Kodagu: ಕೊಡುಗು ಜಿಲ್ಲೆಯಲ್ಲಿ ಮೂರುದಿನಗಳಿಂದ ಎಡ ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ (Harangi) ಡ್ಯಾಂಗೆ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಹಾರಂಗಿ ಡ್ಯಾಂಗೆ (Dam) ಮತ್ತು ಕಾವೇರಿ ನದಿಗೆ ಜೀವಕಳೆ ಬಂದಂತೆ ಆಗಿದೆ. ಇದಲ್ಲದೆ ಕಾವೇರಿ ನದಿಯಲ್ಲಿ ನಾಲ್ಕರಿಂದ ಐದು ಪಟ್ಟು ನೀರಿನ ಪ್ರಮಾಣ ಜಾಸ್ತಿಯಾಗಿದೆ.
ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಅಲ್ಲಿನ ರೈತರಿಗೆ ಚೂರು ಸಮಾಧಾನ ಬಂದಂತೆ ಕಾಣುತ್ತಿದೆ. ಹೆಚ್ಚಿನ ಪ್ರಮಾಣದ ಮಳೆಯಿಂದಾಗಿ ಹಾರಂಗಿ ಡ್ಯಾಂಗೆ ನೀರಿನ ಪ್ರಮಾಣದ ಮಟ್ಟ ಕೂಡ ಏರಿಕೆಯಾಗಿದೆ. ಇದರಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ನಾಲ್ಕರಿಂದ ಐದು ಪಟ್ಟು ಜಾಸ್ತಿಯಾಗಿದೆ.
ಕಾವೇರಿ ನೀರನ್ನು ತಮಿಳುನಾಡಿಗೆ (Tamilnadu) ಹರಿಸುವ ವಿಚಾರವಾಗಿ ಕರ್ನಾಟಕದಲ್ಲಿ ಅಲ್ಲಲ್ಲಿ ಹೋರಾಟಗಳು ಜಾಸ್ತಿಯಾದಂತೆ ಮಳೆರಾಯ ಹೋರಾಟದ ಕಿಚ್ಚನ್ನು ತಣ್ಣಗಾಗಿಸುವಂತೆ ಮಾಡುತ್ತಿದೆ. ಹಾರಂಗಿ ಡ್ಯಾಂ ನಿಂದ ನೀರನ್ನು ನಿರಂತರವಾಗಿ ಹರಿಸಲಾಗುತ್ತಿದೆ ಎಂದು ರೈತರ ಆರೋಪಗಳು ಕೇಳಿಬರುತ್ತಿದ್ದವು. ಆದ್ರೆ ಇವಾಗ ಹಾರಂಗಿ ಡ್ಯಾಂಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ ಇದರಿಂದ ರೈತರು ನಿಟ್ಟುಸಿರು ಬಿಡುವಂತೆ ಆಗಿದೆ.
ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಜಾಸ್ತಿಯಾಗುತ್ತಿದ್ದಂತೆ ಹಾರಂಗಿ ಡ್ಯಾಂಗೆ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಹೀಗೆ ಮಳೆ ಮುಂದುವರಿದರೆ ಸಂಪೂರ್ಣವಾಗಿ ಹಾರಂಗಿ ಡ್ಯಾಂ (Dam) ತುಂಬುತ್ತದೆ. ಇದರಿಂದ ಕಾವೇರಿ ನದಿಯ ಒಳ ಅರಿವಿನ ಪ್ರಮಾಣ ಕೂಡ ಜಾಸ್ತಿಯಾಗುತ್ತದೆ ಇಲ್ಲಿನ ರೈತರಿಗೂ ಯಾವುದೇ ರೀತಿಯ ನೀರಿನ ಸಮಸ್ಯೆಯಾಗುವುದಿಲ್ಲ ಎಂದು ರೈತರು ಸಮಾಧಾನದಿಂದ ಇದ್ದಾರೆ.
ನಾಗರಾಜ್ (ಕೆ.ಕಲ್ಲಹಳ್ಳಿ).