Bengaluru: ಬುಧವಾರ ಬ್ರೇನ್ ಸ್ಟ್ರೋಕ್ ಗೆ ಒಳಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜೆಡಿಎಸ್ (HDK hospitalised after mild stroke) ನ ಹಿರಿಯ ನಾಯಕ ಎಚ್.ಡಿ.ಕುಮಾರಸ್ವಾಮಿ
ಅವರ ಆರೋಗ್ಯ ಸ್ಥಿತಿಯನ್ನು ಮುಖ್ಯಮಂತ್ರಿ ಕಛೇರಿ ಸತತವಾಗಿ ಗಮನಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮೈಸೂರಿನಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡುವಲ್ಲಿ
ಕಾರ್ಯಕ್ರಮದಲ್ಲಿ ತೊಡಗಿದ್ದರು, ಸಿಎಂಒ (CMO) ಅಧಿಕಾರಿಗಳು ಕುಮಾರಸ್ವಾಮಿ ಅವರ (HDK hospitalised after mild stroke)ಆರೋಗ್ಯದ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿಸುತ್ತಿದ್ದರು.

ಕುಮಾರಸ್ವಾಮಿ (Kumaraswamy) ಅವರ ಕುಟುಂಬದ ಸದಸ್ಯರೊಂದಿಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರ ರಾತ್ರಿ ಮೈಸೂರಿನಿಂದ ಬೆಂಗಳೂರಿಗೆ
(Bengaluru) ಆಗಮಿಸಿದ ಮುಖ್ಯಮಂತ್ರಿಗಳು, ಗುರುವಾರ ಬೆಳಿಗ್ಗೆ ಮಾಜಿ ಮುಖ್ಯಮಂತ್ರಿಗಳನ್ನು ಮಾಡುವ ಸಾಧ್ಯತೆಗಳಿವೆ.
ಮಂಗಳವಾರ ಸಂಜೆಯವರೆಗೂ ಚೆನ್ನಾಗಿಯೇ ಇದ್ದರು ಮತ್ತು ಸಾಮಾನ್ಯವಾಗಿಯೇ ಮಾತನಾಡುತಿದ್ದರು ಎಂದು ಮಂಗಳವಾರ ಕುಮಾರಸ್ವಾಮಿ ಜೊತೆಗಿದ್ದ ಮೂಲಗಳು ತಿಳಿಸಿದ್ದು, ಐಸ್ ಲ್ಯಾಂಡ್,
ಯೂರೋಪ್ ನ (Europe) ಫಿನ್ ಲ್ಯಾಂಡ್,ಕಾಂಬೋಡಿಯಾ ಪ್ರವಾಸ ಮುಗಿಸಿ ಮರಳಿದ ನಂತರ ಅವರಿಗೆ ಹಲವು ಆಂಮತ್ರಣಗಳ ಮಹಾಪೂರವೇ ಹರಿದು ಬಂದಿತ್ತು. ಹಲವಾರು ಮದುವೆಗಳು,
ನಿಶ್ಚಿತಾರ್ಥಗಳು,ಗೃಹ ಪ್ರವೇಶಗಳು ಮತ್ತು ಮತ್ತಿತರ ಸಮಾರಂಭಗಳಿಗೆ ಅವರನ್ನು ಕರೆಯಲಾಗಿತ್ತು. ವಿಶೇಷವಾಗಿ,ಜುಲೈ (July) 18 ರಿಂದ ಶ್ರಾವಣ ಮಾಸವು ಪ್ರಾರಂಭವಾದ ನಂತರ
ಮಂಗಳಕರವೆಂದು ಪರಿಗಣಿಸಲಾಗಿದೆ.
ದಿಢೀರ್ ವಿಶೇಷ ಅಧಿವೇಶನ ಕರೆದ ಕೇಂದ್ರ ಸರ್ಕಾರ ; ಕುತೂಹಲಕ್ಕೆ ಕಾರಣವಾಯ್ತು ನಿರ್ಧಾರ..!
