ರಾಜ್ಯದಲ್ಲಿ ದಿನೇ ದಿನೇ ಹೃದಯಘಾತ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅದ್ರಲ್ಲೂ ಹಾಸನ(Hassan) ಹೃದಯಾಘಾತಕ್ಕೆ (Hassan becomes hotspot) ಹಾಟ್‌ಸ್ಫಾಟ್(Hotspot) ಅಗಿ ಬದಲಾಗ್ತಾ ಇರೋದು ಆತಂಕಕ್ಕೆ ಕಾರಣವಾಗ್ತಿದೆ.
ನಿನ್ನೆ ಒಂದೇ ದಿನದಲ್ಲಿ ಹಾಸನದಲ್ಲಿ ಮೂವರು, ಶಿವಮೊಗ್ಗ(Shimoga), ಚಿಕ್ಕಮಗಳೂರು(Chikmagalur), ತುಮಕೂರಿನಲ್ಲಿ(Tumkur) ಒರ್ವರಂತೆ ಒಟ್ಟು ಆರು ಜನರು ಅಸುನೀಗಿದ್ದಾರೆ.
ನಿಂತಲ್ಲಿ, ಕೊತಲ್ಲಿ ಎದೆ ಹಿಡಿದು ಕುಸಿದು ಸಾ*ನ್ನಪ್ಪುತ್ತಿದ್ದಾರೆ. ಚಾಮರಾಜನಗರದಲ್ಲಿ (Chamarajanagara) ಖಾಸಗಿ ಬಸ್ ಚಾಲಕನಿಗೆ ಬಸ್ ಚಲಾಯಿಸುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಸಾ*ನ್ನಪ್ಪಿದ್ದಾರೆ.
ಮೈಸೂರನ ವಿಜಯನಗರದ ಜಿಮ್ನಲ್ಲಿ(Gym) ಥ್ರಡ್ ಮಿಲ್(Thread mill) ಮಾಡುವಾಗಲೇ ಹೃದಯಾಘಾತವಾಗಿ(heart attack) 51 ವರ್ಷದ ಶ್ರೀಧರ್(Shridhar) ಕುಸಿದು ಬಿದ್ದು ಸಾ*ನ್ನಪ್ಪಿದ್ದಾರೆ.
ಹಲವು ವರ್ಷಗಳಿಂದ ಇವರು ಮೈಸೂರಿನಲ್ಲಿ ಇಂಜಿನಿಯರ್(Engineer) ಆಗಿ ಕೆಲಸ ಮಾಡುತ್ತಿದ್ದರು. ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರ(Holenarasipur) ತಾಲ್ಲೂಕಿನ ಜುಂಜನಹಳ್ಳಿ(Junjanahalli) ಗ್ರಾಮದವರಾಗಿದ್ದಾರೆ.

ಆರೋಗ್ಯವಾಗಿದ್ದ ವಿರೂಪಾಕ್ಷರಿಗೆ(virupaksha) ಹೃದಯಸ್ತಂಭನ: ಹಾಸನ ಜಿಲ್ಲೆಯ ಸಕಲೇಶಪುರ(Sakleshpur) ತಾಲ್ಲೂಕಿನ ಬಾಳ್ಳುಪೇಟೆ(Ballupet) ಸಮೀಪದ
ಚಿಕ್ಕನಾಯಕನಹಳ್ಳಿಯ(Chikkanayakanahalli) ಸಿ.ಬಿ ವಿರೂಪಾಕ್ಷರವರಿಗೆ ಕಳೆದ ರಾತ್ರಿ 11:30ರ ಸುಮಾರಿಗೆ ಎಕಾಎಕಿ ಎದುನೋವು ಕಾಣಿಸಿಕೊಂಡಿದ್ದು.
ಅವರನ್ನು ತಕ್ಷಣವೇ ಸಕಲೇಶಪುರ ಕ್ರಾಫರ್ಡ್ ಸಾರ್ವಜನಿಕ ಆಸ್ಪತ್ರೆಗೆ(Crawford Public Hospital) ಕರೆದುಕೊಂಡು ಹೋಗಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗದೆ ಜೀವ ಕಳೆದುಕೊಂಡಿದ್ದಾರೆ.
