ್ಧ ಆಹಾರ ಕ್ರಮ ಅನುಸರಿಸಿದೆವು. ಆದ್ದರಿಂದ ನನ್ನ ಪತ್ನಿ ಕ್ಯಾನ್ಸರ್ನಿಂದ ಮುಕ್ತರಾದ್ರು ಅಂತ ಹೇಳಿಕೆಯನ್ನು ಬದಲಾಯಿಸಿದ.
ಹಾಗಾದ್ರೆ ಹಣಮಂತ ಮಳಲಿ ಈ ರೀತಿ ಹೇಳಿಕೆ ಕೊಟ್ಟು ಎಷ್ಟೋ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ (People have lost their lives) . ತಾವು ಪಡೆದ ಚಿಕಿತ್ಸೆಯನ್ನು ನಿಲ್ಲಿಸಿ, ಈತನ ಸಲಹೆ ಮೇರೆ ಈತ ಕೊಡುವ ಜೇನುತುಪ್ಪ(ನಕಲಿ), (Honey (fake),) ದನದ ತುಪ್ಪ, (Cow Ghee) ಭಸ್ಮ ( ಹೆಸರಿಲ್ಲ) (Bhasma (no name) , ಪ್ರಜ್ಞಾ ಬಿಂದು(ಕಣ್ಣಿಗೆ ಹಾಕುವುದು) (Prajna Bindu (For Eyes)) , ಗೋಧಿ ಹುಲ್ಲಿನ ಪುಡಿ (Wheat grass powder), ಮಸಾಜ್ ಎಣ್ಣೆ (Masag Oil) , ಅರಸಿನ ಪುಡಿ (Turmiric Power) ಟ್ಯಾಬ್ಲೆಟ್ ಅನ್ನು ಸೇವಿಸುತ್ತಿದ್ದಾರೆ. ಇದನ್ನು ಎರಡೂವರೆ ತಿಂಗಳು ಸೇವಿಸಬೇಕು. ಈ ರೀತಿ ಐದಾರು ಬಾರಿ ಬಂದು ಈ ಕಿಟ್ಟನ್ನು ಪಡೆಯಬೇಕು. ಆದ್ರೆ ಈತನ ಸಲಹೆ ಮೇರೆ ರೇಡಿಯೇಷನ್, ಕಿಮೋ ಮತ್ತು ಇತರ ಚಿಕಿತ್ಸೆ ತ್ಯಜಿಸಿ (Avoid radiation, chemo and other treatments) ಈತ ಕೊಡೋ ಔಷಧಿ ಸೇವಿಸಿ, ಕ್ಯಾನ್ಸರ್, ಏಡ್ಸ್ ಮತ್ತಷ್ಟು (Cancer, AIDS etc) ಉಲ್ಬಣಗೊಂಡು ಮುಂದಿನ ಸ್ಟೇಜ್ಗಳಿಗೆ ತಲುಪಿ, ಕೊನೆಗೆ ಚಿಕಿತ್ಸೆಯೇ ಮಾಡಲಾಗದೆ ಸತ್ತು ಹೋದ ನೂರಾರು ಮಂದಿಯ ದಾಖಲೆ ವಿಜಯಟೈಮ್ಸ್ ಬಳಿ ಇದೆ.