ಕುಮಾರಸ್ವಾಮಿ ಅವರು ಕೆಲ ದಿನಗಳಲ್ಲಿ 500-600ಕಿ.ಮೀ ಪ್ರಯಾಣಿಸಿ ಪಕ್ಷದ ಆಪ್ತರ ಕಾರ್ಯಕ್ರಮದಲ್ಲಿ ಭಾಗವಹಿಸಬೇಕ್ಕಿತು. ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ (Kolar) ಸಂಚರಿಸಿ ನಂತರ
ತುಮಕೂರಿಗೆ (Tumakur) ಭೇಟಿ ನೀಡಬೇಕಿತ್ತು. ಅಲ್ಲಿಂದ ಮತ್ತೆ ಮಂಡ್ಯ,ಮೈಸೂರು (Mysore),ಚಾಮರಾಜನಗರಕ್ಕೆ ಹೋಗಬೇಕಿತ್ತು. ಈ ಒತ್ತಡದ ವೇಳಾಪಟ್ಟಿಯು ಅವರ ಆರೋಗ್ಯ
ಸಮಸ್ಯೆಗಳಿಗೆ ತೊಂದರೆ ನೀಡಿರಬಹುದು ಎಂದು ಅವರ ಆಪ್ತರು ತಿಳಿಸಿದ್ದಾರೆ.

ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ (Anita Kumaraswamy) ಮತ್ತು ಅವರ ಕುಟುಂಬದ ಸದಸ್ಯರು ಅಪೋಲೋ ಆಸ್ಪತ್ರೆಗೆ ಪದೇ ಪದೆ ಭೇಟಿ ನೀಡಿದರು, ಎಚ್ ಡಿ ಕೆ (HDK)
ಅವರ ಇಬ್ಬರು ಸಹಾಯಕರಾದ ರಘು ಮತ್ತು ಸತೀಶ್ ದಿನವಿಡೀ ಆಸ್ಪತ್ರೆಯ ಹೊರಗಿದ್ದರು. ವಿದೇಶದಲ್ಲಿರುವ ಅವರ ಪುತ್ರ ನಿಖಿಲ್ ಗೆ (Nikhil) ಮಾಹಿತಿ ನೀಡುತಿದ್ದರು.ಗುರುವಾರ ಮುಂಜಾನೆ ಆಗಮಿಸಲಿದ್ದಾರೆ.
ಅವರ ಸೋದರ ಸಂಬಂಧಿಗಳಾದ ಡಾ. ಚಂದ್ರಶೇಖರ ಮತ್ತು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ (Dr. C N Manjunath) ಅವರು ಬುಧವಾರ ಆಸ್ಪತ್ರೆಗೆ ಭೇಟಿ
ನೀಡಿದ್ದರು. ತಂದೆ ಎಚ್.ಡಿ ದೇವೇಗೌಡರು (H D Devegowda) ದೂರವಾಣಿ ಮೂಲಕ ಅವರ ಆರೋಗ್ಯದ ಬಗ್ಗೆ ತಿಳಿದುಕೊಂಡಿದ್ದಾರೆ. ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ
(Prajwal Revanna) ಕೂಡ ಬುಧವಾರ ಸಂಜೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದರು.
ಎಚ್ ಡಿ ಕುಮಾರಸ್ವಾಮಿ (H D Kumaraswamy) ಅವರಿಗೆ ಆರೋಗ್ಯ ಸಮಸ್ಯೆ ಎಂದ ಕೂಡಲೇ ಪಕ್ಷದ ಹಲವು ಕಾರ್ಯಕರ್ತರು,ಪಕ್ಷದ ಮುಖಂಡರು,ಶಾಸಕರು ಮತ್ತು ಮಾಜಿ ಶಾಸಕರು ಆಸ್ಪತ್ರೆಗೆ
ಆಗಮಿಸಿ ,ಈ ವೇಳೆ ಕುಮಾರಸ್ವಾಮಿ ಅವರಿಗೆ ತೊಂದರೆ ನಿಡದಂತೆ ಅವರಿಗೆ ಮನವಿ ಮಾಡಲಾಯಿತು.
ಮೇಘಾ