ನಮ್ಮ ರಾಜ್ಯದಲ್ಲಿ ರೈತರು(Farmers) ಬೆಳೆದ ಮಾವಿನ ಹಣ್ಣನ್ನು(Mangoes) ಮುಸಲ್ಮಾನ ದಳ್ಳಾಳಿಗಳು ಖರೀದಿಸುವ ಮೂಲಕ ರೈತರಿಗೆ ಆರ್ಥಿಕ ಶಕ್ತಿಯನ್ನು ಮುಸಲ್ಮಾನರು ತುಂಬುತ್ತಿರೋರು. ಮುಸಲ್ಮಾನರು ರೈತರ ಬಳಿ ಮಾವಿನ ಹಣ್ಣು ಖರೀದಿ ಮಾಡದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಬೆಳೆದ ಮಾವಿನ ಹಣ್ಣನ್ನು ಪ್ರಧಾನಿಯಾಗಲಿ… ಮುಖ್ಯಮಂತ್ರಿಯಾಗಲಿ ಖರೀದಿ ಮಾಡುತ್ತಿಲ್ಲ. ಮುಸಲ್ಮಾನರು ಮಾವಿನ ಹಣ್ಣನ್ನು ಬೆಳೆಯುವುದಿಲ್ಲ. ಆದರೆ ರೈತರು ಬೆಳೆದ ಮಾವಿನ ಹಣ್ಣನ್ನು ಮಾರುಕಟ್ಟೆಗೆ ಸಾಗಿಸಿ ವ್ಯಾಪಾರ ಮಾಡುವುದು ಮುಸಲ್ಮಾನರು. ಈ ಮೂಲಕ ಅವರು ನಮ್ಮ ಹಿಂದೂ ರೈತರಿಗೆ ಆರ್ಥಿಕ ಶಕ್ತಿ ತುಂಬುತ್ತಿದ್ದಾರೆ. ಹಿಂದೂ ರೈತರು ಬೆಳೆದ ಮಾವಿನ ಹಣ್ಣನ್ನು ಮುಸಲ್ಮಾನರು ಖರೀದಿ ಮಾಡದಿದ್ದರೆ ನಮ್ಮ ರೈತರಿಗೆ ನಷ್ಟವಾಗುತ್ತದೆ ಎಂದರು.
ಇನ್ನು ಮುಸಲ್ಮಾನರು ತಂದಿರುವ ಮಾವಿನ ಹಣ್ಣು ಹಿಂದೂ ರೈತರ ಬಳಿಯಿಂದ ತಂದಿರೋದು. ಅದನ್ನು ನೀವು ಖರೀದಿಸಬೇಡಿ ಎಂದರೆ ಅದರಿಂದ ಹಿಂದೂ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹಿಂದೂ ರೈತರ ವ್ಯಾಪಾರ ಕುಸಿಯುತ್ತದೆ. ಮುಸಲ್ಮಾನರ ಬಳಿ ಮಾವು ಖರೀದಿ ಮಾಡಬೇಡಿ ಎಂದರೆ ಅದು ರೈತರಿಗೆ ಮಾಡುವ ದ್ರೋಹ. ಇದಕ್ಕಿಂಹ ರಾಷ್ಟ್ರದ್ರೋಹ ಮತ್ತೊಂದಿಲ್ಲ. ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಶೀಘ್ರವೇ ಎಚ್ಚೆತ್ತುಕೊಳ್ಳಬೇಕು.

ರಾಜ್ಯದಲ್ಲಿ ನಡೆಯುತ್ತಿರುವ ಈ ರೀತಿಯ ಘಟನೆಗಳನ್ನು ಹತ್ತಿಕ್ಕಬೇಕು. ರೈತರು ಸರ್ಕಾರದ ವಿರುದ್ದ ತಿರುಗಿ ಬೀಳುವ ಮುಂಚೆಯೆ ಸರ್ಕಾರ ಎಚ್ಚೆತ್ತುಕೊಂಡು, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕುಮಾರಸ್ವಾಮಿಯವರು ಸರ್ಕಾರವನ್ನು ಆಗ್ರಹಿಸಿದರು.