Visit Channel

ಮೂಲಂಗಿ ಸೇವಿಸುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳೇನು? ; ಇಲ್ಲಿದೆ ಮಾಹಿತಿ

Raddish

ಮೂಲಂಗಿ(Raddish) ಈ ಪದದ ಮೂಲ ಪದ ಲ್ಯಾಟಿನಲ್ಲಿ ರಾಡಿಕ್ಸ್, ಇಂಗ್ಲಿಷ್ನಲ್ಲಿ Radish ಎಂದಾಗುತ್ತದೆ. ರಾಡಿಕ್ಸ್ ಪದದ ಅರ್ಥ ಬೇರು ಅಥವಾ ಮೂಲ ಎಂದಾಗುತ್ತದೆ. ಇದನ್ನು ಪ್ರಪಂಚದಾದ್ಯಂತ ಎಲ್ಲ ಕಡೆಯಲ್ಲಿಯೂ ಬೆಳೆಯುತ್ತಾರೆ. ಮೂಲಂಗಿಯಲ್ಲೂ ವಿವಿಧ ಪ್ರಕಾರ ವರ್ಗಗಳಿವೆ. ಮೂಲಂಗಿಯಲ್ಲಿ ವಿಶೇಷವಾಗಿ ಸ್ವಲ್ಪ ಖಾರದ ರುಚಿಯಲ್ಲಿ ಅದರ ಗುಣ ಧರ್ಮ ಇದೆ. ಮೂಲಂಗಿ ಋತುಗಳ ಅನುಸಾರವಾಗಿ ಬೆಳೆಯುತ್ತಾರೆ. ಅದರಲ್ಲಿ ವಿವಿಧ ಗಾತ್ರದ ಬಣ್ಣಗಳಲ್ಲಿ ಬೆಳೆಯುತ್ತಾರೆ. ಇದರಲ್ಲಿ ಹಲವು ಖನಿಜಾಂಶಗಳು ಮತ್ತು ಜೀವಸತ್ವಗಳು ಹಾಗೂ ವಿಟಮಿನ್ಗಳು ಹೇರಳವಾಗಿ ತುಂಬಿವೆ.

Veggie

ಇದನ್ನು ನಿಯಮಿತ ಕ್ರಮದಲ್ಲಿ ಸೇವಿಸುತ್ತಾ ಬಂದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ನಮ್ಮನ್ನ ಅನೇಕ ರೋಗದಿಂದ ದೂರವಿಡುತ್ತದೆ. ಮೂಲಂಗಿಯಲ್ಲಿ ಅನೇಕ ಪೋಷಕಾಂಶಗಳು ವಿಟಮಿನ್ಗಳು ಮತ್ತು ಅನೇಕ ಸತ್ವಗಳಿಂದ ತುಂಬಿವೆ. ರೈಬೋಪ್ಲಾವಿನ್ (ಬಿ1), ನಿಯಾಸಿನ್(ಬಿ3), ಪಾಂಟೊಥೆಮಿಕ ಆಮ್ಲ (ಬಿ5), ವಿಟಮಿನ್ (ಬಿ6) ಪೋಲೇಟ್ (ಬಿ9), ವಿಟಮಿನ್ (ಸಿ), ಕ್ಯಾಲ್ಸಿಯಂ, ಕಬ್ಬಿಣ ಸತ್ವ, ಮೆಗ್ನೆಸಿಯಂ, ಮಾಂಗನೀಸ್, ರಂಜಕ ಪೋಟಾಸಿಯಂ ಸತ್ವಗಳಿಂದ ಥಯಾಮಿನ್ ನಾರಿನಾಂಶಗಳಿಂದ ತುಂಬಿ ಅನೇಕ ರೋಗಗಳ ವಿರುದ್ದ ಹೋರಾಡಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೂಲಂಗಿ ಮತ್ತು ಅದರ ಸೊಪ್ಪು ಹಸಿಯಾಗಿಯೂ ಮತ್ತು ಅಡುಗೆಯಲ್ಲಿಯೂ ಬಳಸಬಹುದು. ಮೂಲಂಗಿ ಮತ್ತು ಅದರ ಸೊಪ್ಪು ತಿನ್ನುವುದರಿಂದ ಆಗುವ ಲಾಭಗಳು ಹೀಗಿವೆ. ಕ್ಯಾನ್ಸರ್ ತಡೆಗಟ್ಟುತ್ತದೆ : ಮೂಲಂಗಿಯಲ್ಲಿ ವಿಟಮಿನ್ ಸಿ ಹೇರಳವಾಗಿರುವದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವದರಿಂದ, ಕ್ಯಾನ್ಸರ್ ವಿರುದ್ದ ಹೋರಾಡುತ್ತದೆ ಹಾಗೂ ಪ್ರಥಮ ಹಂತದಲ್ಲಿ ಕ್ಯಾನ್ಸರ್ ಕಂಡು ಬಂದಾಗ ಹೆಚ್ಚಾಗಿ ಮೂಲಂಗಿ ತಿನ್ನವುದು ಉತ್ತಮ. ಮೂಲವ್ಯಾಧಿ ತಡೆಗಟ್ಟುತ್ತದೆ : ಮೂಲಂಗಿಯಲ್ಲಿ ಹೆಚ್ಚು ನಾರಿನಾಂಶ ಇರುವುದರಿಂದ ಜಿರ್ಣಾಂಗ ವ್ಯವಸ್ಥೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಮಲಬದ್ದತೆ ತಡೆಯುತ್ತದೆ.

