Visit Channel

ಬಟರ್ ಫ್ರೂಟ್ ಸೇವನೆ ಎಷ್ಟು ಉತ್ತಮ? ಇಲ್ಲಿದೆ ಅದಕ್ಕೆ ಉತ್ತರ!

avacado

ಪ್ರತಿಯೊಬ್ಬ ಮನುಷ್ಯನಿಗೂ ಉತ್ತಮ ಆರೋಗ್ಯ ಅತೀ ಮುಖ್ಯವಾದದ್ದು. ಆರೋಗ್ಯವಿಲ್ಲದಿದ್ದರೆ ನಾವು ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಾಧ್ಯವಿಲ್ಲ.

ಆರೋಗ್ಯವಾಗಿರಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಆದರೆ ಅದು ತಿಳಿದಿದ್ದರೂ ಅದನ್ನು ಪಾಲಿಸಲು ಮಾತ್ರ ಆಗುವುದಿಲ್ಲ.

avacado

ಪ್ರತಿಯೊಬ್ಬ ಮನುಷ್ಯನಿಗೂ ಹೃದಯವೆಂಬುದು ದೇಹದ ಅತೀ ಮುಖ್ಯವಾದ ಭಾಗ. ಮೊದಲೆಲ್ಲಾ ವಯಸ್ಸಾದವರಿಗೆ ಅಥವಾ ದೇಹ ತೂಕ ಹೆಚ್ಚು ಇರುವವರಿಗೆ ಬೇಗ ಹೃದಯಾಘಾತವಾಗುತ್ತಿತ್ತು. ಆದರೆ ಇಂದು ಮಕ್ಕಳಿಗೂ ಹೃದಯಾಘಾತವಾಗುತ್ತಿದೆ. ಒತ್ತಡವಿದ್ದರೂ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ನಮಗೆಲ್ಲ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಯುವಕ-ಯುವತಿಯರಿಗೆ ಹೃದಯಘಾತ ಕಂಡುಬರುತ್ತಿದೆ ಇದರಿಂದ ಬಹಳಷ್ಟು ಜನ ಸಾವನ್ನಪ್ಪಿದ್ದಾರೆ, ಸಾವನಪ್ಪುತ್ತಿದ್ದಾರೆ.

ಜಿಮ್ಮಿಗೆ ಹೋಗುವುದರಿಂದ ಯಾವುದೇ ರೀತಿಯ ಅನಾರೋಗ್ಯ ಇರುವುದಿಲ್ಲ ಎಂದು ಬಹಳಷ್ಟು ಯುವಕರು ಪ್ರತಿನಿತ್ಯವೂ ಜಿಮ್ಮಿಗೆ ಹೋಗಿ ವ್ಯಾಯಾಮ ಮಾಡುತ್ತಾರೆ. ಆದರೆ ಬಹಳಷ್ಟು ಬಾರಿ ಜಿಮ್ಮಿನಲ್ಲಿ ವ್ಯಾಯಾಮ ಮಾಡುವ ಸಮಯದಲ್ಲಿಯೂ ಹೃದಯಘಾತಕ್ಕೆ ಒಳಗಾಗಿದ್ದಾರೆ. ಇದು ನಮಗೆಲ್ಲರಿಗೂ ತಿಳಿದಿರುವ ವಿಷಯ! ಹಾಗೆಯೇ ನಿಂತ ಜಾಗದಲ್ಲಿಯೇ ಸಾವನ್ನಪ್ಪಿರುವ ಅನೇಕ ನಿದರ್ಶನಗಳು ದೊರೆತಿವೆ.

butter fruit
ಬಟರ್ ಫ್ರೂಟ್(Butter Fruit) ಎಲ್ಲರಿಗೂ ಚಿರಪರಿಚಿತವಿರುವ ಹಣ್ಣು(Fruit). ಸದ್ಯ ಮಾರುಕಟ್ಟೆಯಲ್ಲಿ ಇದರ ಬೆಲೆ ದುಬಾರಿಯೇ ನಿಜ! ಆದರೆ, ಇದರಿಂದ ದೊರೆಯುವ ಲಾಭಗಳು, ಕೊಟ್ಟ ಕಾಸಿಗೆ ವಜಾ ಮಾಡುತ್ತೆ ಎಂಬುದರಲ್ಲಿ ಅನುಮಾನವೇ ಬೇಡ! ಇದನ್ನು ಸೇವಿಸುವುದರಿಂದ ಹೃದಯಕ್ಕೆ ಎಷ್ಟು ಉಪಯೋಗವಿದೆ ಎಂಬ ಮಾಹಿತಿ ಸಾಕಷ್ಟು ಜನರಿಗೆ ತಿಳಿದಿಲ್ಲ.

