Visit Channel

ಕುಟಿಲತೆ ಇಲ್ಲದ ರಾಜನೀತಿ ಕೆಂಪೇಗೌಡರನ್ನು ಅಜರಾಮರರನ್ನಾಗಿಸಿದೆ : ಹೆಚ್.ಡಿ.ಕೆ

hdk

ಕುಟಿಲತೆ ಇಲ್ಲದ ರಾಜನೀತಿ, ವಿಸ್ತರಣಾವಾದವಿಲ್ಲದ ರಣನೀತಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಜಾತ್ಯತೀತ ನೀತಿ ನಾಡಪ್ರಭುಗಳನ್ನು(Nadaprabhu) ಅಜರಾಮರರನ್ನಾಗಿಸಿದೆ. ನಗರವನ್ನು ವಾಣಿಜ್ಯ ಕೇಂದ್ರವನ್ನಾಗಿಸಿದ ಅವರ ದೂರದೃಷ್ಟಿ ಅನುಕರಣೀಯ. ಅವರ ಆಶಯವೇ ನಮಗೆ ದಿವ್ಯಬೆಳಕು. ಬೆಂಗಳೂರು(Bengaluru) ನಗರದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸೋಣ.

Jayanthi

ನಾಡಿನ ಸಮಸ್ತ ಜನತೆಗೆ ಬೆಂಗಳೂರು ಮಹಾನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ(Kempegowda) 513ನೇ ಜಯಂತಿಯ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumarswamy) ಶುಭಾಶಯ ಕೋರಿದ್ದಾರೆ. 500 ವರ್ಷಗಳ ಹಿಂದೆಯೇ ತಮ್ಮ ಆಳ್ವಿಕೆಯಲ್ಲಿ ‘ಸರ್ವಜನಾಂಗದ ತೋಟ’ವನ್ನು ನಿರ್ಮಿಸಿದ್ದ ನಾಡಪ್ರಭುಗಳು, ಆ ಮೂಲಕ ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎನ್ನುವ ಆದರ್ಶ ಸಮಾಜವನ್ನು ಸಾಕಾರಗೊಳಿಸಿದ್ದರು.

ಕೋಟ್ಯಂತರ ಜನರಿಗೆ ಅನ್ನ, ನೀರು, ಸೂರಿನ ಜೊತೆಗೆ ಉದ್ಯೋಗ ನೀಡಿ ನೆಮ್ಮದಿಯ ಬದುಕು ನೀಡಿರುವ ಬೆಂಗಳೂರು ನಗರ, ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಮತ್ತು ಜನಪರ ಆಡಳಿತದ ಫಲ. ನಾಡು, ನುಡಿಯನ್ನು ಪೆÇರೆದ ಮತ್ತು ನಮಗೆಲ್ಲ ಆದರ್ಶ ಪ್ರಾಯರಾದ ಜನತಾಪ್ರಭು ಕೆಂಪೇಗೌಡರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ನಾಡಪ್ರಭು ಕೆಂಪೇಗೌಡರು ದೂರದೃಷ್ಠಿಯಿಂದ ಸೊಗಸಾದ ಬೆಂಗಳೂರು ನಿರ್ಮಾಣ ಮಾಡಿದರು. ಇಂದು ಎಲ್ಲಾ ಸಮುದಾಯದವರು ಜೀವನ ನಡೆಸುವ ಸುಂದರವಾದ ಮಹಾನ್ ನಗರವಾಗಿ ಬೆಳೆದಿದೆ.

Kempegowda

ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೆಂಗಳೂರಿಗೆ ಭದ್ರಬುನಾದಿ ಹಾಕಿಕೊಟ್ಟ ಕೆಂಪೇಗೌಡರಿಗೆ ನಮನಗಳು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ. ಕೆಂಪೇಗೌಡರ ದೂರದೃಷ್ಟಿ, ಸಮರ್ಥ ಹಾಗೂ ಜನಪರ ಆಡಳಿತ ನಮ್ಮಲ್ಲರಿಗೂ ಸದಾ ಪ್ರೇರಣೆ ಯಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಟ್ವೀಟ್ ಮಾಡಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.