India : ಸಾಮಾನ್ಯವಾಗಿ, ವಿಚಿತ್ರ(Haunted Places Of India) ಹಾಗೂ ನಿಗೂಢ ಸ್ಥಳಗಳ ಬಗ್ಗೆ ಪ್ರತಿಯೊಬ್ಬರಿಗೂ ಆಸಕ್ತಿ ಇರುತ್ತದೆ.
ಇಂದು ನಾವು ನಿಮ್ಮ ಜೊತೆ ಕೆಲವೊಂದು ನಿಗೂಢ ಅವಶೇಷಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.

ಈ ಸ್ಥಳಗಳು ಹೆಚ್ಚು ಭಯಾನಕವಾಗಿದ್ದು, ಈ ಸ್ಥಳಗಳಿಗೆ ಹೋಗಲು ಜನರು ಇಂದಿಗೂ ಭಯಪಡುತ್ತಾರೆ.
ಏಕೆ ಈ ಸ್ಥಳಗಳು ಅಷ್ಟೊಂದು ಭಯಾನಕವೇಕೆ? ಅಷ್ಟಕ್ಕೂ ಆ ಸ್ಥಳಗಳಾವುವು ಎನ್ನುವುದನ್ನು ತಿಳಿಯೋಣ.
ಮಿಸ್ಟೀರಿಯಸ್ ಟೌನ್ : ಲಂಕಾವನ್ನು ಗೆದ್ದು ವಶಪಡಿಸಿಕೊಂಡ ನಂತರ, ರಾಮನು ಆ ಸಾಮ್ರಾಜ್ಯದ ಆಡಳಿತವನ್ನು ರಾವಣನ ಸಹೋದರ ವಿಭೀಷಣನಿಗೆ ಒಪ್ಪಿಸಿದನು.
ಲಂಕಾದ ರಾಜನಾದ ನಂತರ, ವಿಭೀಷಣನು ಭಗವಾನ್ ರಾಮನ ಬಳಿ, ಲಂಕಾವನ್ನು ತಲುಪಲು ನಿರ್ಮಿಸಿದ್ದ ಸೇತುವೆಯನ್ನು ಮುರಿಯುವಂತೆ ಕೇಳಿಕೊಳ್ಳುತ್ತಾನೆ.
ಇದನ್ನೂ ಓದಿ : https://vijayatimes.com/kaushal-kishore-statement/
ವಿಭೀಷಣನ ಕೋರಿಕೆಯನ್ನು ಅಂಗೀಕರಿಸಿದ ರಾಮನು ತನ್ನ ಬಿಲ್ಲಿನ ಒಂದು ತುದಿಯಿಂದ ಸೇತುವೆಯನ್ನು ಮುರೀತಾನೆ. ಅಂದಿನಿಂದ ಈ ಸ್ಥಳವನ್ನು ಧನುಷ್ಕೋಟಿ(Dhanushkoti) ಎಂದು ಕರೆಯಲಾಗುತ್ತಿದೆ.
ಇದು ತಮಿಳುನಾಡು(Tamilnadu) ರಾಜ್ಯದ ಪೂರ್ವ ಕರಾವಳಿಯಲ್ಲಿನ ರಾಮೇಶ್ವರಂ ದ್ವೀಪದ ದಕ್ಷಿಣ ದಂಡೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ.
ಭಗವಾನ್ ರಾಮನಿಗೆ ಧನುಷ್ಕೋಟಿಯೊಂದಿಗೆ ಆಳವಾದ ಸಂಪರ್ಕವಿದ್ದರೂ, ಇಲ್ಲಿ ದೆವ್ವ, ಭೂತಗಳು ವಾಸವಾಗಿದೆ ಎಂದು ಹೇಳಲಾಗುತ್ತದೆ.
