ರಾಜ್ಯ ರಾಜಕಾರಣದಲ್ಲಿ ಒಂದೊಂದು ಶೈಲಿಯಲ್ಲಿ ಆಯಾ ಪಕ್ಷದ ನಾಯಕರು ಹೇಳಿಕೆಗಳ ಕತ್ತಿವರಸೆ ಪ್ರಾರಂಭಿಸಿದ್ದಾರೆ. ಹೌದು, ಇದಕ್ಕೆ ಸಾಕ್ಷಿ ಎಂಬಂತೆ ಹುಬ್ಬಳ್ಳಿ ಘಟನೆ ಅನೇಕ ತಿರುವುಗಳನ್ನು ಎಡಮಾಡಿಕೊಡುತ್ತಿದೆ. ಸಿದ್ದರಾಮಯ್ಯನವರು(Siddaramaiah) ಟ್ವೀಟ್(Tweet) ಮೂಲಕ ರಾಜಕೀಯ(Political) ಪೂರ್ವಗ್ರಹಪೀಡಿತರಾಗಿ ಕೊಡುವ ನಿರ್ಧಾರಗಳ ವಿರುದ್ಧ ನಮ್ಮ ಹೋರಾಟ, ಪ್ರತಿಭಟನೆ ಇರುತ್ತದೆ ವಿನಃ ನ್ಯಾಯದ ವಿರುದ್ಧವಲ್ಲ ಎಂದು ಗುಡುಗಿದರು.

ಈ ಬಗ್ಗೆ ಸ್ವತಃ ರಾಜ್ಯದ ಸಿಎಂ(CM) ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಕೂಡ ಮಾತನಾಡಿದ್ದು, ಹುಬ್ಬಳ್ಳಿಯಲ್ಲಿ ನಡೆದ ಘಟನೆ ಬಗ್ಗೆ ಕುಲಂಕುಶವಾಗಿ ನೋಡಲಾಗುತ್ತದೆ ಮತ್ತು ಈಗಾಗಲೇ ತನಿಖೆ ಸಮರ್ಪಕವಾಗಿ ಆರಂಭಗೊಂಡಿದೆ! ಈ ಘಟನೆ ಹಿಂದೆ ಯಾರೆಲ್ಲಾ ಇದ್ದಾರೆ? ಯಾವ ನಾಯಕರ ಕೈವಾಡವಿದೆ ಎಲ್ಲ ಹೊರಬರಲಿದೆ, ಬಳಿಕ ನಾವು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಸದ್ಯ ಈ ಹೇಳಿಕೆಗಳು ಒಂದೆಡೆಯಾದರೆ, ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ(HD Kumarswamy) ಅವರು ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಆರೋಪವನ್ನು ವ್ಯಕ್ತಪಡಿಸಿದ್ದಾರೆ. ” ನಿಮ್ಮ ಕತ್ತಲೆ ಮುಖವಾಡ ಮತ್ತು ಪರ್ಸಂಟೆಜ್ ಪಲ್ಲಕಿಯಲ್ಲಿ ಪವಡಿಸಿದ ನಿಮ್ಮ ನಿಜಬಣ್ಣ ಇನ್ನೇನು ಕಳಚಿಬೀಳಲಿದೆ. ನಿಮ್ಮ ಸುಳ್ಳು ನಿಮ್ಮನ್ನೇ ಸುಡುವ ಕಾಲ ಸನಿಹದಲ್ಲಿದೆ. ಈಶ್ವರಪ್ಪ ವಿಷಯದಲ್ಲಿ ಡಿವೈಎಸ್ಪಿ ಗಣಪತಿ ಅವರ ಹೆಸರು ಎಳೆದು ತಂದಿದ್ದೀರಿ. ನಾನು ಹೇಳಿದ್ದು ಕಲ್ಲಪ್ಪ ಹಂಡೀಬಾಗ್ ಬಗ್ಗೆ.

ಹಿಂದುಳಿದ ಸಮುದಾಯಕ್ಕೆ ಸೇರಿದ್ದ ಆ ಪ್ರಾಮಾಣಿಕ ಅಧಿಕಾರಿಗೆ ಇನ್ನಿಲ್ಲದ ಕಿರುಕುಳ ಕೊಟ್ಟು ಮುಗಿಸಿದಿರಿ. ಇಲಾಖೆಯಲ್ಲಿ ಒಳ್ಳೇ ಭವಿಷ್ಯವಿದ್ದ ಅವರ ಜೀವಕ್ಕೆ ಎರವಾದಿರಿ. ಅವರ ಸಾವಿಗೆ ನಿಮ್ಮ ಸರಕಾರ ಕಾರಣ. ಅಲ್ವಾ? ಸುಳ್ಳು ಶೂರ, ಸಿದ್ದಸೂತ್ರದಾರ, ಸಿದ್ದಕಲಾ ನಿಪುಣ, ರಾಜಕೀಯ ಊಸರವಳ್ಳಿಗೆ ಚುನಾವಣೆಗೆ ಮುನ್ನವೇ ಜೆಡಿಎಸ್ ಜ್ವರ ಬಂದುಬಿಟ್ಟಿದೆ. ಹಾಸನದಲ್ಲಿ ವೃಥಾ ಹರಿಬಿಟ್ಟ ಸತ್ಯಭಕ್ಷ ನಾಯಕನ ಆಚಾರಹೀನ ಅರಿವುಗೆಟ್ಟ ನಾಲಗೆ ಮತ್ತೆ ಹುಚ್ಚು ಕುಣಿತ ಮಾಡುತ್ತಿದೆ.
ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರವೇ ಇಲ್ಲ, ಮತ್ತೆ ಮತ್ತೇ ಕೆಣಕುವ ದಸ್ಸಾಹಸ ಬೇರೆ! ಎಂದು ಟ್ವೀಟ್ ಮಾಡುವ ಮೂಲಕ ಗುಡುಗಿದ್ದಾರೆ.