ಸಾಮಾನ್ಯವಾಗಿ ಹಸಿರು ಬಟಾಣಿಗಳನ್ನು (Green peas) ಅಡುಗೆಯ ರುಚಿ ಹೆಚ್ಚಿಸಲು (Increase taste) ಬಳಸುತ್ತಾರೆ. ಆದರೆ, ಅದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ (Many Health benefits) . ಅದರಲ್ಲೂ ಚಳಿಗಾಲದಲ್ಲಿ ಬಟಾಣಿಯನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಸಿಗುತ್ತದೆ (vitamins) .ಹಸಿ ಬಟಾಣಿ ಕಾಳುಗಳಲ್ಲಿ ನಿಮ್ಮ ಅನೀಮಿಯಾ ಸಮಸ್ಯೆಯನ್ನು ಪರಿಹಾರ ಮಾಡುವ ಶಕ್ತಿ ಇದೆ. ಒಂದು ವೇಳೆ ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶದ (Iron content) ಕೊರತೆ ಉಂಟಾದರೆ ಆರೋಗ್ಯಕರವಾದ ಆಮ್ಲಜನಕವನ್ನು ಕೊಂಡೊಯ್ಯುವ ಕೆಂಪು ರಕ್ತ ಕಣಗಳ (Red blood cells) ಸಂಖ್ಯೆ ಕಡಿಮೆ ಆಗಿ ನಿಮ್ಮಲ್ಲಿ ಹಿಮೋಗ್ಲೋಬಿನ್ ಅಂಶದ (Hemoglobin content) ಕೊರತೆ ಎದ್ದು ಕಾಣುತ್ತದೆ.ಇದರಿಂದ ನಿಮಗೆ ವಿಪರೀತವಾದ ಆಯಾಸ ಮತ್ತು ದೇಹ ದೌರ್ಬಲ್ಯ (Fatigue and body weakness) ಸಮಸ್ಯೆ ಕಾಡುತ್ತದೆ. ಆದರೆ ಹಸಿ ಬಟಾಣಿ ಕಾಳುಗಳಲ್ಲಿ ಯಥೇಚ್ಛವಾದ ಕಬ್ಬಿಣದ ಅಂಶ ಇರುವುದರಿಂದ ನಿಮ್ಮ ದೇಹದ ಕಬ್ಬಿಣದ ಅಂಶದ ಸಮತೋಲನತೆಯನ್ನು ಕಾಯ್ದುಕೊಳ್ಳುವಲ್ಲಿ ಇದು ನೆರವಾಗುತ್ತದೆ.

ಹಸಿ ಬಟಾಣಿ ಕಾಳುಗಳಲ್ಲಿ (Raw peace) ನಿಮ್ಮ ದೇಹದ ರೋಗ – ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ವಿಟಮಿನ್ ಸಿ (Vitamin C) ಅಂಶ ಇದೆ. ಹಾಗಾಗಿ ಇದೊಂದು ಅತ್ಯುತ್ತಮ ಆಹಾರ ಎಂದು ಈಗಿನ ಕೊರೊನ ಸಂಕಷ್ಟದಲ್ಲಿ ತಿಳಿದುಕೊಳ್ಳಬಹುದು.ಇಷ್ಟೇ ಅಲ್ಲದೆ ಹಸಿ ಬಟಾಣಿ (Sweet Peace) ಕಾಳುಗಳಲ್ಲಿ ಅಂಟಿ – ಆಕ್ಸಿಡೆಂಟ್ ಅಂಶಗಳು ಕೂಡ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ.ಇದರಲ್ಲಿರುವ ಫೈಟೋ – ಅಲೆಕ್ಸಿನ್ (Phyto – Alexin) ಎಂಬ ಅಂಟಿ – ಆಕ್ಸಿಡೆಂಟ್ ಅಂಶ ಹೊಟ್ಟೆಯ ಹಾಗೂ ಕರುಳಿನ ಭಾಗದ ಹುಣ್ಣುಗಳನ್ನು ಸರಿ ಪಡಿಸಿ ಕರುಳಿನ ಕ್ಯಾನ್ಸರ್ (Bowel cancer) ಅಥವಾ ಹೊಟ್ಟೆಯ ಕ್ಯಾನ್ಸರ್ ಸಮಸ್ಯೆಯನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.
ನಮ್ಮ ಹೃದಯದ ಆರೋಗ್ಯ (Heart health) ಒಂದು ಸರಿ ಇದ್ದರೆ ನಮಗೆ ಪರೋಕ್ಷವಾಗಿ ಎದುರಾಗುವ ಹಲವಾರು ಆರೋಗ್ಯ ಸಮಸ್ಯೆಗಳಿಂದ (Health problems) ನಾವು ಪಾರಾಗಬಹುದು. ಕೆಲವರಿಗೆ ಸಣ್ಣ ವಯಸ್ಸಿನಲ್ಲಿ ಯಾವುದೋ ಕಾರಣದಿಂದ ಹೃದಯಾಘಾತವಾಗುವ (Heart attack) ಸಾಧ್ಯತೆ ಇರುತ್ತದೆ.
ಇನ್ನು ಕೆಲವರಿಗೆ ದೇಹದಲ್ಲಿ ರಕ್ತದ ಒತ್ತಡದ ಏರುಪೇರಾಗಿ ಪಾರ್ಶ್ವವಾಯು ಎದುರಾಗುವ ಸಂಭವವಿರುತ್ತದೆ. ಕೆಲವರು ದೇಹದಲ್ಲಿ ತಮ್ಮ ರಕ್ತದ ಹರಿವಿನಲ್ಲಿ ಸಕ್ಕರೆ (Sugar in the bloodstream) ಪ್ರಮಾಣದ ಸಮತೋಲನತೆ ಯನ್ನು ಕಾಯ್ದುಕೊಳ್ಳದೇ ಮಧುಮೇಹವನ್ನು ತಂದುಕೊಂಡು ಹೃದಯಕ್ಕೆ ಹಾನಿ ಮಾಡಿಕೊಳ್ಳುತ್ತಾರೆ.ಹಾಗಾಗಿ ಈ ಎಲ್ಲಾ ಗುಂಪಿನ ರೋಗಿಗಳಿಗೆ ಹಸಿ ಬಟಾಣಿ ಅಥವಾ ಹಸಿರು ಬಟಾಣಿ ಕಾಳುಗಳಲ್ಲಿ ಹೃದಯದ ಆರೋಗ್ಯವನ್ನು (Heart health) ಕಾಪಾಡುವಂತಹ ಗುಣ ಲಕ್ಷಣಗಳಿವೆ ಎಂದು ಹೇಳಬಹುದು.