https://www.facebook.com/100002161337936/videos/1223493592043305/ (ಈತನ ಔಷಧಿ ಪಡೆದು ಸಾವನ್ನಪ್ಪಿದವರ ವಿಡಿಯೋ ತುಣುಕು ) ಈ ಪ್ರಶ್ನೆಗಳಿಗೆ ಹಣಮಂತ ಮಳಲಿಯ ಬಳಿ ಉತ್ತರ ಇಲ್ಲ. ಈತ ತನ್ನ ಇಂಥಾ ಹೇಳಿಕೆಯ ಮೂಲಕ ಇತರ ವೈದ್ಯ ಪದ್ಧತಿಯ ಬಗ್ಗೆ ಜನಗಿರುವ ನಂಬಿಕೆಯನ್ನು ಹಾಳು ಮಾಡುತ್ತಿರುವುದಲ್ಲವೆ? ಈತನ ಇಂಥಾ ಹೇಳಿಕೆಗೆ ಪುರಾವೆ ದಾಖಲೆಗಳಿದ್ದರೆ, ತನ್ನ ಔಷಧಿಯಿಂದಲೇ ಕ್ಯಾನ್ಸರ್ (Cancer from drugs) , ಏಡ್ಸ್ ಗುಣಪಡಿಸುತ್ತಿರುವುದಕ್ಕೆ ಆಧಾರಗಳಿದ್ದರೆ ಸಾಬೀತು ಪಡಿಸಲಿ. ಆದ್ರೆ ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಟ್ಟು ಜನರ ಜೀವದ ಜೊತೆ ಚಲ್ಲಾಟ ಆಡಲು ಈತನಿಗೆ ಅಧಿಕಾರ ಕೊಟ್ಟವರು ಯಾರು?
ಮಳಲಿ ಪಾರಂಪರಿಕ ವೈದ್ಯನೇ? : ಪಾರಂಪರಿಕ ವೈದ್ಯ (A traditional healer) ಅಂತ ಅನ್ನಿಸಿಕೊಳ್ಳಬೇಕಾದ್ರೆ ಮಳಲಿಯ ಮುತ್ತಾತ, ತಾತ, ತಂದೆ ಮತ್ತೆ ತಾನು ಈ ನಾಟಿ ವೈದ್ಯರಾಗಿದ್ದು, ತಲತಲಾಂತರಗಳಿಂದ ಗಿಡಮೂಲಿಕೆಗಳನ್ನು ಹೆಕ್ಕಿ ತಂದು, ತಾವೇ ಪ್ರಯೋಗಗಗಳನ್ನು ಮಾಡಿ, ಅದನ್ನು ರೋಗಿಗಳಿಗೆ (Patients) ನೀಡಿ, ಉತ್ತಮ ಫಲಿತಾಂಶ ಬಂದಿದ್ದರೆ ಅವರನ್ನು ಪಾರಂಪರಿಕ ವೈದ್ಯರು ಅಂತ ಹೇಳಬಹುದು. ಆದ್ರೆ ಇಂಥಾ ಇತಿಹಾಸ ಹಣಮಂತ ಮಳಲಿಯವರಿಗಿದೆಯಾ? (Does history belong to Malali?) ಇವರ ತಂದೆ, ತಾತ, ಮುತ್ತಾನೂ ಔಷಧಿ ಕೊಡುವವರೇ? ಈತನ ಪ್ರಯೋಗಾಲಯ ಎಲ್ಲಿದೆ? ಎಲ್ಲಿ ಔಷಧಿಯನ್ನು ತರುತ್ತಾರೆ? ಎಲ್ಲಿಂದ ಗಿಡಮೂಲಿಕೆಗಳು ಬರುತ್ತವೆ? ಕ್ಯಾನ್ಸರ್, ಏಡ್ಸ್, ಸೋರಿಯಾಸಿಸ್,(AIDS, Psoriasis) ಡಯಾಬಿಟೀಸ್ ರೋಗಗಗಳಿಗೆ ಔಷಧಿ (Medicine for the sick) ಕಂಡು ಹಿಡಿದಿರುವ ಬಗ್ಗೆ ದಾಖಲೆಗಳು ಎಲ್ಲಿವೆ? ಇದಕ್ಕೂ ಮಳಲಿಯವರೇ ಉತ್ತರ ಕೊಡಬೇಕಲ್ಲವೇ?
