Health Benefits Of Betel Leaves Kannada Health News
Betel Leaves Health Tips: ವೀಳ್ಯೆದೆಲೆಗೆ ಭಾರತೀಯ ಸಂಪ್ರದಾಯದಲ್ಲಿ ಅತಿ ಹೆಚ್ಚಿನ ಮಹತ್ವವಿದೆ. ಶುಭ ಕಾರ್ಯಗಳಿಂದ ಹಿಡಿದು ಎಲ್ಲಾ ರೀತಿಯ ಸಮಾರಂಭಗಳಲ್ಲೂ ವೀಳ್ಯದೆಲೆ ಬಳಕೆ ಕಡ್ಡಾಯವಾಗಿ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಅಥವಾ ಮನೆಗೆ ಬಂದವರಿಗೆ ಉಡುಗೊರೆ ಕೊಡುವಾಗ ಜೊತೆಗೆ ವೀಳ್ಯದ ಎಲೆ (Betel Leaves) ಶುಭ ಹಾರೈಸುವ ಸಲುವಾಗಿ ಕೊಡಲಾಗುತ್ತದೆ. ಭರ್ಜರಿ ಊಟದ ನಂತರ ವೀಳ್ಯದ ಎಲೆಯೊಂದಿಗೆ ಅಡಿಕೆ ಬೆರೆಸಿ ತಿನ್ನುವುದು ಕೂಡ ರೂಢಿಗಳಲ್ಲಿ ಬಂದಿದೆ.ಇದನ್ನು ತಿನ್ನುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ ಎಂಬುದರ ಜೊತೆಗೆ ಏನೇಕ ಔಷಧೀಯ ಗುಣಗಳು ಈ ಎಲೆಯಲ್ಲಿವೆ.
ತಲೆ ಹೊಟ್ಟು (Dandruff) ಇದ್ದಲ್ಲಿ ಬೇಕಾಗುವಷ್ಟು ವೀಳ್ಯದೆಲೆಯನ್ನು ನುಣ್ಣಗೆ ಅರೆದು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರ ಮಾಡಿ. ಇದಕ್ಕೆ ಅರ್ಧ ಲಿಂಬೆರಸ ಬೆರೆಸಿ ತಲೆಯ ಪ್ರತಿಯೊಂದು ಭಾಗಕ್ಕೆ ಪೇಸ್ಟ್ ತರ ಹೆಚ್ಚಿಡಿ. ಅರ್ಧಗಂಟೆ ಬಳಿಕ ಸ್ನಾನ ಮಾಡಿದರೆ ತಲೆಯ ಹೊಟ್ಟು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೇ ವೀಳ್ಯದೆಲೆಗಳನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ ಬಳಿಕ ಸೋಸಿ ಈ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು ಊತ ಗುಣವಾಗುತ್ತದೆ.
ಉಸಿರಾಟದ ತೊಂದರೆ ಇರುವವರು ವೀಳ್ಯದೆಲೆ ರಸ, ಈರುಳ್ಳಿ ರಸ, ಶುಂಠಿ ರಸ ಹಾಗೂ ಜೇನು ತುಪ್ಪ (Honey) ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ ಇದನ್ನು ಸುಮಾರು 4-5 ತಿಂಗಳು ತೆಗೆದುಕೊಳ್ಳುತ್ತಾ ಬಂದರೆ ಉಸಿರಾಟದ ತೊಂದರೆ ಅತೀ ಬೇಗನೆ ವಾಸಿಯಾಗುವುದು.
ಒಂದೆರೆಡು ಚಮಚ ವೀಳ್ಯದೆಲೆ ರಸಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ದಿನಕ್ಕೆ 3 ಬಾರಿ ಸೇವಿಸುತ್ತಾ ಬಂದರೆ ಶ್ವಾಸಕೋಶಕ್ಕೆ ಸಂಬಂಧಿಸಿ ರೋಗಗಳು ನಿವಾರಣೆಯಾಗುವುದು. ಕ್ಯಾಲ್ಸಿಯಂ (Calcium) ಅಂಶ ಹೆಚ್ಚಿರುವ ವೀಳ್ಯದೆಲೆ ತಿನ್ನುವುದರಿಂದ ಜೀರ್ಣ ಶಕ್ತಿ ಹೆಚ್ಚಿಸಿ,ಧ್ವನಿ ಸರಿಪಡಿಸಿ,ಗ್ಯಾಸ್ಟ್ರಿಕ್ ಟ್ರಬಲ್ವನ್ನು (Gastric Trouble) ಬಹುಮಟ್ಟಿಗೆ ಗುಣಪಡಿಸುತ್ತದೆ.
ಒಂದು ವೀಳ್ಯದೆಲೆ, ಸ್ವಲ್ಪ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ 2 ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು. ಇನ್ನು ಎಳೆ ವೀಳ್ಯದೆಲೆಯನ್ನು ಅರೆದು ತೆಗೆದ ರಸವನ್ನು ಗಾಯಗಳಿಗೆ ಹಚ್ಚಿದರೆ ಗಾಯಗಳು ಶೀಘ್ರ ಗುಣವಾಗುತ್ತದೆ. ವೀಳ್ಯದೆಲೆಯನ್ನು ಎಳ್ಳೆಣ್ಣೆಯಲ್ಲಿ ನೆನೆಸಿ ಸ್ವಲ್ಪ ಬಿಸಿ ಮಾಡಿ ಮಕ್ಕಳ ಎದೆ ಮೇಲೆ ಉಜ್ಜಿದರೆ ಅಯಾಸ, ಕೆಮ್ಮಿನಂತಹ (Cough) ಸಮಸ್ಯೆಗಳು ಕಡಿಮೆಯಾಗುತ್ತವೆ.
Betel Leaves Health Tips: Betel leaves have great importance in Indian tradition. The use of betel leaves is mandatory in all kinds of ceremonies from auspicious deeds. Betel leaves are also given as a wish during festivals or when giving gifts to those who come home. It is also customary to eat betel nut mixed with betel leaf after a heavy meal. Eating this is easy to digest and has some medicinal properties in this leaf.
If there is dandruff, finely grind as much betel nut as needed and mix it with coconut oil. Add half lemon juice to this and apply the paste on each part of the head. Bathing after half an hour will reduce dandruff and hair fall. Apart from that, if you cut the betel leaves and put them in water, boil it and then strain it, add salt to this decoction and gargle the pain and swelling of the gums.
Those who have breathing problems, mix betel nut juice, onion juice, ginger juice and honey and drink it in the morning on an empty stomach and take it for about 4-5 months, then the breathing problem will be cured very quickly. A couple of spoons of betel nut juice mixed with a little ghee and consumed 3 times a day will cure lung related diseases. By eating betel nut which is rich in calcium, it increases digestion power, corrects voice and cures gastric trouble to a large extent.
A betel leaf, a little basil and a clove crushed and consumed twice a day will reduce cough. If the juice extracted from young betel leaves is applied to the wounds, the wounds will heal quickly. Betel leaves soaked in sesame oil and heated a little and rubbed on children’s chest will reduce problems like fatigue and cough.