Visit Channel

ಜಾತ್ಯತೀತ ಶಕ್ತಿಗಳನ್ನು ಮುಗಿಸುವುದೇ ಕಾಂಗ್ರೆಸ್‌ ಉದ್ದೇಶ – ಹೆಚ್‌ಡಿಕೆ

ಬೆಂಗಳೂರು ಡಿ 11 : ಕಾಂಗ್ರೆಸ್‌ಗೆ ಜ್ಯಾತ್ಯಾತೀತ ಶಕ್ತಿಗನ್ನು ಮುಗಿಸುವುದೇ ಅವರ ಉದ್ದೇಶವಾಗಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಕಾಂಗ್ರೆಸ್ ನಡವಳಿಕೆ ಹೊರ‌ನೋಟಕ್ಕೆ ಜಾತ್ಯತೀತ ಎನ್ನುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಆ ರೀತಿಯ ವಾತಾವರಣ ಇಲ್ಲ. ಜಾತ್ಯತೀತ ಶಕ್ತಿಗಳನ್ನೇ ನಿರ್ನಾಮ ಮಾಡಬೇಕೆಂಬ ನಡವಳಿಕೆ ಅವರದ್ದು ಎಂದು ಅವರು ತಿಳಿಸಿದರು.

ರಾಮನಗರದಲ್ಲಿ ಇಂದು ಮಾಧ್ಯಮಗಳಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬೆಂಬಲ ಕೊಟ್ಟಂತೆ ಮಾಡಿ ಕುತ್ತಿಗೆ ಕೊಯ್ಯುವುದೇ ಇವರ ಕೆಲಸ. ಈ ರೀತಿ ನನಗೆ ಎರಡು ಮೂರು ಬಾರಿ ಅನುಭವವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ದೇವೇಗೌಡರು ಪ್ರಧಾನಿ ಆಗಿದ್ದು ಕಾಂಗ್ರೆಸ್ ನಿಂದ ಎನ್ನುತ್ತಾರೆ. ಆದರೆ  ದೇವೇಗೌಡರು ಪ್ರಧಾನಿ ಮಾಡಿ ಎಂದು ಅರ್ಜಿ‌ ಇಟ್ಟುಕೊಂಡು ಹೋಗಿದ್ರಾ. ನಾನು ಮುಖ್ಯಮಂತ್ರಿ ಆದಾಗ ಕಾಂಗ್ರೆಸ್ ಮುಂದೆ ಅರ್ಜಿ ಇಟ್ಟುಕೊಂಡು ಹೋಗಿದನ್ನಾ. ನಮ್ಮನ್ನ ಬೆಂಬಲ ಕೊಟ್ಟಾಗೆ ಮಾಡಿ ಕುತ್ತಿಗೆ ಕುಯ್ಯುವುದೇ ಇವರ ಕೆಲಸ ಎಂದು ಹೆಚ್.ಡಿಕೆ ಆಕ್ರೋಶ ವ್ಯೆಕ್ತಪಡಿಸಿದರು.

ಆರು ವಿಧಾನಪರಿಷತ್ ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಹೆಚ್.ಡಿಕೆ, ಒಂದು ವರ್ಷದ ಅವಧಿಯಲ್ಲಿ ಯಾವ ರೀತಿ ಬದಲಾವಣೆ ಆಗಲಿದೆ ಎಂದು ಯಾರು ನಿರೀಕ್ಷೆ ‌ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ನಮಗೆ ವೈಯಕ್ತಿಕವಾಗಿ ಮನವಿ ಮಾಡಿದ್ದು ಅಷ್ಟೇ. ಎಲ್ಲಿ ನಿಮ್ಮ ಅಭ್ಯರ್ಥಿಗಳು ಇಲ್ಲವೂ ಬಿಜೆಪಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದರು. ಅದು ಅವರ ದೊಡ್ಡತನ ತೋರಿಸಿದೆ. ಯಡಿಯೂರಪ್ಪ ಕೃತಜ್ಞತೆ ಸಲ್ಲಿಸುವ ಔದಾರ್ಯ ತೋರಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸೌಜನ್ಯವೂ ಇಲ್ಲ ಎಂದು ಹರಿಹಾಯ್ದರು.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.