ಬಿಲ್ ಯಾಕೆ ಕೊಡಲ್ಲ? : ಹಣಮಂತ ಮಳಲಿ ತಾನು ಪಾರಂಪರಿಕ ವೈದ್ಯ ಅಂತ ಹೇಳಿಕೊಂಡು ಒಂದು ಔಷಧಿ ಕಿಟ್ಗೆ ನಾಲ್ಕು ಸಾವಿರ ರೂಪಾಯಿಯನ್ನು (Four thousand rupees for a medicine kit) ಸಂಗ್ರಹಿಸುತ್ತಿದ್ದಾರೆ. ಇವರ ಯಾವ ಔಷಧಿಗೂ ಲೇಬಲ್ ಇಲ್ಲ (The medicine also has no label) . ಆ ಔಷಧಿ ಒಳಗೆ ಏನೆಲ್ಲಾ ಅಂಶಗಳು ಸೇರಿವೆ ಅನ್ನೋದರ ವಿವರವೂ ಇಲ್ಲ. ಇವರು ಪಾರಂಪರಿಕ ವೈದ್ಯ ಪರಿಷತ್ನಿಂದ ಪ್ರಮಾಣ ಪತ್ರ ಹೊಂದಿದ್ದೇನೆ ಅಂತಾರೆ https://www.facebook.com/100002161337936/videos/1223493592043305/ (ಅದರೆ ಅದಕ್ಕೆ ದಾಖಲೆ ಕೊಡಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ ಅಂತ ನರಗುಂದ ತಾಲ್ಲೂಕು ವೈದ್ಯಾಧಿಕಾರಿಗಳು ಹೇಳುತ್ತಾರೆ) ಹಾಗಾದ್ರೆ ಇವರ ಪಾರಂಪರಿಕ ವೈದ್ಯ ಪರಿಷತ್ನಲ್ಲಿ ಔಷಧಿಗಳ ಬಗ್ಗೆ ನಿಖರ ಮಾಹಿತಿ ನೀಡಬೇಕು ಎಂದು ಷರತ್ತು ಇಲ್ಲವೆ? ಇತರೆ ಆಯುರ್ವೇದ ಔಷಧಿ ಕಂಪೆನಿಗಳು (Pharmaceutical companies) ತಮ್ಮ ಔಷಧಿಗಳ ಮೇಲೆ ಲೇಬಲ್ ಹಾಕಿ ವಿವರವನ್ನು ಕೊಡುವುದಿಲ್ಲವೇ? ಜೇನುತುಪ್ಪ, ದನದ ತುಪ್ಪ ಮುಂತಾದವುಗಳಿಗೆ ಎಫ್ಎಸ್ಎಸ್ಎಐಯಿಂದ ಪ್ರಮಾಣ ಪತ್ರ (Certificate from FSSAI) ಪಡೆಯಬೇಕಲ್ಲವೇ? ಉತ್ಪನ್ನ ಮಾರಾಟ ಮಾಡುವಾಗ ಜಿಎಸ್ಟಿ ಪಡೆಯಬೇಕಲ್ಲವೇ? (Shouldn’t get GST?) ರೋಗಿಗಳಿಗೆ ಬಿಲ್ ಕೊಡಬೇಕಲ್ಲವೇ? ತೆರಿಗೆ ಕಟ್ಟಬೇಕಲ್ಲವೇ? ಸರ್ಕಾರಕ್ಕೆ (Government) ಯಾವುದೇ ತೆರಿಗೆಯನ್ನು ಕಟ್ಟದೆ ಬಡ ರೋಗಿಗಳಿಂದ ಕಳೆದು ಮೂರು ವರ್ಷಗಳಿಂದ ಕೊಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿ ಅಕ್ರಮ ಆಸ್ತಿ, ಕಾರುಗಳನ್ನು ಸಂಪಾದಿಸಿರುತ್ತಾರೆ.
