ತಾಸುಗಟ್ಟಲೆ ಬೆಳಗುವ “ಪಾಂಡವರ ಬತ್ತಿ ಮರ” : ಈ ಮರಕ್ಕೂ ಪಾಂಡವರಿಗೂ ಏನು ಸಂಬಂಧ? ಇಲ್ಲಿದೆ ಮಾಹಿತಿ

ಚಿಕ್ಕವರಿದ್ದಾಗ ಸೀಮೆ ಎಣ್ಣೆ(Kerosene Lamp) ಬತ್ತಿಗಳನ್ನು ಬಳಸಿದ ನೆನಪು ಹಲವರಿಗಿರಬಹುದು. ಆದರೆ ನಮ್ಮ ಪೂರ್ವಜರು ದಿನನಿತ್ಯದ ಬದುಕಿನಲ್ಲಿ ಕೇವಲ ಸೀಮೆಎಣ್ಣೆ ಬತ್ತಿ ಅಥವಾ ಹತ್ತಿ ಬತ್ತಿಯ ಹಣತೆಗಳನ್ನೇ ಆಶ್ರಯಿಸುತ್ತಿರಲಿಲ್ಲ. ಬದಲಾಗಿ ಮರದ ಮೊಗ್ಗುಗಳನ್ನು ಕೂಡಾ ದೀಪದ ಬತ್ತಿಯಾಗಿ ಉಪಯೋಗಿಸುತ್ತಿದ್ದರು. ಇಂತಹ ಒಂದು ಮರದ ಹೆಸರು ಕರಿಕಲುಮರ. ಇದನ್ನು ಕೈಕರಿಕಲು ಮರ ಎಂದು ಕೂಡ ಕರೆಯುತ್ತಾರೆ. ಈ ಕರಿಕಲು ಮರಕ್ಕೆ ಮಹಾಭಾರತದ ವನವಾಸದ ಕಥೆಯೂ ತಳಕು ಹಾಕಿಕೊಂಡಿದೆ.

ಪಾಂಡವರು(Pandavas) ವನವಾಸದಲ್ಲಿದ್ದ ವೇಳೆ ಬುಡಕಟ್ಟು ಮಹಿಳೆಯೊಬ್ಬರಿಂದ ದ್ರೌಪದಿ(Draupadi) ಈ ಮರದ ಮೊಗ್ಗಿನ ಬಗ್ಗೆ ತಿಳಿದುಕೊಂಡಳಂತೆ. ಹಸ್ತಿನಾವತಿಯಿಂದ ತಂದಿದ್ದ ಎಣ್ಣೆಬತ್ತಿಗಳು ಮುಗಿಯುವ ಹಂತಕ್ಕೆ ಬಂದಾಗ ಬುಡಕಟ್ಟು ಜನರು ಉಪಯೋಗಿಸುತ್ತಿದ್ದ ಈ ಮೊಗ್ಗು ನೆನಪಿಗೆ ಬಂದು, ಭೀಮನ ಮೂಲಕ ಕರಿಕಲು ಮರದ ಮೊಗ್ಗುಗಳನ್ನು ತರಿಸಿಕೊಂಡು, ಹಣತೆ ಹೊತ್ತಿಸಿದಳು ಎಂಬ‌ ಮಾತಿದೆ. ಹಾಗಾಗಿ ಕರಿಕಲು ಮರವು “ಪಾಂಡವರ ಬತ್ತಿ ಮರ” ಎಂದು ಪುರಾಣ ಪ್ರಸಿದ್ಧವಾಗಿದೆ. ಈ ಮರ ಹೆಚ್ಚಾಗಿ ಅರಣ್ಯ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಅದೇ ರೀತಿ, ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲೂ ಈ ಮರಗಳಿದ್ದು,