ಈ ಭೂತ ಅಥವಾ ಆತ್ಮಗಳು ಇಲ್ಲಿರಲು ಹಿಂದಿನ ಕಾರಣ 1964 ರಲ್ಲಿ ಇಲ್ಲಿಗೆ ಅಪ್ಪಳಿಸಿದ ಭಯಾನಕ ಚಂಡಮಾರುತ ಎಂದು ನಂಬಲಾಗಿದೆ.

ಇದು ಧನುಷ್ಕೋಟಿಯ ಸೌಂದರ್ಯವನ್ನು ಭೀಕರತೆಯಾಗಿ ಪರಿವರ್ತಿಸಿತು. ಈ ಚಂಡಮಾರುತದ ನಂತರ ಇಲ್ಲಿಗೆ ಭೇಟಿ ನೀಡಿದ ಜನರು ಇಲ್ಲಿ ಏನೇನೋ ವಿಚಿತ್ರಗಳು ನಡೆಯುತ್ತವೆ ಎಂದು ಹೇಳಿದರು.
ಕಲಾವಂತೀ ದುರ್ಗ : ಮಹಾರಾಷ್ಟ್ರದ ಮಾಥೆರನ್ ಮತ್ತು ಪನ್ವೆಲ್ ನಡುವೆ ಇರುವ ಕಲಾವಂತೀ ದುರ್ಗ ಕೂಡ ಅಚ್ಚರಿಯ ತಾಣವಾಗಿದೆ.
ಇದನ್ನು ಭಾರತದಲ್ಲಿಯೇ ಅತ್ಯಂತ ಭಯಂಕರ ಕೋಟೆ ಎಂದು ಕರೆಯಲಾಗುತ್ತದೆ. ಈ ಕೋಟೆಯ ಕಟ್ಟಡದಲ್ಲಿ ಅನೇಕ ಭಯಾನಕ ಕಥೆಗಳು ಸಮಾಧಿಯಾಗಿವೆ.
https://youtu.be/LCKhdJWdt_0 ೪ ವರ್ಷಗಳಿಂದ ಅಭಿವೃದ್ಧಿ ಕಾಣದ ಬೆಂಗಳೂರಿಗೆ ಚುನಾವಣೆಯಿಂದ ಅಭಿವೃದ್ಧಿ ಭಾಗ್ಯ!
ಸ್ಥಳೀಯ ನಿವಾಸಿಗಳ ಪ್ರಕಾರ, ಇದು ದರಿದ್ರ ಗ್ರಾಮವಂತೆ. ಈ ಜಿಲ್ಲೆಯಲ್ಲಿ ನಕಾರಾತ್ಮಕತೆ ತುಂಬಿದ್ದು, ಅದು ಇಲ್ಲಿಗೆ ಬರುವ ಜನರನ್ನು ಆಕರ್ಷಿಸುತ್ತದೆ.
ಹಾಗಾಗಿ ಜನರು ಇಲ್ಲಿಗೆ ಬಂದು ಆತ್ಮಹತ್ಯೆ(Suicide) ಮಾಡಿಕೊಳ್ಳುತ್ತಾರೆ. ಸುಮಾರು 2300 ಅಡಿ ಎತ್ತರದ ಈ ಕೋಟೆಯನ್ನು ಹತ್ತುವುದು ಬಹಳ ಅಪಾಯಕಾರಿ.
ಈ ಕೋಟೆಯನ್ನು ಏರಲು, ಕಲ್ಲುಗಳ ಮೆಟ್ಟಿಲುಗಳನ್ನು ಇಡಲಾಗಿದೆ. ಈ ಅವಶೇಷಗಳಿಂದ ಮಧ್ಯರಾತ್ರಿಯ ನಂತರ, ಕಿರುಚಾಟದ ಶಬ್ದ ಕೇಳಿಬರುತ್ತದೆ.
ಇಲ್ಲಿಂದ ಸುಮಾರು ಮೈಲಿ ದೂರದವರೆಗೆ ಮೌನ ಆವರಿಸಿರುವುದಕ್ಕೆ ಇದೇ ಕಾರಣವಂತೆ!

ಕಿರಾಡು ದೇವಾಲಯ : ಬಾಡ್‌ಮೇರ್ ಐದು ದೇವಾಲಯಗಳನ್ನು ಒಳಗೊಂಡಿರುವ ಸುಂದರ ಸಂಕೀರ್ಣವಾಗಿದೆ. ಇದನ್ನು ಕಿರಾಡು ದೇವಾಲಯ ಎಂದು ಕೂಡ ಕರೆಯಲಾಗುತ್ತದೆ.
ಈ ದೇವಾಲಯವು ನಿಗೂಢವಾಗಿರುವುದು ಒಂದು ವಿಶೇಷವಾದರೆ, ಇನ್ನೊಂದೆಡೆ ಇದರ ಸುಂದರವಾದ ಕೆತ್ತನೆ ಸಾಕಷ್ಟು ಪ್ರಸಿದ್ಧವಾಗಿದೆ.
ಇದು ಎಷ್ಟು ಭವ್ಯವಾಗಿದೆ ಎಂದರೆ ಅದನ್ನು ‘ರಾಜಸ್ಥಾನದ ಖಜುರಾಹೊ’ ಎಂದೂ ಕೂಡ ಕರೆಯುತ್ತಾರೆ. ಆದರೆ ಸಂಜೆಯ ನಂತರ ಯಾರಾದರೂ ಈ ದೇವಾಲಯದಲ್ಲಿ ಉಳಿದುಕೊಂಡರೆ,
ನಂತರ ಹಿಂತಿರುಗುವುದಿಲ್ಲ ಎನ್ನುವ ನಂಬಿಕೆಯೂ ಇದೆ. ಇದರ ಹಿಂದೆ ಒಂದು ರೋಚಕ ಕಥೆಯಿದೆ.
ಇದನ್ನೂ ಓದಿ : https://vijayatimes.com/hdk-strikes-bjp-plans/
ಕಿರಾಡುವಿನ ಮೇಲೆ ಒಬ್ಬ ಸನ್ಯಾಸಿಯ ಶಾಪವಿದೆ ಎಂದು ಹೇಳಲಾಗುತ್ತದೆ. ಸ್ಥಳೀಯ ಜನರ ಪ್ರಕಾರ, ಬಹಳ ಹಿಂದೆ ಒಬ್ಬ ಸನ್ಯಾಸಿ ತನ್ನ ಶಿಷ್ಯರೊಂದಿಗೆ ನಗರಕ್ಕೆ ಬಂದನು.
ಕೆಲವು ದಿನಗಳ ಕಾಲ ಉಳಿದುಕೊಂಡ ನಂತರ, ಸನ್ಯಾಸಿ ಹಳ್ಳಿಗಾಡಿನ ಪ್ರವಾಸಕ್ಕೆ ಹೊರಟರು. ಅಷ್ಟರಲ್ಲಿ, ಅವರ ಶಿಷ್ಯರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದರು.

ಆದರೂ ಹಳ್ಳಿಯ ಜನರು ಅವರ ಶಿಷ್ಯರನ್ನು ಸರಿಯಾಗಿ ನೋಡಿಕೊಳ್ಳದೇ ನಿರ್ಲಕ್ಷ್ಯ ತೋರಿದರೆಂದು ಸನ್ಯಾಸಿ ಈ ಸ್ಥಳಕ್ಕೆ ಶಾಪವನ್ನು ನೀಡುತ್ತಾರೆ. ಸಂಜೆಯ ಮೇಲೆ ಯಾರಾದರೂ ಇಲ್ಲಿ ಉಳಿದುಕೊಂಡರೆ, ಕಲ್ಲಾಗುವಂತೆ ಶಾಪ ನೀಡುತ್ತಾರೆ.