ಹೃದಯಕ್ಕೆ ಬಟ್ಟರ್ ಫ್ರೂಟ್ ಎಷ್ಟು ಮುಖ್ಯ : ಬಟರ್ ಫ್ರೂಟ್ ಮೂಲತಃ ಮೆಕ್ಸಿಕೋ(Mexico) ಹಾಗೂ ದಕ್ಷಿಣ ಅಮೆರಿಕದ(South America) ಪ್ರಸಿದ್ಧ ಹಣ್ಣು. ಈಗ ನಮ್ಮ ದೇಶದಲ್ಲೂ ಸಹ ಬಹಳಷ್ಟು ಖ್ಯಾತಿ ಹೊಂದಿದೆ. ಬಟ್ಟರ್ ಫ್ರೂಟ್ ಎಷ್ಟು ಒಳ್ಳೆಯದು ಎಂದರೆ, ಅದರಷ್ಟೇ ಅದರ ಬೆಲೆಯೂ ಕೂಡ ಬಹಳ ಹೆಚ್ಚು. ಇದರಿಂದ ಬಹಳಷ್ಟು ಜನರು ಅದನ್ನು ಸೇವಿಸಲು ಹಿಂಜರಿಯುತ್ತಾರೆ. ಆದರೆ ಹಣ್ಣಿನಿಂದ ಬಹಳಷ್ಟು ಉಪಯೋಗ ಇದೆಯೆಂದು ಯಾರಿಗೂ ತಿಳಿದಿರುವುದಿಲ್ಲ.

health benefits

ಬಟರ್ ಫ್ರೂಟ್ ಅನ್ನು ಹಾಗೇ ತಿನ್ನುವ ಬದಲು ಜ್ಯೂಸ್ ಮಾಡಿಕೊಂಡು ಸೇವಿಸುವುದು ಬಹಳಷ್ಟು ಜನರಿಗ ಇಷ್ಟ. ಬರೀ ಹೊಟ್ಟೆ ಹಸಿವು ಅಥವಾ ಬಾಯಾರಿಕೆ ನೀಗಿಸಲು ಮಾತ್ರವಲ್ಲದೆ, ಅದುಕ್ಕೂ ಮೀರಿ ಸಾಕಷ್ಟು ಪೌಷ್ಟಿಕಾಂಶಗಳನ್ನು ಹೊಂದಿದೆ. ಇದರಲ್ಲಿರುವ ಮೊನೋಸಾಶಿರೈಡ್ಸ್ ಎಂಬ ಕೊಬ್ಬಿನಾಂಶ, ಮೂಫಗಳಾದ ಶೇಕಡ 20ರಷ್ಟು ಓಲಿಕ್ ಮತ್ತು ಲಿನೊಲಿಕ್ ಆಸಿಡ್ ಸಿಗುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

ಇದರಿಂದ ವಿಟಮಿನ್ ಡಿ, ಮತ್ತು ಬಿ ,ಉತ್ತಮ ರೀತಿಯಲ್ಲಿ ದೊರೆಯುತ್ತದೆ. ಹಾಗೆಯೇ ಎರಡು ಬಾಳೆಹಣ್ಣಿನಲ್ಲಿ ಇರುವಷ್ಟು ಪೋಟಾಷಿಯಮ್ ಅಂಶ ಇದರಲ್ಲಿ ಇರುತ್ತದೆ. ಈ ಹಣ್ಣು ಬರೀ ಹೃದಯಕ್ಕೆ ಮೀಸಲಾಗದೆ, ಶುಗರ್ ಪೇಷಂಟ್ ಗಳಿಗೆ ಸಹ ಬಹಳಷ್ಟು ಸಹಾಯವಾಗುತ್ತದೆ. ಇದರಿಂದ ಫೇಸ್ ವಾಷ್ ಅನ್ನು ಸಹ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಇದಕ್ಕೆ ಬಹಳ ದುಬಾರಿ ಬೇಡಿಕೆ ಇದೆ. ಹಾಗೆಯೇ ಕೂದಲು ಉದುರುವಿಕೆ ಸಮಸ್ಯೆ ಇರುವವರು ಆಗಾಗ ಹಣ್ಣನ್ನು ಸೇವಿಸಿದರೆ ಕೂದಲು ಉದುರಿಕೆ ಕಡಿಮೆಯಾಗುತ್ತದೆ.

butter fruit
ಶಾಂಪೂ ಮತ್ತು ಕಂಡೀಷನರ್ ಗಳಿಗೂ ಇದನ್ನು ಬಳಕೆ ಮಾಡುತ್ತಾರೆ. ಇದರಲ್ಲಿ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಹಾಗಿದ್ದರೆ ಹೃದಯಾಘಾತ ಹಾಗೂ ಬೇರೆ ರೀತಿಯ ಸಮಸ್ಯೆಗೂ ಬಟರ್ ಫ್ರೂಟ್ ಸೇವಿಸುವುದು ಉತ್ತಮ ಎಂಬ ಮಾಹಿತಿ ನಿಮಗೆ ತಲುಪಿಸದ್ದೇವೆ. ಇನ್ಮುಂದೆ ಸೇವಿಸುವ ಅಭ್ಯಾಸ ರೂಡಿಸಿಕೊಳ್ಳಿ. ಹಣ್ಣು, ತರಕಾರಿ ಸೇವನೆ ದೇಹಕ್ಕೆ ಮಾರಕವಲ್ಲ, ಆರೋಗ್ಯಕರ.
  • ಕೀರ್ತನ

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.