ಕಾರಗೋಡು(Karagodu) ಗ್ರಾಪಂ ಸದಸ್ಯ ಹೃದಯಾಘಾತಕ್ಕೆ ಬ* : ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಲ್ಲಾರೆ ಗ್ರಾಮದ(Kallare village) ಸಂತೋಷ್(Santosh).ಇವರಿಗಿನ್ನು 38 ವರ್ಷ ರಾತ್ರಿ ಮಲಗಿದ್ದಲ್ಲಿಯೇ ಹೃದಯಾಘಾತವಾಗಿ ಚಿರನಿದ್ರೆಗೆ ಜಾರಿದ್ದಾರೆ.
ತರೀಕೆರೆ(Tarikere) ತಾಲೂಕಿನ ಶಿವನಿ ಗ್ರಾಮದ(Shivani village) ತೆಂಗಿನಕಾಯಿ ವ್ಯಾಪಾರಿ 29 ವರ್ಷದ ಹರೀಶ್‌ಗೆ(Harish) ಹೃದಯಾಘಾತ: ಬೆಳಗಿನ ಜಾವ ಸರಿಸುಮಾರು 2.30ಕ್ಕೆ ವಾಂತಿ ಮಾಡಿಕೊಂಡಿದ್ದರು.
ಗ್ಯಾಸ್ಟ್ರಿಕ್ ಎಂದು ಮಾತ್ರೆ ನುಂಗಿಸಿ ಮನೆಯವರು ಮಲಗಿಸಿದ್ದರು, ಮತ್ತೆ ಕುಸಿದು ಬಿದ್ದ ಯುವಕನನ್ನು ಅಜ್ಜಂಪುರ ಆಸ್ಪತ್ರೆಗೆ(Ajjampur Hospital) ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾನೆ.
ದಾವಣಗೆರೆ(Davangere) ತಾಲೂಕಿನ ಐಗೂರು ಗೊಲ್ಲರಟ್ಟಿಯ ಜಯಪ್ಪ(Jayappa) ಸಾ*: ಇವರು ಬಾಪುಜಿ ಆಸ್ಪತ್ರೆಗೆ(Bapuji Hospital) ನಡೆದುಕೊಂಡು ಹೋಗುವಾಗಲೇ ಹೃದಯಾಘಾತ ಸಂಭವಿಸಿದೆ
ಅವರಿಗೆ ಆಸ್ಪತ್ರೆಯ ಐಸಿಯುನಲ್ಲಿ(ICU) ಇಟ್ಟು ಚಿಕಿತ್ಸೆ ನೀಡಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಪ್ರಾಣಬಿಟ್ಟಿದ್ದಾರೆ.
ಕಲಬುರಗಿ(Kalaburagi) ಜಿಲ್ಲೆಯ ಆಳಂದ ತಾಲೂಕಿನ ಲಿಂಗದಹಳ್ಳಿ ಗ್ರಾಮದ(Lingadahalli village) ಯುವ ರೈತ ಹೃದಯಾಘಾತಕ್ಕೆ ಬ*. ಸಂತೋಷ್ ಇಂಡಿ(Santosh Indi) 36 ಯುವ ರೈತ(farmer)
ಜಮೀನಿನಲ್ಲಿ ಕೆಲಸ ಮಾಡ್ತಿರುವಾಗ ಲೋ ಬಿಪಿಯಿಂದ(Low BP) ಕುಸಿದುಬಿದ್ದ ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನು ಓದಿ : ರಾಜ್ಯದಲ್ಲಿ ಹಠಾತ್ ಹೃದಯಾಘಾತದ ಅಟ್ಟಹಾಸ, ಕೇಂದ್ರ, ರಾಜ್ಯಸರ್ಕಾರದಿಂದ ಆರೋಪ-ಪ್ರತ್ಯಾರೋಪ, ತಪ್ಪು ಯಾರದ್ದು?
ಒಟ್ಟಾರೆ ಸಾಲು ಸಾಲು ಹೃದಯಾಘಾತ ಪ್ರಕರಣಗಳು ಜನರಲ್ಲಿ ಆತಂಕ ಮೂಡಿಸಿದೆ. (Hassan becomes hotspot)