Visit Channel

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿದ ಹೆಚ್‌.ಡಿ.ಕೆ

hdk16112129161621426519-1

ಮಂಗಳೂರು : ಬಿಜೆಪಿ(BJP) ಯುವಮುಖಂಡ ಪ್ರವೀಣ್ ಕುಮಾರ ನೆಟ್ಟಾರು(Praveen Nettaru) ಮನೆಗೆ ಜೆಡಿಎಸ್‌ ನಾಯಕ(JDS Leader) ಹೆಚ್.ಡಿ.ಕುಮಾರಸ್ವಾಮಿ(HD Kumarswamy) ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಐದು ಲಕ್ಷ ರೂಪಾಯಿ ಪರಿಹಾರ ನೀಡಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಕಾಟಾಚಾರಕ್ಕೆ ತನಿಖೆ ಮಾಡಬಾರದು. ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷ ನೀಡಬೇಕು.

ಪ್ರವೀಣ ಕುಮಾರ್ ನೆಟ್ಟಾರು ಅವರ ಕುಟುಂಬದ ಆಶಯವು ಇದೆ ಆಗಿದೆ. ಇನ್ನು ಅವರ ಕುಟುಂಬ ಸಾಕಷ್ಟು ಸಂಕಷ್ಟದಲ್ಲಿದೆ. ವಿಧವೆ ತಂಗಿಯನ್ನು ಸಾಕುವ ಜವಾಬ್ದಾರಿ ಇದೆ. ಅವರ ಕುಟುಂಬ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನನ್ನ ಮೊಬೈಲ್ ನಂಬರ್ ನೀಡಿದ್ದೇನೆ. ಯಾವುದೇ ಸಮಸ್ಯೆಯಾದರೆ ನೇರವಾಗಿ ನನಗೆ ಕರೆ ಮಾಡಿ ಮಾತನಾಡಬಹುದು ಎಂದು ತಿಳಿಸಿದ್ದೇನೆ. ಮತ್ತೆ ಆರ್ಥಿಕ ನೆರವು ನೀಡುತ್ತೇವೆ ಎಂದು ಭರವಸೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.


ಇನ್ನು ರಾಜ್ಯ ಬಿಜೆಪಿ ಸರ್ಕಾರ(State BJP Government) ಪ್ರವೀಣ ನೆಟ್ಟಾರು ಹತ್ಯೆಯ ಜವಾಬ್ದಾರಿ ನಿರ್ವಹಿಸಲು ಆಗದೆ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಿದೆ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಬೇಜವಾಬ್ದಾರಿ ತೀರ್ಮಾನ ತೆಗೆದುಕೊಂಡಿದೆ. ರಾಜ್ಯದ ಪೊಲೀಸರ ಮನೋಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರಾಜ್ಯದ ಪೊಲೀಸ್ ಇಲಾಖೆಯಲ್ಲಿಯೂ ಅದೆಷ್ಟೋ ದಕ್ಷ ಅಧಿಕಾರಿಗಳಿದ್ದಾರೆ ಅವರಿಗೆ ಜವಾಬ್ದಾರಿ ನೀಡಿದ್ದರೆ, ಪ್ರಕರಣವನ್ನು ಭೇದಿಸುತ್ತಿದ್ದರು ಎಂದು ಸರ್ಕಾರದ ನಡೆಯನ್ನು ಟೀಕಿಸಿದರು.


ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳು ಇಲ್ಲವೆ? ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟರೆ ಕರಾವಳಿ ಹಿಂಸಾಕಾಂಡವನ್ನು ಮೂಲೋತ್ಪಾಟನೆ ಮಾಡಬಲ್ಲರು. ರಾಜ್ಯ ಸರಕಾರಕ್ಕೆ ಅದು ಬೇಕಿಲ್ಲ. ಸಮರ್ಥ ಅಧಿಕಾರಿಗಳನ್ನು ನಂಬದೆ ಎನ್‌ಐಎಗೆ(NIA) ವಹಿಸುವ ನಾಟಕವಾಡಿ ಕಗ್ಗೊಲೆಗಳ ತನಿಖೆಗೆ ‘ಸಮಾಧಿʼ ಕಟ್ಟಲು ಹೊರಟಿದೆ. ಎನ್‌ಐಎಗೆ ತನಿಖೆಗೆ ವಹಿಸಿದ ಎಷ್ಟು ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ? ಒಂದೂ ಇಲ್ಲ. ಎನ್‌ಐಎಗೆ ಒಪ್ಪಿಸಿದ ಮೇಲೆ ತನಿಖೆಯಲ್ಲಿ ಮುಂದೆ ಸಾಗುತ್ತಿದ್ದ ರಾಜ್ಯ ಪೊಲೀಸರಿಗೆ ಮುಖ್ಯಮಂತ್ರಿಗಳು ಕೊಟ್ಟ ಸಂದೇಶವೇನು?

ಸ್ವತಃ ಗೃಹ ಸಚಿವರಾಗಿದ್ದ ಅವರು, ಸಿಎಂ ಆದ ಮೇಲೆ ತಮ್ಮ ಅಧೀನದ ಪೊಲೀಸ್ ವ್ಯವಸ್ಥೆಯನ್ನೇ ನಂಬುತ್ತಿಲ್ಲ. ಇದಲ್ಲವೇ ವಿಪರ್ಯಾಸ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದ್ದರು.

Latest News

Dakshina Kannada
ರಾಜ್ಯ

ಎಚ್ಚರ! ಅಪಾಯದಲ್ಲಿದೆ ದ.ಕ ಜಿಲ್ಲೆಯ ಬಂಟ್ವಾಳ ಕಿಂಡಿ ಅಣೆಕಟ್ಟು ಸೇತುವೆ

ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯ ಕರ್ಮಕಾಂಡ. ಕಾಮಗಾರಿ ಪೂರ್ಣ ಆಗುವ ಮೊದಲೇ ತಡೆಗೋಡೆಯ ಕಾಮಗಾರಿಯ ಅಡಿಪಾಯನೇ ಕಿತ್ತು ಹೊರಗೆ ಬಂದಿದೆ!

BJP
ರಾಜಕೀಯ

ಬಿಜೆಪಿ ನಾಯಕರು ನಮಗೆ ದೇಶಪ್ರೇಮದ ಪಾಠ ಮಾಡುವುದು ಆತ್ಮವಂಚನೆಯಾಗುತ್ತದೆ : ಸಿದ್ದರಾಮಯ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕರಾವಳಿಯಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು(Praveen Nettaru) ಮನೆಗೆ ಮಾತ್ರ ಹೋಗಿ ಪರಿಹಾರ ಕೊಟ್ಟಿದ್ದಾರೆ.

Malyalam
ಮನರಂಜನೆ

ನಟನೆಯಲ್ಲಿ ಸೋಲನ್ನು ಕಂಡರೂ ಕುಗ್ಗದೆ, ಇಂದು ಭಾರತ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಟ ಫಹಾದ್ ಫಾಸಿಲ್!

ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಎನಿಸಿದರೂ, ಇವರ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನೂ ಆಗಿರಲಿಲ್ಲ.

Kabbadi Player
ದೇಶ-ವಿದೇಶ

ಪಲ್ಟಿ ಹೊಡೆಯುವ ಯತ್ನದಲ್ಲಿ ಕುಸಿದು ಬಿದ್ದು ಕಬಡ್ಡಿ ಆಟಗಾರ ಸಾವು! ; ವೀಡಿಯೋ ವೈರಲ್

ಕಬಡ್ಡಿ(Kabbadi) ಆಟಗಾರರೊಬ್ಬ ಸೋಮರ್ ಸಾಲ್ಟ್ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ(Hospital) ಮೃತಪಟ್ಟಿದ್ದಾರೆ.