ಮೆಂತ್ಯೆ ಕಾಳು ಇದು ಹೆಚ್ಚು ಕಹಿಯಾಗಿದ್ದರೂ ಇದರ ಮಹತ್ವ ಅಪಾರವಾದದ್ದು. ಮೆಂತ್ಯೆ ಕಾಳು ಔಷದಿ ಗುಣವನ್ನು ಹೊಂದಿರುವ ವಿಶಿಷ್ಟ ರೀತಿಯ ಗುಣವನ್ನು ಹೊಂದಿದೆ.
ಈ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೆವಿಸುವುದರಿಂದ ನಮ್ಮ ಆರೋಗ್ಯ ಅನೇಕ ಬಗೆಯ ಸಮಸ್ಯೆಗಳು ದೂರವಾಗುತ್ತವೆ.

ಮೆಂತ್ಯೆ ಕಾಳು ನಮ್ಮ ಸಾಂಪ್ರದಾಯಿಕ ಅಡುಗೆಗಳಲ್ಲಿ ಹೂಂದಾಗಿದೆ. ವಿಶ್ವದ ಅತ್ಯಂತ ಹೆಚ್ಚು ಹೆಚ್ಚು ಬಳಕೆಯಲ್ಲಿರುವ ಮೆಂತ್ಯೆ ಕಾಳುಗಳು ಬಹಳ ಉಪಯೋಗಕಾರಿ.ರಾತ್ರಿ ಮೆಂತ್ಯೆ ಕಾಳುಗಳನ್ನು ಮೊಸರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಸೆವಿಸುವುದರಿಂದ ದೆಹದ ಉಷ್ಣತೆ ಕಡಿಮೆಯಾಗುತ್ತದೆ.ಮೆಂತ್ಯೆ ಕಾಳುಗಳನ್ನು ಆಯುರ್ವೇದದ ಬಳಕೆಯಲ್ಲಿ ಹೆಚ್ಚು ಬಳಸುತ್ತಾರೆ.
ಇದು ಹೆಚ್ಚು ಕಹಿಯಾಗಿದ್ದರು ವಿಟಮಿನ್ ಬಿ ,ವಿಟಮಿನ್ ಸಿ, ಕಬ್ಬಿಣದಂಶ ನಾರಿನಂಶ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ದೈಹಿಕವಾಗಿ ಅನೇಕ ಬಗೆಯ ಕಾಯಿಲೆಗಳಿಗೆ ರಾಮಬಾಣ ಎನ್ನುತ್ತಾರೆ. ಇದು ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ.ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರನ್ನು ಸೇವಿಸಬೇಕು.

ಸಕ್ಕರೆ ಖಾಯಿಲೆಗೆ ತುತ್ತಾಗಿ ನರಳುತ್ತಿರುವ ರೋಗಿಗಳು ಇದನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು.ಕೀಲುನೋವು ಇರುವವರು ಇದನ್ನು ಪುಡಿ ಮಾಡಿ ಸೇವಿಸಿದರೆ ಒಳ್ಳೆಯದು.ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಸುಂದರವಾದ ಮುಡಿಯನ್ನು ರಕ್ಷಣೆ ಮಾಡಿಕೂಳ್ಳ ಬಹುದು.