Eat Nutrient Rich Black Sesame For Good Health!
Black Sesame Benefits: ನಾವು ಮನೆಯಲ್ಲಿ ಬಳಸುವ ಪ್ರತಿಯೊಂದು ಆಹಾರ ವಸ್ತುಗಳಿಗೆ ತನ್ನದೇ ಆದ ಮಹತ್ವವಿದೆ. ಆದರೆ ಅದನ್ನು ಅರ್ಥಮಾಡಿಕೊಳ್ಳದೆ ಅಯ್ಯೋ, ಕಪ್ಪು ಎಳ್ಳು ಎಂದು ಮೂಗು ಮುರಿಯುವವರೇ ಜಾಸ್ತಿ. ಆದರೆ ಕಪ್ಪು ಎಳ್ಳು (Black Sesame) ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಇದರ ಸೇವನೆ ಮಕ್ಕಳು ಮತ್ತು ದೊಡ್ಡವರಿಗೂ ಪ್ರಯೋಜನಕಾರಿ. ಇದರಲ್ಲಿ ತಾಮ್ರ, ಕಬ್ಬಿಣ, ಸೆಲೆನಿಯಮ್, ವಿಟಮಿನ್ ಬಿ6 ಮತ್ತು ವಿಟಮಿನ್ ಇ (Vitamin B6 And Vitamin E)ಸೇರಿ ಹಲವು ಪೋಷಕಾಂಶಗಳಿವೆ. ಆದರೆ ಇದರ ಪ್ರಯೋಜನಗಳನ್ನು ಅರಿಯದೇ ಇದನ್ನು ನಾವು ಸೇವಿಸುವುದನ್ನೇ ಕಡಿಮೆ ಮಾಡಿದ್ದೇವೆ.
ಇದು ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿರಿಸುತ್ತದೆ. ಎಳ್ಳು ಪ್ರೋಟೀನ್ (Protein) ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲ. ಇದರಲ್ಲಿ ಪೈನರೇಶನ್ ಸಂಯುಕ್ತಗಳಿವೆ. ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇನ್ನು ಕಪ್ಪು ಎಳ್ಳಿನಲ್ಲಿ ಫೈಬರ್ ಸಮೃದ್ಧವಾಗಿದೆ. ಹಾಗಾಗಿ ಕಪ್ಪೆಳ್ಳು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ.
ಕಪ್ಪು ಎಳ್ಳಿನಲ್ಲಿ ಕಂಡು ಬರುವ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಯಕೃತ್ ಅನ್ನು ಆರೋಗ್ಯಕರವಾಗಿರಿಸುವಲ್ಲಿ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಕರಿಎಳ್ಳು ಕ್ಯಾಲ್ಸಿಯಂನ (Calcium)ಅತ್ಯುತ್ತಮ ಮೂಲವಾಗಿದೆ. ಇದು ಬಲವಾದ ಮತ್ತು ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ.
ಅವು ಮೆಗ್ನೀಸಿಯಮ್ (Magnesium), ಫಾಸ್ಫರಸ್ ಮತ್ತು ತಾಮ್ರದಂತಹ ಇತರ ಖನಿಜಗಳನ್ನು ಸಹ ಒಳಗೊಂಡಿರುತ್ತವೆ. ಇದು ಮೂಳೆ ರಚನೆ ಮತ್ತು ಸಾಂದ್ರತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ಆಹಾರದಲ್ಲಿ ಕರಿಎಳ್ಳನ್ನು ಅನೇಕ ವಿಧದಲ್ಲಿ ಸೇರಿಸಬಹುದು. ನೂಡಲ್ಸ್, ಅಕ್ಕಿ ಭಕ್ಷ್ಯಗಳು, ಸಲಾಡ್ಗಳು ಮತ್ತು ತರಕಾರಿಗಳೊಂದಿಗೆ ಬೆರೆಸಿ ಸೇವಿಸಿ.