Hassan : ಮುಂಬರುವ ವಿಧಾನಸಭಾ ಚುನಾವಣೆಗೆ (Assembly election) ದಿನಗಣನೆ ಶುರುವಾಗಿದೆ. ಈ ಮಧ್ಯೆ ಜೆಡಿಎಸ್‌ನಲ್ಲಿ (JDS) ಕುಟುಂಬ ಕಾಳಗ ಇನ್ನೊಂದು ಹಂತವನ್ನು ತಲುಪಿದೆ. ಕಳೆದ ಎರಡು ತಿಂಗಳಿಂದ ಕಗ್ಗಂಟಾಗಿರುವ ಹಾಸನ (HD Revanna statement) ವಿಧಾನಸಭಾ ಕ್ಷೇತ್ರದ ಟಿಕೆಟ್‌ಅನ್ನು ಫೈನಲ್‌ಮಾಡಲು ಸಾಧ್ಯವಾಗುತ್ತಿಲ್ಲ.

ದೇವೇಗೌಡರ ಕುಟುಂಬದೊಳಗೆ ನಡೆಯುತ್ತಿರುವ ವಿದ್ಯಮಾನಗಳು ಹಾಸನ ಟಿಕೆಟ್‌ವಿಚಾರವನ್ನೂ ಇನ್ನಷ್ಟು ಕಗ್ಗಂಟಾಗಿಸಿದೆ.
ಮೂಲಗಳ ಪ್ರಕಾರ, ಹಾಸನದಲ್ಲಿ ಮಾಜಿ ಶಾಸಕ ಪ್ರಕಾಶ್‌ಮಗ, ಸ್ವರೂಪ ಪ್ರಕಾಶ್ಗೆ ಟಿಕೆಟ್ ನೀಡಬೇಕೆಂಬುದು ಎಚ್.ಡಿ.ಕುಮಾರಸ್ವಾಮಿ (HD Kumaraswamy)
ಅವರ ಇಚ್ಛೆಯಾಗಿದ್ದರೆ, ತನ್ನ ಹೆಂಡತಿ ಭವಾನಿಗೆ ಟಿಕೆಟ್‌ಕೊಡಸಬೇಕೆಂಬ ಎಚ್.ಡಿ. ರೇವಣ್ಣ ಹಠಕ್ಕೆ ಬಿದ್ದಿದ್ದಾರೆ.
ಎಚ್.ಡಿ.ರೇವಣ್ಣ, ಪ್ರಜ್ವಲ್‌ರೇವಣ್ಣ (Prajwalrevanna), ಸೂರಜ್‌ರೇವಣ್ಣ ಮೂವರು ಸೇರಿ ದೇವೇಗೌಡರ ಮೇಲೆ ಭವಾನಿಗೆ ಟಿಕೆಟ್‌ನೀಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ ಕುಮಾರಸ್ವಾಮಿ ಅವರು ಮಾತ್ರ ಭವಾನಿಗೆ ಟಿಕೆಟ್‌ನೀಡಿದರೆ, ಅದು ಇತರ ಕ್ಷೇತ್ರಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : https://vijayatimes.com/karnataka-assembly-election2023/
ಕುಟುಂಬ ರಾಜಕೀಯ ಎಂಬ ವಿಪಕ್ಷಗಳ ಟೀಕೆಗಳಿಗೆ ಇನ್ನಷ್ಟು ಇಂಬು ಕೊಟ್ಟಂತಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ಧಾರೆ.
ಇದೀಗ ಹಾಸನ ಟಿಕೆಟ್‌ವಿಚಾರ ದೇವೇಗೌಡರ ಮುಂದಿದೆ. ಇಷ್ಟು ದಿನಗಳ ಕಾಲ ಕಾದು ನೋಡುವ ತಂತ್ರಕ್ಕೆ ಮೋರೆ ಹೋಗಿದ್ದ ದೇವೇಗೌಡರಿಗೆ ಇದೀಗ ಇನ್ನೊಂದು ತಲೆನೋವು ಎದುರಾಗಿದೆ.
ಭವಾನಿಗೆ ಟಿಕೆಟ್ ನೀಡಿ ಎಂದು ಹಠ ಹಿಡಿದಿದ್ದ ಎಚ್.ಡಿ.ರೇವಣ್ಣ (HD Revanna) ತಮ್ಮ ನಿಲುವು ಬದಲಿಸಿದ್ದು,
ಭವಾನಿಗೆ ಟಿಕೆಟ್‌ನೀಡಿ, ಇಲ್ಲದಿದ್ದರೆ ಸ್ವರೂಪಗೂ ಟಿಕೆಟ್‌ನೀಡಬೇಡಿ. ಹಾಸನ ಕ್ಷೇತ್ರದಿಂದ ನಾನು ಹೇಳುವ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿ (HD Revanna statement) ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಸ್ವರೂಪಗೆ ಟಿಕೆಟ್‌ನೀಡಬಾರದು ಎಂಬ ಷರತ್ತನ್ನು ರೇವಣ್ಣ ಹಾಕಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : https://vijayatimes.com/trouble-for-siddaramaiah/
ಇನ್ನೊಂದೆಡೆ ಹಾಸನ ಟಿಕೆಟ್‌ಪಡೆಯಲು ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿರುವ ಸ್ವರೂಪ್‌ಪ್ರಕಾಶ್,
ನನಗೆ ಟಿಕೆಟ್‌ನೀಡಿ, ಇಲ್ಲದಿದ್ದರೆ ನಾನು ಅನಿವಾರ್ಯವಾಗಿ ಕಾಂಗ್ರೆಸ್‌ಗೆ (Congress) ಹೋಗಬೇಕಾಗುತ್ತದೆ.
ನನಗೆ ಪಕ್ಷ ತೊರೆಯಲು ಇಷ್ಟವಿಲ್ಲ, ಆದರೆ ಟಿಕೆಟ್‌ನೀಡದಿದ್ದರೆ, ಪಕ್ಷ ತೊರೆಯಬೇಕಾದ ಅನಿವಾರ್ಯತೆ ನನಗಿದೆ.
ನನ್ನ ರಾಜಕೀಯ ಭವಿಷ್ಯಕ್ಕಾಗಿ ನಾನು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ ಎಂದು ಸ್ವರೂಪ ನೇರವಾಗಿಯೇ ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸ್ವರೂಪಗೆ ಟಿಕೆಟ್ ನೀಡಬೇಕೆಂದು ಕುಮಾರಸ್ವಾಮಿ ಅವರು ಒಲವು ತೋರಿದ್ದರು, ರೇವಣ್ಣನವರ ವಿರೋಧದಿಂದಾಗಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ.