ಮಾಜಿ ಮುಖ್ಯಮಂತ್ರಿ(Former ChiefMinister), ಜೆಡಿಎಸ್ ನಾಯಕ(JDS Leader) ಹೆಚ್.ಡಿ ಕುಮಾರಸ್ವಾಮಿ(HD Kumarswamy) ಅವರು ನಮ್ಮ ಪಕ್ಷಕ್ಕೆ ಹಾನಿ ಮಾಡಲು ಪ್ರಯತ್ನಿಸುವವರು, ಪ್ರಯತ್ನಿಸಲು ಬಂದವರು ಅವರೇ ಬೀದಿಪಾಲಾಗುತ್ತಾರೆ ಎಂದು ಅಸಮಾಧಾನಿತರ ವಿರುದ್ಧ ಗುಡುಗಿದ್ದಾರೆ.

ಜೆಡಿಎಸ್ ಪಕ್ಷ ಕೈಗೊಂಡಿರುವ ಜನತಾ ಜಲಧಾರೆ ಯೋಜನೆ ಈಗಾಗಲೇ ರಾಜ್ಯಾದ್ಯಂತ ಚಾಲನೆಗೊಂಡು ಮುಂದುವರೆಯುತ್ತಿದ್ದು, ದೇವೆಗೌಡರ ಮುಂದಾಳತ್ವದಲ್ಲಿ ಸಾಗುತ್ತಿದೆ. ಈ ಮಧ್ಯೆ ನೆಲಮಂಗಲ ಸಮೀಪದಲ್ಲಿ ನಡೆಯುತ್ತಿದ್ದ ಜನತಾ ಜಲಧಾರೆ ಸಮಾವೇಶ ಮೈದಾನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಜೆಡಿಎಸ್ ಪಕ್ಷ ತೊರೆಯಲು ಪ್ಲಾನ್ ಮಾಡಿರುವವರಿಗೆ ಹಾಗೂ ಪಕ್ಷದ ವಿರುದ್ಧ ಮಾತನಾಡುವವರಿಗೆ ಖಡಕ್ ಟಾಂಗ್ ಕೊಟ್ಟಿದ್ದಾರೆ.
ಕೆಲವರು ನಮ್ಮ ಪಕ್ಷಕ್ಕೆ ಹಾನಿಯುಂಟು ಮಾಡುವ ಕೆಲಸ ಮಾಡ್ತಾರೆ. ಆದರೆ ಅವರೇ ಕೊನೆಗೆ ಬಿದಿಪಾಲಾಗಿದ್ದಾರೆ. ಅದಕ್ಕೆ ನಿದರ್ಶನಗಳು ಕೂಡ ಇವೆ. ನಮ್ಮ ಪಕ್ಷ ತೊರೆದು ಬಿ.ಎಲ್ ಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಏನಾದರೂ? 20 ವರ್ಷ ಕಳೆದರು ಅಲ್ಲಿ ಏನಾಗಿದ್ದಾರೆ? ಯಾವ ಬೆಳವಣಿಗೆ ಇದೆ? ಎಂದು ಪ್ರಶ್ನಿಸಿದರು. ನಮ್ಮ ಜೆಡಿಎಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ, ಯಾರ ಮೇಲೂ ಅವಲಂಬಿತರಾಗಿಲ್ಲ! ನಮ್ಮ ಪಕ್ಷವೇ ಹೊಸ ನಾಯಕತ್ವವನ್ನು ಹುಟ್ಟು ಹಾಕಲಿದೆ ಎಂದು ಹೇಳಿದರು.