Rahul Gandhi has Jinnah mentality: Minister Hardeep Singh Puri criticizes US
New York: ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಅಮೇರಿಕಾದಲ್ಲಿ ರಾಹುಲ್ ಗಾಂಧಿಯವರು ಮಾಡಿದ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಮೂರು ದಿನಗಳ ಅಮೇರಿಕಾ ಪ್ರವಾಸದ ವೇಳೆ ವರ್ಜೀನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ (Rahul Gandhi), ಸಭಿಕರಲ್ಲಿ ಒಬ್ಬ ಸಿಖ್ ಸದಸ್ಯನ ಕಡೆಗೆ ತಿರುಗಿ, ಅವರ ಹೆಸರನ್ನು ಕೇಳಿ, ನಂತರ “ಭಾರತದಲ್ಲಿನ ಹೋರಾಟ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಸಮಸ್ಯೆ ಇರುವುದು ಸಿಖ್ ಆಗಿ ಅವರು ಭಾರತದಲ್ಲಿ ಪೇಟವನ್ನು ಧರಿಸಲು ಅನುಮತಿಸುತ್ತಾರೆಯೇ ಎಂಬ ಬಗ್ಗೆ ಅಥವಾ, ಅವರು ಸಿಖ್ಖರಾಗಿ ಭಾರತದಲ್ಲಿ ಕಾಡಾವನ್ನು ಧರಿಸಲು ಅನುಮತಿಸುತ್ತಾರೆಯೇ ಅಥವಾ ಅವರು ಸಿಖ್ಖರಾಗಿ ಗುರುದ್ವಾರಕ್ಕೆ ಹೋಗಲು ಅನುಮತಿ ಇದೆಯೇ ಎಂಬ ಬಗ್ಗೆ.
ಅದಕ್ಕಾಗಿಯೇ ಹೋರಾಟವು ಅವನಿಗಾಗಿ ಮಾತ್ರವಲ್ಲ, ಎಲ್ಲಾ ಧರ್ಮಗಳಿಗೂ ಸಂಬಂಧಿಸಿದೆ ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹರ್ದೀಪ್ ಸಿಂಗ್ ಪುರಿ, ರಾಹುಲ್ ಗಾಂಧಿ ಭಾರತದಲ್ಲಿ ಸಿಖ್ಖರ (Sikh) ಬಗ್ಗೆ ಮಾತನಾಡಿಲ್ಲ. ಆದರೆ ಇಲ್ಲಿ ಮಾತನಾಡುತ್ತಿದ್ದಾರೆ.
ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ರಾಕ್ಷಸರನ್ನು ಉತ್ಪಾದಿಸಿತು. ಅವರು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು, ಮುಹಮ್ಮದ್ ಅಲಿ ಜಿನ್ನಾ ಅವರ ಮನಸ್ಥಿತಿಯನ್ನು ರಾಹುಲ್ ಗಾಂಧಿ ಹೊಂದಿದ್ದಾರೆ. ಒಂದೋ ನನಗೆ ಬೇಕಾದುದನ್ನು ನಾನು ಬಯಸುತ್ತೇನೆ, ಇಲ್ಲದಿದ್ದರೆ ನಾನು ಅದನ್ನು ನಾಶಪಡಿಸುತ್ತೇನೆ ಎಂಬ ಜಿನ್ನಾ ಮನಸ್ಥಿತಿ ರಾಹುಲ್ ಗಾಂಧಿ ಅವರಲ್ಲಿದೆ ಎಂದು ಟೀಕಿಸಿದ್ದಾರೆ.
ನಮ್ಮ ನಡುವೆ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಪ್ರಜಾಪ್ರಭುತ್ವದ ಸಂಪೂರ್ಣ ಸೌಂದರ್ಯವೆಂದರೆ ಈ ಸಮಸ್ಯೆಯನ್ನು ಕುಳಿತು ಪರಿಹರಿಸುವುದು. ಮೋದಿ ಅವರ ಸರ್ಕಾರದ ಸಿದ್ಧಾಂತದಲ್ಲಿನ ಒಂದು ವಿಶಿಷ್ಟ ಲಕ್ಷಣವೆಂದರೆ ನೇಷನ್ ಫಸ್ಟ್. ರಾಹುಲ್ ಗಾಂಧಿ ಅವರು ಜಿನ್ನಾ ಅವರಂತೆ ಮಾಡುತ್ತಿದ್ದಾರೆ. ವಿಭಜಕ ನಿರೂಪಣೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪುರಿ ಟೀಕಿಸಿದ್ದಾರೆ.
Hardeep Singh Puri Slams Rahul Gandhi Kannada Viral
New York: Union Minister Hardeep Singh Puri, who is currently on a US tour, has accused Lok Sabha Opposition Leader Rahul Gandhi of having the mentality of Pakistan’s founder Muhammad Ali Jinnah. Responding to comments made by Rahul Gandhi in the US earlier this month.
Speaking at an event in Virginia during a three-day US tour, Rahul Gandhi turned to a Sikh member in the audience, asked his name, and said, “The struggle in India is not about politics. The issue is whether he as a Sikh is allowed to wear a turban in India or, as a Sikh About whether they are allowed to wear Kada in India or whether they are allowed to go to Gurdwara as Sikhs.
That is why the struggle is not only for him but also for all religions, he said. Responding to Rahul Gandhi’s statement, Hardeep Singh Puri, Rahul Gandhi in India Not talked about. But here they are talking.
His government produced monsters while in power. He should do some introspection, Rahul Gandhi has the mentality of Muhammad Ali Jinnah. Rahul Gandhi criticized that he has the Jinnah mentality of either I want what I want or I will destroy it. A distinctive feature is Nation First. Rahul Gandhi is doing like Jinnah. Puri has been criticized for trying to provoke a divisive narrative.