ದೇವದೂತ ಬಂದ ನಂತರವೇ ….72 ರೂಪಾಯಿ ಇದ್ದ ಪೆಟ್ರೋಲ್ (Petrol) ಬೆಲೆ 100 ರೂಪಾಯಿಗೆ ಏರಿತು. 60ರೂ ಇದ್ದ ಡೀಸೆಲ್ 85ಕ್ಕೆ ಏರಿಕೆಯಾಯಿತು. ಡಾಲರ್ (Dollar) ಎದುರು ರೂಪಾಯಿಯು ಭಾರೀ ಕುಸಿತ ಕಂಡಿತು. ಅಡುಗೆ ಸಿಲಿಂಡರ್ (Cylinder) ಬೆಲೆ 400 ರಿಂದ 1000 ರೂಪಾಯಿಗೆ ಏರಿಕೆ ಕಂಡಿತು. ಪುಲ್ವಾಮ ದಾಳಿ ನಡೆದು ಸೈನಿಕರು ಸಾವನ್ನಪ್ಪುವಂತಾಯಿತು ಎಂದು ಸಚಿವ ಎಚ್.ಸಿ.ಮಹದೇವಪ್ಪ (H.C Mahadevappa) ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಲೇವಡಿ ಮಾಡಿದ್ದಾರೆ.

ದೇಶದ ಅಭಿವೃದ್ದಿಗಾಗಿಯೇ ಆ ದೇವರು ನನ್ನನ್ನು ಕಳುಹಿಸಿದ್ಧಾನೆ ಎಂದು ಪ್ರಧಾನಿ ಮೋದಿ (Modi) ಅವರ ಹೇಳಿಕೆಯನ್ನು ಲೇವಡಿ ಮಾಡಿರುವ ಅವರು, ದೇವದೂತ ಬಂದ ನಂತರವೇ ದೇಶದಲ್ಲಿ ಏನಾಯಿತು ಎಂಬ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಲೇವಡಿ ಮಾಡಿದ್ದಾರೆ.
ಸಚಿವ ಎಚ್.ಸಿ.ಮಹದೇವಪ್ಪನವರ ಟ್ವೀಟ್ನಲ್ಲಿ ಏನಿದೆ..?
ದೇವದೂತ ಬಂದ ನಂತರವೇ ….
1) 72 ರೂಪಾಯಿ ಇದ್ದ ಪೆಟ್ರೋಲ್ ಬೆಲೆ 100 ರೂಪಾಯಿಗೆ ಏರಿತು
2) 60 ರೂ ಇದ್ದ ಡೀಸೆಲ್ (Deiseal) 85 ಕ್ಕೆ ಏರಿಕೆಯಾಯಿತು
3) ಡಾಲರ್ (Dollar) ಎದುರು ರೂಪಾಯಿಯು ಭಾರೀ ಕುಸಿತ ಕಂಡಿತು
4) ಅಡುಗೆ ಸಿಲಿಂಡರ್ ಬೆಲೆ 400 ರಿಂದ 1000 ರೂಪಾಯಿಗೆ ಏರಿಕೆ ಕಂಡಿತು

5) ಪುಲ್ವಾಮ ದಾಳಿ (Pulwama Attack) ನಡೆದು ಸೈನಿಕರು ಸಾವನ್ನಪ್ಪುವಂತಾಯಿತು
6) ಭಾರತ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 55 ರಿಂದ 102 ನೇ ಸ್ಥಾನಕ್ಕೆ ಕುಸಿಯಿತು
7) ಜನ ಸಾಮಾನ್ಯರ ಕೊಳ್ಳುವ ಶಕ್ತಿಯೇ ಕ್ಷೀಣಿಸಿತು
8) ಕರೋನಾ ಸಂದರ್ಭದಲ್ಲಿ ಆಕ್ಸಿಜನ್ (Oxygen) ದೊರಕದೇ ಲೆಕ್ಕವಿಲ್ಲದಷ್ಟು ಸಾವು ನೋವುಗಳಾಯಿತು
9) ಚೀನಾವು (China) ಗಡಿ ಪ್ರದೇಶದಲ್ಲಿ ಭಾರತವನ್ನು ಆಕ್ರಮಿಸಿ ತನ್ನ ಗ್ರಾಮಗಳನ್ನು ನಿರ್ಮಿಸಿತು
10) ಬಾಬಾ ಸಾಹೇಬರು ರಚಿಸಿದ ಸಂವಿಧಾನಕ್ಕೆ ಅಪಾಯ ಒದಗಿತು
11) ಜನರಿಗೆ ನ್ಯಾಯವಾಗಿಯೇ ನೀಡಬೇಕಿದ್ದ ಬರ ಪರಿಹಾರವನ್ನು ಕೋರ್ಟ್ (Court) ಮೆಟ್ಟಿಲೇರಿ ಪಡೆಯುವಂತೆ ಆಯಿತು
12) ಮಣಿಪುರದಂತಹ ರಾಜಕೀಯ ಅರಾಜಕತೆ ಮತ್ತು ಹಿಂಸೆಯು ಕಣ್ಣ ಮುಂದೆಯೇ ಜರುಗಿತು
13) ದೇಶದ ಸಾಲವು 55 ಲಕ್ಷ ಕೋಟಿಗಳಿಂದ 185 ಲಕ್ಷ ಕೋಟಿಗೆ ಏರಿಕೆ ಆಯಿತು