ಬೆಂಗಳೂರು: ಕೇವಲ ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಕೈಗಾರಿಕೆ (Industry)ಬರಬೇಕು ಎಂಬ ಚಿಂತನೆ ಸರಿಯಲ್ಲ, ಕೃಷಿಯೇತರ (Non-agricultural),
ಭೂಮಿಗಳಲ್ಲಿ ಕೈಗಾರಿಕೆಗಳನ್ನು ಆರಂಭ ಮಾಡಬೇಕೆ ವಿನಃ ಫಲವತ್ತಾದ ಜಮೀನನನ್ನು ಕಿತ್ತುಕೊಂಡು ಅಲ್ಲಿ ಕೈಗಾರಿಕೆ ಮಾಡುವುದಲ್ಲ.
ದೇವನಹಳ್ಳಿ ತಾಲೂಕು ಮತ್ತಿತರ ಕಡೆ 1,777 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಬಿಜೆಪಿ(State BJP) ಸರಕಾರ ಕೂಡಲೇ ನಿಲ್ಲಿಸಬೇಕು.
ರೈತರನ್ನು ಒಕ್ಕಲೆಬ್ಬಿಸುವುದನ್ನು ಸಹಿಸಲಾಗದು ಎಂದು ಜೆಡಿಎಸ್ ನಾಯಕ(JDS Leader) ಎಚ್.ಡಿ.ಕುಮಾರಸ್ವಾಮಿ(HD Kumarswamy) ಅವರು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ದೇವನಹಳ್ಳಿ(Devanahalli) ತಾಲೂಕಿನ ಚನ್ನರಾಯಪಟ್ಟಣದಲ್ಲಿ (Channarayapatana) ರಾಜ್ಯ ಬಿಜೆಪಿ ಸರಕಾರವು ಫಲವತ್ತಾದ ಕೃಷಿಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುತ್ತಿರುವುದನ್ನು,
ವಿರೋಧಿಸಿ ಅನ್ನದಾತರು 143 ದಿನಗಳಿಂದ ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದ ಅವರು, ರಾಜ್ಯ ಬಿಜೆಪಿ ಸರಕಾರ ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು.

ಇಲ್ಲವಾದರೆ, ರೈತರ (farmer) ಜತೆ ನಾನು, ನನ್ನ ಪಕ್ಷದ ಕಾರ್ಯಕರ್ತರು ಧರಣಿ ಕೂರಬೇಕಾಗುತ್ತದೆ. ಅಭಿವೃದ್ಧಿ ನೆಪದಲ್ಲಿ ಇನ್ನೆಷ್ಟು ಜಮೀನು ಕಸಿದುಕೊಳ್ಳುತ್ತಿರಿ? ವಿಮಾನ ನಿಲ್ದಾಣಕ್ಕೆ ಕಿತ್ತುಕೊಂಡಿರುವ ಭೂಮಿ ಸಾಲದೇ? ಎಂದು ಸರಕಾರವನ್ನು ಕೇಳಲು ಬಯಸುತ್ತೇನೆ.
ಇದನ್ನೂ ಓದಿ : https://vijayatimes.com/raj-kundra-case/
ಬದುಕಿನ ಏಕೈಕ ಜೀವನಾಧಾರವಾಗಿರುವ ಭೂಮಿಯನ್ನು ಉಳಿಸಿಕೊಳ್ಳಲು ರೈತರು ಹೋರಾಟ (struggle)ನಡೆಸುತ್ತಿದ್ದರೆ,