Raddish


ಅಸ್ತಮಾ ಮತ್ತು ಮಧುಮೇಹ ತಡೆಯುತ್ತದೆ : ನಿಯಮಿತವಾಗಿ ಅಸ್ತಮಾ(Asthama) ಮತ್ತು ಮಧುಮೇಹ(Diabities) ರೋಗಿಗಳು ಮೂಲಂಗಿ ಸೊಪ್ಪು ಸೇವಿಸುತ್ತಾ ಬಂದರೆ ಅಸ್ತಮಾ ಮತ್ತು ಮಧುಮೇಹ ರೋಗವನ್ನು ನಿಯಂತ್ರಣದಲ್ಲಿಡುತ್ತದೆ. ಚೇಳಿನ ವಿಷ ತಡೆಯುತ್ತದೆ : ಯಾರಿಗಾದರು ಚೇಳು ಕುಟುಕಿದಾಗ ಅದರ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಚೆನ್ನಾಗಿ ಅರೆದು, ಆ ಜಾಗಕ್ಕೆ ಹಚ್ಚಿದರೆ ವಿಷ ದೇಹಕ್ಕೆ ಎರುವುದನ್ನು ನಿಲ್ಲಿಸುತ್ತದೆ. ಮೂತ್ರಪಿಂಡಗಳ ಸಮಸ್ಯೆಗಳನ್ನು ತಡೆಯುತ್ತದೆ : ಮೂತ್ರಕೋಶ ಮತ್ತು ಮೂತ್ರಪಿಂಡಗಳ ಕಾರ್ಯ ಹೆಚ್ಚಿಸುತ್ತದೆ. ಮೂಲಂಗಿ ನಿಯಮಿತವಾಗಿ ಸೇವಿಸುತ್ತಾ ಬಂದರೆ ಮೂತ್ರಕೋಶ ಮತ್ತು ಮೂತ್ರ ಪಿಂಡಗಳು ಶುದ್ದವಾಗುತ್ತವೆ ಹಾಗೂ ಊರಿ ಮೂತ್ರವನ್ನು ತಡೆಯುತ್ತದೆ.


