ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಎ ಸಿ ಬಿ 6 ಮತ್ತು ಹಲವಾರು ಜೀವಸತ್ವಗಳ ಮೂಲ ಈ ಕಪ್ಪು ದ್ರಾಕ್ಷಿ ಮಧುಮೇಹ ನಿಯಂತ್ರಣದಲ್ಲಿ ಕಪ್ಪು ದ್ರಾಕ್ಷಿ ತುಂಬಾ ಒಳ್ಳೆಯದೆಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ.
ಇದರಲ್ಲಿರುವ ರೆಸ್ವೆರಾಟ್ರೋಲ್ ಎಂಬ ಅಂಶವು ರಕ್ತದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ ಇನ್ಸುಲಿನ್ ಮಟ್ಟವನ್ನು ಕಂಟ್ರೋಲಲ್ಲಿರಿಸುತ್ತದೆ. ಕಪ್ಪು ದ್ರಾಕ್ಷಿಯಲ್ಲಿ ಪಾಲಿಪೆನಾಲ್ ಅಂಶವಿದ್ದು ಮೈಗ್ರೇನ್. ಬುದ್ದಿಮಾಂದ್ಯತೆ ಯನ್ನು ನಿವಾರಣೆ ಮಾಡಲು ಸಹಾಯಕವಾಗುವುದು.ನಿಯಮಿತವಾದ ಸೇವನೆಯಿಂದ ನೆನೆಪಿನ ಶಕ್ತಿ ಹೆಚ್ಚುವುದಲ್ಲದೆ ಏಕಾಗ್ರತೆಯನ್ನು ನೀಡಲು ಸಹಾಯಕವಾಗುವುದು.
ಕಪ್ಪು ದ್ರಾಕ್ಷಿಯಲ್ಲಿ ಇರುವ ಫೈಥೋಕೆಮಿಕಲ್ ಅಂಶಗಳು ದೇಹದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸಿ ಹ್ರದಯ ಸಮಸ್ಯೆಗಳನ್ನು ತಡೆಯುತ್ತವೆ. ಶ್ವಾಸಕೋಶ ಹಾಗೂ ಪಿತ್ತಕೋಶಗಳ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ದೇಹದಲ್ಲಿರುವ ಅನಗತ್ಯ ವಿಷಕಾರಿ ಅಂಶಗಳನ್ನು ತೆಗೆದು ಹಾಕುವುದು.