ದಾಳಿಯಿಂದ ನೊಂದಿದ್ದ ಮುಸ್ಲಿಂ ಕಲ್ಲಂಗಡಿ ವ್ಯಾಪಾರಿಗೆ ಹೆಚ್‍ಡಿಕೆ ಆರ್ಥಿಕ ನೆರವು!

ಧಾರವಾಡದ(Dharwad) ಪ್ರಸಿದ್ದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಲ್ಲಂಗಡಿ(Watermelon) ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಗೆ ವ್ಯಾಪಾರ ಮಾಡದಂತೆ ಬೆದರಿಕೆ ಹಾಕಿ, ಕಲ್ಲಂಗಡಿಗಳನ್ನು ರಸ್ತೆಗೆ ಎಸೆದು ಧ್ವಂಸ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ದಾಳಿಯಿಂದ ನೊಂದಿದ್ದ ಮುಸ್ಲಿಂ ವ್ಯಾಪಾರಿಗೆ ಎಚ್.ಡಿ. ಕುಮಾರಸ್ವಾಮಿಯವರು(HD Kumarswamy) ಆರ್ಥಿಕ ಸಹಾಯ ಮಾಡಿದ್ದಾರೆ.


ಇನ್ನು ಇತ್ತೀಚೆಗೆ ರಾಜ್ಯದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ದೇವಸ್ಥಾನಗಳ ಆವರಣದಲ್ಲಿ ವ್ಯಾಪಾರ ನಡೆಸದಂತೆ ನಿರ್ಬಂಧ ವಿಧಿಸಬೇಕೆಂದು ಅನೇಕ ಹಿಂದೂ ಸಂಘಟನೆಗಳು ಅಭಿಯಾನ ನಡೆಸಿದ್ದವು. ಈ ಹಿಂದಿನ ಕಾಂಗ್ರೆಸ್(Congress) ಸರ್ಕಾರ ದೇವಸ್ಥಾನಗಳ ಸುತ್ತಮುತ್ತ ಮುಸ್ಲಿಮರು ವ್ಯಾಪಾರ ನಡೆಸದಂತೆ ನಿರ್ಬಂಧ ವಿಧಿಸಿ ಕಾನೂನು ರೂಪಿಸಿತ್ತು. ಹೀಗಾಗಿ ಆ ಕಾನೂನನ್ನು ಜಾರಿಗೊಳಿಸುವಂತೆ ಒತ್ತಾಯ ಕೇಳಿಬಂದಿತ್ತು.
ಇನ್ನು ಮುಸ್ಲಿಂ ವ್ಯಾಪಾರಿಗಳ ಮೇಲೆ ನಡೆದ ಮೊದಲ ದಾಳಿ ಇದಾಗಿದೆ. ಇದೊಂದು ಅಮಾನುಷ ಕೃತ್ಯವಾಗಿದ್ದು, ಅದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.

ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವುದನ್ನು ಕೂಡಾ ನಾನು ಒಪ್ಪಲಾರೆ. ಈ ರೀತಿಯ ಕೃತ್ಯ ಎಸಗುವ ಗೂಂಡಾಗಳ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಸರ್ಕಾರವನ್ನು ಒತ್ತಾಯಿಸಿದ್ದರು. ಇದರ ನಡುವೆ ದಾಳಿಯಿಂದ ಆರ್ಥಿಕ ನಷ್ಟ ಅನುಭವಿಸಿದ್ದ ನಬಿಸಾಬ್‍ಗೆ ಕುಮಾರಸ್ವಾಮಿಯವರು ತಮ್ಮ ಆಪ್ತರ ಮೂಲಕ 10,000 ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. ಇನ್ನು ಮುಸ್ಲಿಂ ವ್ಯಾಪಾರಿಗಳಿಗೆ ದೇವಸ್ಥಾನದ ಆವರಣದಲ್ಲಿ ಅನುಮತಿ ನೀಡುವ ಕುರಿತು ಮುಂದಿನ ತಿಂಗಳು ನಿರ್ಧಾರ ಕೈಗೊಳ್ಳಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿತ್ತು.

ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕೂ ಮುಂಚೆಯೇ ಈ ದಾಳಿ ನಡೆದಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಇನ್ನು ಈ ಘಟನೆಯನ್ನು ಸಚಿವ ಮಾಧುಸ್ವಾಮಿ ಖಂಡಿಸಿದ್ದಾರೆ. ಬಡ ವ್ಯಾಪಾರಿಗಳ ಮೇಲೆ ಈ ರೀತಿಯ ದಾಳಿಗಳನ್ನು ನಡೆಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Latest News

ದೇಶ-ವಿದೇಶ

ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ : ರಾಹುಲ್ ಗಾಂಧಿ

ಇದು ಬಿಜೆಪಿ ಸರ್ಕಾರದ ಪ್ರಚಾರ ಪಿತೂರಿ. ಈ ರೀತಿ ಮಾಡುವ ಮೂಲಕ ಬಿಜೆಪಿಯು “ರಾಷ್ಟ್ರೀಯತೆ”ಯನ್ನು ಮಾರಾಟ ಮಾಡುತ್ತಿದೆ ಮತ್ತು ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ದೇಶ-ವಿದೇಶ

‘ಡಾನಿ’ ಬುಡಕಟ್ಟು ಜನಾಂಗದಲ್ಲಿ ಬೆರಳನ್ನು ಕತ್ತರಿಸುವುದೇ ಸಂಪ್ರದಾಯವಂತೆ!

ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.