ತೂಕ ಇಳಿಕೆ ಪ್ರಮುಖ ಪಾತ್ರ : ಮೂಲಂಗಿ ಸೇವಿಸುವುದರಿಂದ ಬೇಗ ಹಸಿವು ಆಗುವುದಿಲ್ಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ದೇಹದ ತೂಕ ಇಳಿಸುವುದಕ್ಕೆ ನೆರವಾಗುತ್ತದೆ. ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವದರಿಂದ ಕಣ್ಣು, ಮೂಗು, ಬಾಯಿ ಮತ್ತು ಗಂಟಲಿನ ಸಮಸ್ಯೆಯನ್ನು ನಿವಾರಿಸುತ್ತದೆ. ಪ್ರತಿ ದಿನ ಹಸಿ ಮೂಲಂಗಿಯನ್ನು ಸೇವಿಸುವುದು ಅತಿ ಉತ್ತಮ. ಯಾವಾಗಲೂ ಸದಾ ಹಸಿರಿರುವಾಗ ತಿನ್ನುವುದು ಮತ್ತು ಅಡುಗೆಗೆ ಬಳಕೆ ಮಾಡುವುದು ಉತ್ತಮ. ಅದನ್ನು ಫ್ರಿಡ್ಜ್ ಸಾಧನದಲ್ಲಿಟ್ಟರೆ ಮೂಲಂಗಿಯಲ್ಲಿರುವ ನೀರಿನಾಂಶ ಹೆಚ್ಚಾಗಿರುವುದರಿಂದ ಕೊಳೆಯಲು ಪ್ರಾರಂಭವಾಗುತ್ತದೆ.

  • ರಾಘವೇಂದ್ರ, ಬೆಂಡ್ಲಗಟ್ಟಿ (ಉ.ಕ)

Latest News

Russia
ದೇಶ-ವಿದೇಶ

ಜನಸಂಖ್ಯೆ ಹೆಚ್ಚಳಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ರೆ 13 ಲಕ್ಷ ಬಹುಮಾನ : ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

ರಷ್ಯಾದ ರಾಜಕೀಯ(Russia Politics) ಮತ್ತು ಭದ್ರತಾ ತಜ್ಞ ಡಾ ಜೆನ್ನಿ ಮ್ಯಾಥರ್ಸ್, ಟೈಮ್ಸ್ ರೇಡಿಯೊದಲ್ಲಿ ಈ ಕುರಿತು ಮಾತನಾಡಿ, “ಮದರ್ ಹೀರೋಯಿನ್” ಎಂದು ಕರೆಯಲ್ಪಡುವ ಬಹುಮಾನ ಯೋಜನೆ

Dakshina Kannada
ರಾಜ್ಯ

ವಿಜಯಟೈಮ್ಸ್ ಇಂಪ್ಯಾಕ್ಟ್ ; ಬಂಟ್ವಾಳ ಸೇತುವೆಯ ದುಸ್ಥಿತಿ ನೋಡಲು ದಿಢೀರನೇ ಬಂದ ಅಧಿಕಾರಿಗಳು!

ಕಳಪೆ ಕಾಮಗಾರಿ ದುರಂತದ ಬಗ್ಗೆ ವಿಜಯಟೈಮ್ಸ್ ತಂಡ ಮಾಡಿದ್ದ ವರದಿಗೆ ಅಧಿಕಾರಿಗಳು ಈಗ ದಿಢೀರ್ ಎಚ್ಚೆತ್ತುಕೊಂಡಿದ್ದಾರೆ.

IT Minister
ದೇಶ-ವಿದೇಶ

5G ಬಿಡುಗಡೆಗೆ ತಯಾರಿ ಮಾಡಿಕೊಳ್ಳಿ : ಟೆಲಿಕಾಂ ಕಂಪನಿಗಳಿಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಸೂಚನೆ

ಇನ್ನು ಏರ್ಟೆಲ್(Airtel) ಮತ್ತು ಜಿಯೋ(Jio) ಈ ತಿಂಗಳ ಕೊನೆಯಲ್ಲಿ ತಮ್ಮ 5G ಸೇವೆಗಳ ಮೊದಲ ಹಂತವನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.