ಸಾಮಾನ್ಯವಾಗಿ ಅಡುಗೆ (Kitchen) ಮನೆಯಲ್ಲಿ ಬಳಸುವ ಎಲ್ಲ ಬೇಳೆ ಕಾಳುಗಳು (Pulses) ಆರೋಗ್ಯಕ್ಕೆ ಉತ್ತಮವಾದವುಗಳೇ ಆಗಿವೆ. ಅದರಲ್ಲೂ ಹಸಿರು ಬಣ್ಣದ ಹೆಸರು ಕಾಳು (Green Gram) ತಿನ್ನಲು ಎಷ್ಟು ರುಚಿಯಾಗಿರುತ್ತವೆಯೋ, ಆರೋಗ್ಯಕ್ಕೂ (Health) ಅಷ್ಟೇ ಪ್ರಯೋಜನಕಾರಿಯಾಗಿದೆ. ಉದ್ದಿನಬೇಳೆ, ಹೆಸರು ಬೇಳೆ, ಹೀಗೆ ಪ್ರತಿಯೊಂದು ಬೇಳೆ ಕಾಳುಗಳು ಅದರದ್ದೇ ಆದ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದೆ. ಇವುಗಳಲ್ಲಿ ಒಂದು ಹೆಸರು ಕಾಳು. ಇದು ಅದ್ಭುತ ರುಚಿ ಮತ್ತು ಗುಣಗಳಿಂದ ತುಂಬಿದೆ. ಆಯುರ್ವೇದದಲ್ಲಿ, ಹೆಸರು ಕಾಳು (Green Gram) ದ್ವಿದಳ ಧಾನ್ಯಗಳ ರಾಣಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ನೋಡಲು ಪುಟ್ಟ ಕಾಳುಗಳಂತೆ ಕಾಣುವ ಈ ಕಾಳುಗಳು (Grains) ಪೋಷಕಾಂಶಗಳ ಆಗರ.ಇದರಲ್ಲಿ ಅಮೈನೋ ಆಮ್ಲಗಳು, ಉತ್ಕರ್ಷಣ ನಿರೋಧಕಗಳು (Antioxidants) ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ (Rich in nutrients) , ಇದು ರಕ್ತದೊತ್ತಡ (Blood pressure) , ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಳಕೆ ಕಟ್ಟಿದ ಕಾಳುಗಳ ಪ್ರತಿದಿನ ಸೇವಿಸಿದರೆ ದೇಹಕ್ಕೆ ಬಹಳಷ್ಟು ಪ್ರಯೋಜನಗಳಿವೆ.ಹೆಸರು ಕಾಳು ಉತ್ಕರ್ಷಣ (Grain oxidation) ನಿರೋಧಕಗಳು ರಕ್ತದ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಎಲ್‌ಡಿಎಲ್ ಕಣಗಳನ್ನು ಅಸ್ಥಿರ ಸ್ವತಂತ್ರ ರಾಡಿಕಲ್‌ಗಳೊಂದಿಗೆ ಸಂವಹನ ಮಾಡದಂತೆ ರಕ್ಷಿಸುತ್ತದೆ.
ಇನ್ನು ಹೆಸರು ಕಾಳನ್ನು (Green Gram) ನೀರಿನಲ್ಲಿ ನೆನಸಿಟ್ಟು, ಬಳಿಕ ಮೊಳಕೆ ಬಂದ ಮೇಲೆ ಸೇವಿಸುವುದರಿಂದ ಜೀರ್ಣಶಕ್ತಿ (Digestive power) ಉತ್ತಮವಾಗುತ್ತೆ. ಇದರಲ್ಲಿರೋ ಪೌಷ್ಟಿಕಾಂಶ ಜೀರ್ಣಕ್ರಿಯೆಯನ್ನು (Digestion of nutrients ) ಸರಾಗ ಮಾಡುತ್ತದೆ. ಅಲ್ಲದೆ ಫೈಬರ್ ಅಂಶವು ದೇಹದಲ್ಲಿ ಆಹಾರದ ಸಂಚಾರ ಸರಿಯಾಗಿ ಆಗುವಂತೆ ನೋಡಿಕೊಂಡು ಮಲಬದ್ಧತೆ ತೊಂದರೆಯನ್ನು ನಿವಾರಿಸುತ್ತದೆ. ಅಲ್ಲದೆ ಇದರಲ್ಲಿರೋ ಒಮೇಗಾ ಫ್ಯಾಟೀ ಆ್ಯಸಿಡ್ ದೇಹಕ್ಕೆ ಬೇಕಾದ ಕೊಬ್ಬಿನ ಅಂಶ (Fat content) ನೀಡಿ ರಕ್ತನಾಳದ ಆರೋಗ್ಯ ಕಾಪಾಡುತ್ತೆ. ಇದ ರಲ್ಲಿನ ಆ್ಯಂಟಿ ಇನ್ಪಮೇಟರಿ (Anti-inflammatory) ಗುಣ ರಕ್ತನಾಳಗಳ ಮೇಲಿರೋ ಒತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತ ಸಂಚಾರ (Blood circulation ) ಹೆಚ್ಚಿಸಿ ದೇಹಕ್ಕೆ ಹೆಚ್ಚು ಆಕ್ಸಿಜನ್ ಸಿಗುವ ಹಾಗೆ ಮಾಡಿ ಸ್ಟ್ರೋಕ್, ಹೃದಯಾಘಾತ ಆಗದಂತೆ ನೋಡಿಕೊಳ್ಳುತ್ತದೆ.