ಮಾಜಿ ಸಿಎಂ ಕುಮಾರಸ್ವಾಮಿ(H.D Kumarswamy) ಅವರ ಮೇಲೆ ಬಿಜೆಪಿಯ(BJP) ಎಂಎಲ್‍ಸಿ ಸಿ.ಪಿ.ಯೋಗೇಶ್ವರ್(CP yogeshwar) ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಸಿಎಂ ವಿರುದ್ದ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ, ತಾಜ್ ವೆಸ್ಟೆಂಡ್(Taj Westend) ಹೋಟೆಲ್‍ನಲ್ಲಿಯೇ ರಾಸಲೀಲೆ ಆಡಿಕೊಂಡಿದ್ರು, ಅವರ ಲೀಲೆಗಳನ್ನು ಅವರ ಬಳಿಯೇ ಕೇಳಿ. ಅವರು ಹೇಳಲಿಲ್ಲ ಅಂದರೆ ನಂತರ ನಾನು ಹೇಳುತ್ತೇನೆ ಎಂದು ಹೇಳುವ ಮೂಲಕ ಸಿ.ಪಿ.ಯೋಗೇಶ್ವರ್ ಹೊಸ ವಿವಾದ ಹುಟ್ಟು ಹಾಕಿದ್ದಾರೆ.

ಇನ್ನು ಕಳೆದ ಕೆಲ ದಿನಗಳಿಂದ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಮತ್ತು ಸಿ.ಪಿ.ಯೋಗೇಶ್ವರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗೇಶ್ವರ್, ನನ್ನಿಂದ ಯಾಕೆ ಕುಮಾರಸ್ವಾಮಿಯವರ ಅಣಿಮುತ್ತುಗಳನ್ನು ಕೇಳುತ್ತೀರಾ? ಅವರನ್ನೇ ನನ್ನ ಮುಂದೆ ನೇರಾ ನೇರ ಕೂರಿಸಿ. ವೈಯಕ್ತಿಕ ಮತ್ತು ಸಾರ್ವಜನಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸೋಣ. 14 ತಿಂಗಳು ಸಿಎಂ ಆಗಿದ್ದ ವೇಳೆಯಲ್ಲಿ ಚನ್ನಪಟ್ಟಣಕ್ಕೆ ಬರದೇ, ಮಾಜಿ ಸಿಎಂ ತಾಜ್ ವೆಸ್ಟೆಂಡ್‍ನಲ್ಲಿ ರಾಸಲೀಲೆ ಆಡಿಕೊಂಡಿದ್ದರು.
ಇದೀಗ ಚನ್ನಪಟ್ಟಣಕ್ಕೆ ಬಂದು ಜನರ ಮುಂದೆ ಕಣ್ಣಿರಿಟ್ಟು, ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇನ್ನು ಇತ್ತೀಚೆನ ದಿನಗಳಲ್ಲಿ ಚನ್ನಪಟ್ಟಣದಲ್ಲಿ ರಾಜಕೀಯ ಕದನ ಜೋರಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಹೇಗಾದರು ಮಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಸೋಲಿಸಲು ಸಿ.ಪಿ.ಯೋಗೇಶ್ವರ್ ರಣತಂತ್ರ ಹೆಣೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿರುವ ಯೋಗೇಶ್ವರ್ ಅನೇಕ ಜೆಡಿಎಸ್ ನಾಯಕರನ್ನು ಬಿಜೆಪಿಗೆ ಕರೆ ತಂದಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಸೋಲಿಸಲು ಶತಾಗತಾಯ ಪ್ರಯತ್ನ ನಡೆದಿದೆ. ಇನ್ನು ಈ ರಾಜಕೀಯ ಕೆಸರೆರಚಾಟದ ನಡುವೆ ವೈಯಕ್ತಿಕ ವಾಗ್ದಾಳಿಗಳು ನಡೆಯುತ್ತಿವೆ. ಇದೀಗ ಸಿ.ಪಿ.ಯೋಗೇಶ್ವರ್ ಮಾಜಿ ಸಿಎಂ ಅವರ ವೈಯಕ್ತಿಕ ಜೀವನದ ಮೇಲೆ ನೇರ ಆರೋಪ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಕುಮಾರಸ್ವಾಮಿ ಅವರು ಯೋಗೇಶ್ವರ್ ಮೇಲೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಆ ಕುರಿತು ಪ್ರತಿಕ್ರಿಯೆ ನೀಡಿರುವ ಯೋಗೇಶ್ವರ್, ಕುಮಾರಸ್ವಾಮಿ ಏಕವಚನದಲ್ಲಿ ಮಾತನಾಡಿದರೆ, ನಾನೂ ಅದನ್ನೇ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ರಾಜಕೀಯ ಯುದ್ದ ಕಣ ಇದೀಗ ವೈಯಕ್ತಿಕ ಮಟ್ಟಕ್ಕೆ ಉಳಿಯುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ವೈಯಕ್ತಿಕ ವಿಚಾರಗಳ ಮೇಲೆ ಆರೋಪ-ಪ್ರತ್ಯಾರೋಪ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮುಂದಿನ ದಿನಗಳಲ್ಲಿ ಇದು ಬಹುದೊಡ್ಡ ಸ್ವರೂಪ ಪಡೆಯಬಹುದು. ಇನ್ನಾದರೂ ಇಬ್ಬರು ನಾಯಕರು ಎಚ್ಚೆತ್ತುಕೊಂಡು ರಾಜಕೀಯ ಟೀಕೆಗಳತ್ತ ಮಾತ್ರ ಗಮನ ಹರಿಸಬೇಕು.