ಇನ್ನೇನು ಸುಡುವ ಬೇಸಿಗೆಯ (Summers) ಆರಂಭವಾಯ್ತು.ಶಾಖವು ಹೆಚ್ಚಾದಂತೆ ದೇಹ ನಿರ್ಜಲೀಕರಣಗೊಳ್ಳುತ್ತದೆ (dehydration). ಆಗೆಲ್ಲ ದೇಹಕ್ಕೆ ಪೋಷಣೆಯನ್ನು (Nourish the body) ಉಳಿಸಿಕೊಳ್ಳುವ ಮಾರ್ಗಗಳನ್ನು ಕಂಡುಹಿಡಿಯುವುದು ಅತ್ಯಗತ್ಯ. ಅಂತಹ ಒಂದು ತಾಜಾ ಮತ್ತು ಆರೋಗ್ಯಕರ ಆಯ್ಕೆಯೆಂದರೆ (Fresh and healthy option) ಸೋರೆಕಾಯಿ .ಸೋರೆಕಾಯಿಯನ್ನು ಹೆಚ್ಚಿನವರು ಸೇವಿಸಲು ಇಷ್ಟ ಪಡುವುದಿಲ್ಲ. ನೀರಿನಾಂಶ ಇರುವುದರಿಂದ ಅಷ್ಟಾಗಿ ರುಚಿ (Taste) ಎನಿಸುವುದಿಲ್ಲ. ಆದರೆ ಇದನ್ನು ಖಾದ್ಯದ ರೂಪದಲ್ಲಿ ತಯಾರಿಸಿ ತಿನ್ನ ಬಹುದಾಗಿದೆ.
ಸೋರೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಸೋರೆಕಾಯಿ (Bottle gourd) ವಿಟಮಿನ್, ಕಡಿಮೆ ಕ್ಯಾಲೋರಿ, ನಾರಿನಂಶ, ಪೊಟ್ಯಾಸಿಯಮ್,ಖನಿಜಗಳು, ಪ್ರೋಟಿನ್ ಗಳನ್ನು ಒಳಗೊಂಡಿದೆ.ಇದರಲ್ಲಿ ನೀರಿನಾಂಶ (Water Content) ಇರುವುದರಿಂದ ಅಜಿರ್ಣ ಸಮಸ್ಯೆಯನ್ನು ನಿವಾರಿಸುತದೆ..ರಕ್ತದೊತ್ತಡ (Blood pressure) ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಜೊತೆಗೆ ತೂಕ ಇಳಿಕೆಗೆ ಸಹಕಾರಿಯಾಗಿದೆಸೋರೆಕಾಯಿ ಕಡಿಮೆ ಕ್ಯಾಲೋರಿ (Low calorie) ಹಾಗೂ ನಾರಿನಾಂಶ ಇರುವುದರಿಂದ ಮಧುಮೇಹ ನಿಯಂತ್ರಿಸಲು ಉತ್ತಮ ಆಹಾರವಾಗಿದೆ.

ಜಲಸಂಚಯನ: (Hydration)
ಸೋರೆಕಾಯಿ, ಹಾಗಲಕಾಯಿ ಮತ್ತು ಹೀರೆಕಾಯಿ (Gourd, Bitter gourd and Sweet gourd) ತರಕಾರಿಗಳು ನೀರಿನಿಂದ ತುಂಬಿರುತ್ತದೆ, ಇದು ಬೇಸಿಗೆಯ ದಿನಗಳಲ್ಲಿ ನಿಮ್ಮ ದೇಹವನ್ನು ಹೈಡ್ರೇಟ್ ಮಾಡಲು ಅತ್ಯುತ್ತಮ ಆಯ್ಕೆಯಾಗಿದೆ. ಸೂಕ್ತವಾದ ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಮತ್ತು ದೇಹದ ಉಷ್ಣತೆಯನ್ನು (Warmth) ನಿಯಂತ್ರಿಸಲು ಸಾಕಷ್ಟು ಜಲಸಂಚಯನವು ನಿರ್ಣಾಯಕವಾಗಿದೆ.
ಮೂಳೆಗಳು ಬಲಗೊಳ್ಳುತ್ತವೆ: ಸೋರೆಕಾಯಿಯನ್ನು ತಿನ್ನುವುದರಿಂದ ಮೂಳೆಗಳನ್ನು ಬಲಪಡಿಸುತ್ತದೆ (Strengthens bones) . ಏಕೆಂದರೆ ಅದರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ (Magnesium and zinc) ಪೋಷಕಾಂಶಗಳು ಕಂಡುಬರುತ್ತವೆ, ಇದು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ.
ಹೃದಯದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ:ಸೋರೆಕಾಯಿಯಲ್ಲಿ ಉತ್ತಮ ಪೋಷಕಾಂಶವಿರುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Bad cholesterol) ಹೊರ ಹಾಕಿ ರಕ್ತದೊತ್ತಡದಿಂದ ಪಾರು ಮಾಡಿ ಹೃದಯದ ಆರೋಗ್ಯಕ್ಕೆ ಕಾಪಾಡುತ್ತದೆ.
ಒತ್ತಡವೂ ನಿವಾರಣೆ :
ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಒತ್ತಡದಲ್ಲಿ ಬದುಕುತ್ತಾರೆ (Pressure) . ಇದು ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ ಎಂದರೂ ತಪ್ಪಾಗಲಾರದು. ಆದರೆ, ಸೋರೆಕಾಯಿ ಸೇವನೆಯಿಂದ (Consuming gourd) ಒತ್ತಡವೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.