ಪುಟ್ಟ ಪುಟ್ಟ ಮಕ್ಕಳಿಗೂ ಕ್ಯಾನ್ಸರ್,ಏಡ್ಸ್ ಚಿಕಿತ್ಸೆ: ತಾನು ಎರಡೂವರೆ ತಿಂಗಳ ಪುಟ್ಟ ಮಗುವಿಗೂ ಔಷಧಿ ಕೊಟ್ಟು ಕ್ಯಾನ್ಸರ್ ಗುಣಪಡಿಸಿದ್ದೇನೆ (I have cured cancer) ಅಂತ ಹೇಳಿಕೊಳ್ಳುತ್ತಾರೆ. https://www.facebook.com/100002161337936/videos/1223493592043305/ (ಈತನ ಭಾಷಣದ ವಿಡಿಯೋ ಈ ಲಿಂಕ್ನಲ್ಲಿ ಇದೆ) ಆದ್ರೆ ಆ ಮಗುವಿನ ದಾಖಲೆ ಕೊಡಿ, ಮಗುವಿನ ವಿವರ ಕೊಡಿ ಅಂದ್ರೆ ಈತನ ಬಳಿ ಇಲ್ಲ. ಆದ್ರೆ ಈತ ಈ ರೀತಿ ಹೇಳಿ ಯೂಟ್ಯೂಬ್ನಲ್ಲಿ ಭಾಷಣವನ್ನು ಅಪ್ಲೋಡ್ ಮಾಡಿ್ದ್ದಾನೆ (He uploaded the speech on YouTube) . ಅದನ್ನು ಕೇಳಿದ ಎಷ್ಟೋ ಮಂದಿ ಅಮಾಯಕರು ಈತನ ಬಳಿ ತಮ್ಮ ರೋಗ ಪೀಡಿತ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಪುಟ್ಟ ಪುಟ್ಟ ಮಕ್ಕಳಿಗೆ ಔಷಧಿ ಕೊಡಿಸಿ ಅವರ ಪ್ರಾಣಕ್ಕೇ ಕುತ್ತು ತಂದ ನೂರಾರು ಉದಾಹರಣೆಗಳಿವೆ. https://www.facebook.com/100002161337936/videos/1223493592043305/ (ಈತನ ಚಿಕಿತ್ಸೆ ಪಡೆದು ಸಾವನ್ನಪ್ಪಿದ ಮಕ್ಕಳ ವಿಡಿಯೋ ಈ ಲಿಂಕ್ನಲ್ಲಿ ಇದೆ)
ನಕಲಿ ರೋಗಿಗಳನ್ನು ಸೃಷ್ಟಿಸುತ್ತಾನೆ : ಈ ಹಣಮಂತ ಮಳಲಿ ತಾನು ಕ್ಯಾನ್ಸರ್ ರೋಗ ಗುಣಪಡಿಸಿದ್ದೀನಿ. ಅವರು ಈ ಹಿಂದೆ ಕಿದ್ವಾಯಿ ಆಸ್ಪತ್ರೆಯಲ್ಲಿ (Kidwai Hospital) ೩೦ ಬಾರಿ ಕಿಮೋ ಮಾಡಿಸಿದ್ದಾರೆ, ೧೯ ಲಕ್ಷದ ಇಂಜೆಕ್ಷನ್ ಪಡೆದಿದ್ದಾರೆ. ಅಲ್ಲಿ ಗುಣ ಆಗಿಲ್ಲ. ಆದ್ರೆ ಆ ಬಳಿಕ ನನ್ನ ಬಳಿ ಬಂದು ಔಷಧಿ ಪಡೆದು ಸಂಪೂರ್ಣ ಗುಣಪಡಿಸಿದ್ದೇನೆ ಅಂತ ಕೆಲ ರೋಗಿಗಳ ಹೆಸರನ್ನು ಭಾಷಣದಲ್ಲಿ ಹೆಸರಿಸುತ್ತಾನೆ (Names patients in speech) . ಅಷ್ಟೇ ಅಲ್ಲ ಸೋರಿಯಾಸಿಸ್ ಗುಣಪಡಿಸಿದ್ದೀನಿ ಅಂತ ಬೇರೆ ಹೇಳುತ್ತಾನೆ. ಆದ್ರೆ ಆ ರೋಗಿಗಳ ಬಳಿ (Near patients) ಹೋಗಿ ವಿಜಯಟೈಮ್ಸ್ ವಿಚಾರಿಸಿದಾಗ ಅವರಿಗೆ ಕ್ಯಾನ್ಸರ್ ಕಾಯಿಲೆಯೇ ಆಗಿಲ್ಲ. ಕೆಲವರಿಗೆ ಟಿಬಿ ಆಗಿದೆ (TB) . ಇನ್ನು ಕೆಲವರಿಗೆ ಕಾಯಿಲೆ ಗುಣಮುಖವೇ ಆಗಿಲ್ಲ. ಇನ್ನು ಕೆಲವರಿಗೆ ಹಣ ಕೊಟ್ಟು ಹೇಳಿಸುತ್ತಾನೆ. ಹಾಗಾದ್ರೆ ಮಳಲಿ ಇಂಥಾ ಸುಳ್ಳು ಹೇಳುತ್ತಿರುವುದೇಕೆ? ಇಂಥಾ ನಾಟಕ (Drama) ಮಾಡುತ್ತಿರುವುದೇಕೆ? ಸುಳ್ಳು ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ (Fake Videos on youtube) ಅಪ್ಲೋಡ್ ಮಾಡುತ್ತಿರುವುದೇಕೆ? ಈತ ನಿಜವಾದ ಪಾರಂಪರಿಕ ವೈದ್ಯನೇ ಆಗಿದ್ದರೆ, ಈತನ ಔಷಧಿ ಕೆಲಸ ಮಾಡುತ್ತಿದ್ದರೆ ಇಂಥಾ ಸುಳ್ಳು ಹೇಳುವ ಅವಶ್ಯಕತೆ ಇದೆಯೇ? ಈತ ಪಾರಂಪರಿಕ ವೈದ್ಯ ಪದ್ಧತಿಯ ಹೆಸರಿಗೆ ಕಳಂಕ ತರುತ್ತಿರುವುದಲ್ಲವೇ?
ಆರಂಭಿಕ ಹಂತದಲ್ಲೇ ಮದ್ದು ಪಡೆದವರೂ ಸತ್ತಿದ್ದಾರೆ: ಈ ನಕಲಿ ವೈದ್ಯ (Fake Doctor) ಹಣಮಂತ ಮಳಲಿಯ ಬಳಿ ಆರಂಭಿಕ ಹಂತದಿಂದ ಕ್ಯಾನ್ಸರ್ (Cancer) ನಿಂದ ಬಳಲುತ್ತಿದ್ದವರೂ ಬಂದು ಔಷಧಿ ಪಡೆದುಕೊಂಡಿದ್ದಾರೆ. ಆದ್ರೆ ಗುಣಮುಖರಾಗದೆ, ಕ್ಯಾನ್ಸರ್ ಮುಂದಿನ ಹಂತ ತಲುಪಿ (Cancer reaches the next stage) ಭಾರೀ ಸಂಕಷ್ಟಕ್ಕೊಳಗಾದ ಮಂದಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದ್ರೆ ತನ್ನ ಔಷಧಿಯಿಂದಲೇ ಏಡ್ಸ್ (AIDS from drugs) , ಕ್ಯಾನ್ಸರ್ ಗುಣಪಡಿಸಿದ್ದೀನಿ ಅಂತ ಬೊಗಳೆ ಬಿಡುತ್ತಾ. ಆರ್ಎಸ್ಎಸ್ನ ಹೆಸರನ್ನೂ ದುರ್ಬಳಕೆ ಮಾಡಿ ಕಪ್ಪು ಹಣ ಸಂಪಾದಿಸುವ ಈ ಸುಳ್ಳುಗಾರ ಹಣಮಂತ ಮಳಲಿಯ ವಿರುದ್ಧ ಆರೋಗ್ಯ ಇಲಾಖೆ, ಆಯುಷ್ ಇಲಾಖೆ ಯಾಕೆ ಕ್ರಮಕೈಗೊಳ್ಳುತ್ತಿಲ್ಲ ಅನ್ನೋದು ವಿಜಯಟೈಮ್ಸ್ ಪ್ರಶ್ನೆ. (Vijaya Times Question)