Dŗum stick health tips : ಆಂಗ್ಲ ಭಾಷೆಯಲ್ಲಿ ಡ್ರಮ್‌ಸ್ಟಿಕ್(Drumstick) ಎಂದು ಕರೆಯಲ್ಪಡುವ ನುಗ್ಗೆಕಾಯಿಯ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ (Health benefits of drumstick) ಗೊತ್ತಾ?
ನಮ್ಮಲ್ಲಿ ನುಗ್ಗೆಕಾಯಿ ಎಂದರೆ ಮೂಗು ಮುರಿಯವವರೇ ಹೆಚ್ಚು ಬಿಡಿ! ತರಕಾರಿಯಲ್ಲಿ ನುಗ್ಗೆಕಾಯಿ ಎಷ್ಟು ಉತ್ತಮ, ಆರೋಗ್ಯಕರ ಎಂಬ ಸಂಗತಿ ಅನೇಕರಿಗೆ ಇಂದಿಗೂ ತಿಳಿದಿಲ್ಲ.
ನುಗ್ಗೆಕಾಯಿಯನ್ನು ಹೆಚ್ಚು ಬಳಸೋದು ಕೇವಲ ಸಾಂಬಾರ್ ಮಾಡಲು ಮಾತ್ರ.
ಅದನ್ನು ಹೊರೆತುಪಡಿಸಿದರೆ ನುಗ್ಗೆಕಾಯಿ ಗಿಡದಲ್ಲಿ ನುಗ್ಗೆಕಾಯಿಯ ಜೊತೆಗೆ ಬಿಡುವ ನುಗ್ಗೆ ಸೊಪ್ಪನ್ನು ಬಳಸಿ ನುಗ್ಗೆ ಸೊಪ್ಪಿನ ಪಲ್ಯ ಎಂದು ಮಾಡುತ್ತಾರೆ.
ಇದು ಕೂಡ ನುಗ್ಗೆಕಾಯಿಯಷ್ಟೇ ಆರೋಗ್ಯಕರ. ಸದ್ಯ ನುಗ್ಗೆಯ ಹತ್ತು ಹಲವು ಪ್ರಯೋಜನಗಳ ಬಗ್ಗೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ ತಪ್ಪದೇ ತಿಳಿಯಿರಿ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡುತ್ತದೆ : ನುಗ್ಗೆಕಾಯಿ ಮಧುಮೇಹಿಗಳಿಗೆ(Diabetic) ಉತ್ತಮವಾಗಿದೆ ಎಂದೇ ಹೇಳಬಹುದು. ನೀವು ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿದ್ದರೆ, ನಿಮ್ಮ ಆಹಾರದಲ್ಲಿ ನೀವು ನುಗ್ಗೆಯನ್ನು ಸೇರಿಸಿಕೊಳ್ಳಬಹುದು. ಇದು ಪಿತ್ತಕೋಶದ ಕಾರ್ಯನಿರ್ವಹಣೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ : ವಿಟಮಿನ್ ಸಿ(Vitamin C) ಮತ್ತು ಇತರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ.
ಇದು ಕೆಮ್ಮು ಮತ್ತು ಶೀತದಂತಹ ಕಾಲೋಚಿತ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.
ಮೂಳೆಯ ಸಾಂದ್ರತೆಯನ್ನು ಸುಧಾರಿಸುತ್ತದೆ : ನುಗ್ಗೆಕಾಯಿ ಕ್ಯಾಲ್ಸಿಯಂ(Calcium) ಮತ್ತು ಕಬ್ಬಿಣದಿಂದ ತುಂಬಿರುತ್ತವೆ, ಇದು ಬಲವಾದ ಮೂಳೆಗಳಿಗೆ ಅವಶ್ಯಕವಾಗಿದೆ.
ಗರ್ಭಿಣಿಯರಿಗೆ ನುಗ್ಗೆಕಾಯಿಯನ್ನು ಸೇವನೆ ಮಾಡಲು ಹೆಚ್ಚು ಶಿಫಾರಸು ಮಾಡಲು ಇದು ಮತ್ತೊಂದು ಕಾರಣವಾಗಿದೆ.
ಇದನ್ನೂ ಓದಿ: ಹೆಡ್‌ಫೋನ್ ಬಳಸುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!
ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ : ನಿಮ್ಮ ಕರುಳಿನ ಚಲನೆಯನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುವ ನುಗ್ಗೆಕಾಯಿಯಲ್ಲಿ ಫೈಬರ್(Fibre) ಪ್ರಮುಖ ಪೋಷಕಾಂಶವಾಗಿದೆ. ನೀವು ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಬಳಲುತ್ತಿದ್ದರೇ, ನುಗ್ಗೆಕಾಯಿ ಸೇವನೆ ಉತ್ತಮ ಆಹಾರವಾಗಿದೆ.
ರಕ್ತ ಶುದ್ಧೀಕರಣಕ್ಕೆ ನುಗ್ಗೆಕಾಯಿ ಸಹಾಯ ಮಾಡುತ್ತದೆ : ನುಗ್ಗೆಕಾಯಿಯಲ್ಲಿರುವ ಆಂಟಿಬಯೋಟಿಕ್(Anti biotic) ಏಜೆಂಟ್‌ಗಳು ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಉಸಿರಾಟದ ತೊಂದರೆಗಳನ್ನು ತಡೆಯಲು ಹೆಚ್ಚು ಸಹಾಯಕಾರಿ : ನುಗ್ಗೆಕಾಯಿ ಉಸಿರಾಟದ ಕಾಯಿಲೆಯನ್ನು ತಡೆಗಟ್ಟುವಲ್ಲಿ ಪ್ರಮುಖವಾಗಿದೆ ಎಂಬುದು ತಿಳಿದುಬಂದಿದೆ. ನುಗ್ಗೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಉಸಿರಾಟದ ತೊಂದರೆಯನ್ನು(Breathing problem) ತಡೆಗಟ್ಟಬಹುದು.
ಲೈಂಗಿಕ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ : ನುಗ್ಗೆಕಾಯಿಯ ಸೇವನೆ ಯಾಕೆ ಹೊಂದಿರಬೇಕು ಎಂದರೆ ಇದು ನಿಮ್ಮ ಲೈಂಗಿಕ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ! ನುಗ್ಗೆಕಾಯಿಯ ಸತ್ವಗಳು ಉತ್ತಮ ಮೂಲವಾಗಿದೆ.
ವಿಶೇಷ ಸೂಚನೆ : ಈ ಮಾಹಿತಿ ಅನ್ನು ಮೂಲಗಳಿಂದ ಕಲೆಹಾಕಿ ನಿಮಗೆ ತಿಳಿಸಿದ್ದೇವೆ. ಹೆಚ್ಚಿನ ಮಾಹಿತಿಗೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.