Bengaluru : ಕಳೆದ ಕೆಲ ದಿನಗಳಿಂದ ಎಲ್ಲರ ಗಮನ ಸೆಳೆದಿರುವ ಮುಡಾ ಹಗರಣ ಸಂಬಂಧ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (H D Kumaraswamy), ಕರ್ನಾಟಕ ಬಿಜೆಪಿ ನಾಯಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ದೇವೇಗೌಡರ ಕುಟುಂಬ ನಾಶ ಮಾಡಲು ಹೊರಟ ಪ್ರೀತಂಗೌಡನನ್ನು ಸಭೆಯಲ್ಲಿ ಕೂರಿಸಿಕೊಂಡು, ನನ್ನನ್ನ ಸಭೆ ಕರೆಯುತ್ತೀರಾ? ಪೆನ್ ಡ್ರೈವ್ (Pendrive) ಹಂಚಿದೋರು ಯಾರು ಅಂಥ ಗೊತ್ತಿಲ್ವಾ? ಚುನಾವಣಾ ಮೈತ್ರಿಯೇ ಬೇರೆ, ರಾಜಕೀಯವೇ ಬೇರೆ ಎಂದು ಹೇಳುವ ಮೂಲಕ ಬಿಜೆಪಿ ಪಾದಯಾತ್ರೆಗೆ ಎಚ್ಡಿಕೆ ಗರಂ ಆಗಿದ್ದಾರೆ.
ಪಾದಯಾತ್ರೆ ಸಂಬಂಧ ದೆಹಲಿ (Delhi) ಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಾದಯಾತ್ರೆಯಲ್ಲಿ ಭಾಗಿಯಾಗಬಾರದು ಎಂದು ಜೆ.ಟಿ ದೇವೇಗೌಡರ (G T Devegowda) ನೇತೃತ್ವದಲ್ಲಿ ಕೋರ್ ಕಮಿಟಿ ಸದಸ್ಯರು ನಿರ್ಧಾರ ತೆಗೆದುಕೊಂಡಿದ್ದಾರೆ. ಬಿಜೆಪಿ ನಿಲುವಿನಲ್ಲಿ ತಿರ್ಮಾನ ತೆಗೆದುಕೊಂಡು ಹೋರಾಟ ಮಾಡುತ್ತಿದ್ದಾರೆ. ಇದು ಪಾದಯಾತ್ರೆಗೆ ಸೂಕ್ತವಾದ ಸಂದರ್ಭವಲ್ಲ ಅನ್ನೋ ಕಾರಣಕ್ಕೆ ನಾವು ಹಿಂದೆ ಸರಿದಿದ್ದೇವೆ.ಬೆಂಗಳೂರಿನಿಂದ ಮೈಸೂರಿನ (Mysore) ವರೆಗೆ ನಮ್ಮ ಪ್ರಾಬಲ್ಯ ಇದೆ. ಚುನಾವಣೆ ಸಂದರ್ಭದಲ್ಲಿ ಒಟ್ಟಿಗೆ ಇರುವುದು ಬೇರೆ ರಾಜಕಾರಣ ಬೇರೆ. ಬಿಜೆಪಿ ನಡೆದುಕೊಂಡಿರುವ ರೀತಿ ಮನಸಿಗೆ ಬೇಸರ ಉಂಟುಮಾಡಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜತೆ ಕುಳಿತುಕೊಳ್ಳಿಸಿ ನಮ್ಮ ಬೆಂಬಲ ಕೇಳುತ್ತಾರಾ? ಗೊತ್ತಿಲ್ಲವೇ ಅವರಿಗೆ ಹಾಸನದಲ್ಲಿ ಏನೇನಾಗಿದೆ ಎಂಬುದಾಗಿ ತಿಳಿದಿದ್ದರೂ ಮತ್ತೆ ನನ್ನನ್ನು ಕೇಳಿ ಬಂದಿದ್ದು ತಪ್ಪು. ಈಗಾಗಲೇ ಕೇರಳದಲ್ಲಿ ಜೀವ ಹಾನಿಯಾಗಿದೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ರೆಡ್ ಅರ್ಲಟ್ (Red Alert) ಘೋಷಿಸಲಾಗಿದೆ. ಕೊಡಗು ಕೂಡ ಜಲಾವೃತವಾಗಿದೆ. ಮಂಡ್ಯ ಭಾಗದಲ್ಲಿ ನದಿ ನೀರು ಬಿಟ್ಟಿದ್ದಾರೆ. ರೈತರು ಕೃಷಿ ಕೆಲಸ ಶುರು ಮಾಡಲಿದ್ದಾರೆ.
ಬಿಜೆಪಿ (BJP) ನಾಯಕರು ಸಭೆಯಲ್ಲಿ ಪೂರ್ವ ಸಿದ್ದತೆ ಮಾಡಿಕೊಂಡಿದ್ದರು. ಯಾವುದಕ್ಕೂ ಬೆಂಬಲ ಇರಲಿ ಎಂಬುದಕಷ್ಟೇ ನನಗೆ ತಿಳಿಸಿದ್ದಾರೆ. ಇದು ಸೂಕ್ತ ಸಂದರ್ಭ ಅಲ್ಲ ಹಾಗಾಗಿ ಹಿಂದೇ ಸರಿದ್ದೇವೆ. ಜನಸಮಾನ್ಯರ ಭಾವನೆ ಮುಖ್ಯ. ಹಾಗಾಗಿ ನಮ್ಮ ನೈತಿಕ ಬೆಂಬಲವೂ ಇಲ್ಲ. ಮಳೆಯಿಂದ ಸಾವು ನೋವು ಉಂಟಾಗುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ಪಾದಯಾತ್ರೆ ತೀರ್ಮಾನ ನನ್ನ ಮನಸ್ಸಿಗೆ ನೋವು ತಂದಿದಂತೂ ಸತ್ಯ ಎಂದು ಎಚ್