ಗುಜರಾತ್(Gujarat) ಗೃಹ ಸಚಿವ(Home Minister) ಹರ್ಷ ಸಂಘವಿ(Harsh Sangvi) ಅವರು ಸ್ಮಾರ್ಟ್ ಫೋನ್ಗಳಲ್ಲಿ ಪೋರ್ನ್(Porn) ವೆಬ್‌ಸೈಟ್ ಸುಲಭವಾಗಿ ಸಿಗುತ್ತಿರುವ ಕಾರಣವೇ ಇಂದು ಅತ್ಯಾಚಾರ ಪ್ರಕರಣಗಳು ಏರಿಕೆಯಾಗಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿದ ಹರ್ಷ ಸಂಘವಿ “ನನ್ನ ಪ್ರಕಾರ ಭಾರತದಲ್ಲಿ ಅತ್ಯಾಚಾರಕ್ಕೆ ಪ್ರಮುಖ ಕಾರಣವೆಂದರೆ ಮೊಬೈಲ್ ಫೋನ್‌ಗಳಲ್ಲಿ ಅಶ್ಲೀಲ ವೀಡಿಯೊಗಳನ್ನು ಸುಲಭವಾಗಿ ಲಭ್ಯವಾಗುತ್ತಿರುವುದು.
ಭಾರತದಲ್ಲಿ ಅತ್ಯಾಚಾರದ ಹೆಚ್ಚಿನ ಪ್ರಕರಣಗಳಿಗೆ ಇತರ ಪ್ರಮುಖ ಕಾರಣವೆಂದರೆ, ಕೆಲವರು ಇಂಥ ವೆಬ್‌ಸೈಟ್ಗಳಿಗೆ ಹೋಗಿ ಲಿಂಕ್ ಅನ್ನು ಕಾಪಿ ಮಾಡಿ ಸ್ನೇಹಿತರಿಗೆ, ಕುಟುಂಬದ ಕೆಲ ವ್ಯಕ್ತಿಗಳಿಗೆ ಕಳಿಸುತ್ತಾರೆ. ಈ ಮೂಲಕ ಅಂಥ ದುರ್ಘಟನೆಗಳು ಸಂಭವಿಸಲು ಕಾರಣವಾಗುತ್ತದೆ. ಅತ್ಯಾಚಾರ ಎಸಗುವ ಮುಖೇನ ಅಪರಾಧಿಗಳಾಗಿರುತ್ತಾರೆ. ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಮೊಬೈಲ್ ಫೋನ್‌ಗಳು ಮತ್ತು ಅಪರಾಧ ಎಸಗುವ ಪರಿಚಿತ ವ್ಯಕ್ತಿಗಳೇ ಇದಕ್ಕೆ ಪ್ರಮುಖ ಕಾರಣ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ ಎಂದು ಹರ್ಷ ಸಂಘವಿ ಹೇಳಿದ್ದಾರೆ.
ಅತ್ಯಾಚಾರ ಘಟನೆಗಳಿಗೆ ನಾವು ಯಾವಾಗಲೂ ಪೊಲೀಸರನ್ನು ದೂಷಿಸುತ್ತೇವೆ. ಆದ್ರೆ, ಅದು ತಪ್ಪು! ಇಂತಹ ಘಟನೆಗಳು ಸಮಾಜಕ್ಕೆ ಕಳಂಕವಾಗಿದೆ. ಇಂತಹ ಘಟನೆಗಳಿಗೆ ನಾವು ಪೊಲೀಸರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಸದ್ಯ ಗುಜರಾತ್ ಇದರಿಂದ ದೂರವಿದೆ ಮತ್ತು ಅತ್ಯಂತ ಸುರಕ್ಷಿತವಾಗಿದೆ. ಒಂದೊಂದು ಘಟನೆಗಳನ್ನು ನೋಡಿದಾಗ ಎಂಥವರು ಕೂಡ ತೀವ್ರ ಭಯಭೀತರಾಗುತ್ತಾರೆ.
ತಂದೆ ತನ್ನ ಚಿಕ್ಕ ಮಗಳ ಮೇಲೆ ಅತ್ಯಾಚಾರವೆಸಗಿದಾಗ, ಇದು ದೊಡ್ಡ ಸಾಮಾಜಿಕ ಸಮಸ್ಯೆಯಲ್ಲವೇ? ತಂದೆ ಮಗಳ ಮೇಲೆ ಅತ್ಯಾಚಾರವೆಸಗಿರುವ ಘಟನೆಗೆ ಮೊಬೈಲ್ ಬಳಕೆಯೇ ಕಾರಣ ಎಂಬುದು ಸತ್ಯ! ತಂದೆಯೇ ಮಗಳನ್ನು ಅತ್ಯಾಚಾರ ಎಸಗುತ್ತಾನೆ ಅಂದ್ರೆ ಅದಕ್ಕೆ ಮೊಬೈಲ್ ಫೋನ್ ನಲ್ಲಿ ಸಿಗುತ್ತಿರುವ ಅಶ್ಲೀಲ ವೆಬ್‌ಸೈಟ್ಗಳೇ ಪ್ರಮುಖ ಕಾರಣ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದ್ದಾರೆ.