ನವದೆಹಲಿ, ಡಿ. 3: ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಬಿಗ್ ಶಾಕ್ ನೀಡಿದ್ದು, ಡಿಜಿಟಲ್ ಚಟುವಟಿಕೆಗಳನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ಕೊಡುವುದನ್ನು ಕೂಡಲೇ ತಾತ್ಕಾಲಿಕವಾಗಿ ನಿಲ್ಲಿಸಬೇಕೆಂದು ಆರ್ ಬಿಐ ಆದೇಶ ನೀಡಿದೆ.
ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಪಾವತಿ, ಯುಪಿಐ, ಐಮ್ ಎಸ್ ಮತ್ತು ಎನ್ ಇಎಫ್ ಮುಂತಾದ ಹಲವು ಗ್ರಾಹಕರಿಗೆ ಭಾರತದಲ್ಲಿ ಸಮಸ್ಯೆ ಗಳಿವೆ. ಈ ಬಗ್ಗೆ ಗ್ರಾಹಕರು ದೂರು ನೀಡಿದ ಹಿನ್ನೆಲೆಯಲ್ಲಿ ಆರ್ ಬಿ ಐ ನಿನ್ನೆ ಈ ಆದೇಶವನ್ನು ಹೊರಡಿಸಿದೆ.