ಇದು ತೇಗಿನ ಜಾತಿಗೆ ಸೇರಿದ ಪ್ರಭೇದ ಎನ್ನುತ್ತಾರೆ ಪರಿಸರ ತಜ್ಞರು. ಈ ಕರಿಕಲು ಮರದ ಮೊಗ್ಗುಗಳು ಎಷ್ಟು ಬೆಳಕು ನೀಡುತ್ತವೆಯೋ, ಇವುಗಳಲ್ಲರಳುವ ಹೂಗಳು ಕೂಡ ಅಷ್ಟೇ ಸುವಾಸನೆ ಭರಿತವಾಗಿವೆ. ಈ ಮರದಲ್ಲರಳುವ ಹೂವಿನ ಮೊಗ್ಗುಗಳಿಗೆ ಎಣ್ಣೆಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯಿದೆ. ಹೀಗಾಗಿಯೇ ಎಲೆಗಳು ತಾಸುಗಟ್ಟಲೆ ಉರಿಯಬಲ್ಲವು ಎಂಬುದು ಮತ್ತೊಂದು ಅಚ್ಚರಿ.
ಹೌದು, ಈ ಮರದ ಎಲೆಗಳಲ್ಲಿ ಹೊಟ್ಟಿನ ರೀತಿಯ ಒಂದು ವಸ್ತು ಉತ್ಪತ್ತಿಯಾಗುವುದರಿಂದ ಹತ್ತಿ ದೀಪದಂತೆ ಈ ಮರದ ಎಲೆಗಳು ಉರಿಯುತ್ತವೆ‌.

ಇದರ ಮೊಗ್ಗಿಗೆ ಎಣ್ಣೆ ಸವರಿ ಹೊತ್ತಿಸಿದಾಗ ಕೂಡ ಹಣತೆಯಂತೆ ಉರಿಯುತ್ತದೆ. ಬೇರೆ ಯಾವ ಮರದ ಮೊಗ್ಗುಗಳಲ್ಲೂ ಈ ವಿಶಿಷ್ಟತೆ ಇದುವರೆಗೂ ಕಂಡು ಬಂದಿಲ್ಲ. ಕಾಡಿನಲ್ಲಿ ವಾಸಿಸುವ ಗಿರಿಜನರು ಸೀಮೆಎಣ್ಣೆ ಬತ್ತಿ, ಹಣತೆ ಬದಲಿಗೆ ಈ ಮೊಗ್ಗಿಗೆ ಹರಳೆಣ್ಣೆ, ಇಲ್ಲವೇ ಎಳ್ಳಣ್ಣೆಯನ್ನು ಸವರಿ ರಾತ್ರಿ ವೇಳೆ ಮನೆಯೊಳಗೆ ಉರಿಸುತ್ತಿದ್ದರು. ಆದರೆ ಇತ್ತೀಚಿಗೆ ಮನುಷ್ಯ ಆಧುನಿಕತೆಗೆ ಒಡ್ಡಿಕೊಂಡಂತೆ ಈ ಮೊಗ್ಗು ತೆರೆಗೆ ಸರಿದು ಬಣ್ಣ ಬಣ್ಣದ ಲ್ಯಾಂಪ್‌ಗಳು ಬಂದಿವೆ.

  • ಪವಿತ್ರ

Latest News

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ದೇಶ-ವಿದೇಶ

‘ಡಾನಿ’ ಬುಡಕಟ್ಟು ಜನಾಂಗದಲ್ಲಿ ಬೆರಳನ್ನು ಕತ್ತರಿಸುವುದೇ ಸಂಪ್ರದಾಯವಂತೆ!

ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.

ರಾಜಕೀಯ

`ನನ್ನಲ್ಲೂ ದಾಖಲೆಗಳಿವೆ ; `ಸರ್ಟಿಫಿಕೇಟ್ ಕೋರ್ಸ್ʼಗಿಂತ ಬೃಹತ್ ಚಾಪ್ಟರ್ 1, 2, 3 ಆಗುತ್ತವೆ, ಬಿಚ್ಚಲೇ? : ಹೆಚ್.ಡಿಕೆ

ಕಟ್ಟಡಗಳ ಹೆಸರಿನಲ್ಲಿ ಕಮೀಷನ್ ಕಾಂಚಾಣ, ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ಡೀಲ್ ಮಾಡುವ ಅಶ್ವತ್ ನಾರಾಯಣ್, ಇದೇನಾ ನೀವು ನೀಡುತ್ತಿರುವ ಉನ್ನತ ಶಿಕ್ಷಣ?

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.